ಬ್ರೇಕಿಂಗ್ ನ್ಯೂಸ್
20-04-22 06:26 pm Mangalore Correspondent ಕ್ರೈಂ
ಮಂಗಳೂರು, ಎ.20: ಹಿಂದುಗಳ ವಿರುದ್ಧ ಕೋಮು ದ್ವೇಷದ ಪೋಸ್ಟ್ ಹಾಕಿ, ಪ್ರಚೋದನೆ ನೀಡುತ್ತಿದ್ದ ಪ್ರಕರಣದಲ್ಲಿ ಮಂಗಳೂರು ಸೈಬರ್ ಪೊಲೀಸರು ಬೆಳ್ತಂಗಡಿ ಮೂಲದ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿಯ ಅಜ್ಮಲ್ ಎಂಬ ಯುವಕ ಬಂಧಿತ. ತಿಂಗಳ ಹಿಂದೆ ಹಿಜಾಬ್ ವಿವಾದ ಉಂಟಾಗಿದ್ದ ವೇಳೆ ಮಂಗಳೂರಿನ ರಥಬೀದಿಯ ದಯಾನಂದ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿತ್ತು. ಈ ಸಂದರ್ಭದಲ್ಲಿ ಎಬಿವಿಪಿ ವಿದ್ಯಾರ್ಥಿಯೊಬ್ಬ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಮಾತನಾಡಿದ್ದಾನೆಂದು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಾಕಲಾಗಿತ್ತು. ಈತನನ್ನು ಶಿವಮೊಗ್ಗದ ಹರ್ಷನ ರೀತಿಯಲ್ಲೇ ಕೊಲೆ ಮಾಡುತ್ತೇವೆ, ಚರಂಡಿಯಲ್ಲಿ ಶವ ಬಿಸಾಕುತ್ತೇವೆ ಎಂದು ಪೋಸ್ಟ್ ಮಾಡಿದ್ದು ವೈರಲ್ ಆಗಿತ್ತು.
ಘಟನೆ ಬಗ್ಗೆ ಎಬಿವಿಪಿ ವಿದ್ಯಾರ್ಥಿಗಳು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಇದನ್ನು ಯಾರು ಪೋಸ್ಟ್ ಮಾಡಿದ್ದೆಂದು ತನಿಖೆ ನಡೆಸಿದಾಗ, ಮಾರಿಗುಡಿ ಎನ್ನುವ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ಪೇಜಲ್ಲಿ ಪೋಸ್ಟ್ ಮಾಡಿದ್ದು ಕಂಡುಬಂದಿತ್ತು. ಮಂಗಳೂರು ಸೈಬರ್ ಠಾಣೆಯ ಜಾಲತಾಣದ ಮೇಲೆ ನಿಗಾ ಇಡುವ ಸಿಬಂದಿ ಪರಿಶೀಲನೆ ನಡೆಸಿದಾಗ, ವಿದೇಶಿ ಸಿಮ್ ಬಳಸಿ ಪೋಸ್ಟ್ ಮಾಡಿದ್ದು ಪತ್ತೆಯಾಗಿತ್ತು. ಅಜ್ಮಲ್ ಎಂಬ ಯುವಕನ ಚಿಕ್ಕಪ್ಪ ವಿದೇಶದಲ್ಲಿದ್ದು, ಅವರ ಹೆಸರಲ್ಲಿದ್ದ ವಿದೇಶಿ ಸಿಮ್ ಅನ್ನು ಅಜ್ಮಲ್ ಬಳಸುತ್ತಿದ್ದ. ಅದೇ ಸಿಮ್ ಬಳಸ್ಕೊಂಡು ಫೇಸ್ಬುಕ್, ಇನ್ ಸ್ಟಾ ಗ್ರಾಮ್ ಸೇರಿದಂತೆ ಜಾಲತಾಣಗಳ ನಕಲಿ ಖಾತೆಗಳನ್ನು ಮಾಡಿಕೊಂಡಿದ್ದ ಅಜ್ಮಲ್ ಅದರಲ್ಲಿ ಹಿಂದು ದ್ವೇಷಿ, ಕೋಮು ಪ್ರಚೋದಕ ಪೋಸ್ಟ್ ಗಳನ್ನು ಹಾಕುತ್ತಿದ್ದ.
ಇದಲ್ಲದೆ, ಶಿವಾಜಿ ಸೇರಿದಂತೆ ಹಿಂದುಗಳು ಆರಾಧಿಸುವ ಐತಿಹಾಸಿಕ ಪುರುಷರ ಬಗ್ಗೆಯೂ ಅವಹೇಳನಕಾರಿ ಚಿತ್ರಿಸಿ ಪೋಸ್ಟ್ ಹಾಕಿದ್ದ. ತನಿಖೆಯ ವೇಳೆ ಅಜ್ಮಲ್ ಬೆಳ್ತಂಗಡಿಯಲ್ಲಿದ್ದುಕೊಂಡೇ ವಿದೇಶಿ ಸಿಮ್ ಬಳಸುತ್ತಿರುವುದು ಪತ್ತೆಯಾಗಿದ್ದು, ವಿದೇಶದಲ್ಲಿದ್ದು ಆಪರೇಟ್ ಮಾಡುವ ರೀತಿ ಬಿಂಬಿಸಿ ಪೊಲೀಸರನ್ನು ಯಾಮಾರಿಸಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿ, ಸೈಬರ್ ಠಾಣೆಯಲ್ಲಿ ಕೋಮು ದ್ವೇಷ ಹರಡುವುದರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಈ ಹಿಂದೆ ಕಟೀಲು ದೇವರನ್ನೂ ಇದೇ ರೀತಿ ಅವಹೇಳನಕಾರಿ ಚಿತ್ರಿಸಿ ಪೋಸ್ಟ್ ಹಾಕಲಾಗಿತ್ತು. ಮಂಗಳೂರು ಮುಸ್ಲಿಮ್ಸ್ ಎನ್ನುವ ಪೇಜ್ ನಲ್ಲಿ ಹಿಂದು ದೇವರ ನಿಂದೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಿದೇಶದಲ್ಲಿ ಕುಳಿತುಕೊಂಡು ಈ ರೀತಿ ಮಾಡುತ್ತಿದ್ದಾರೆ, ಪತ್ತೆ ಮಾಡುವುದು ಕಷ್ಟಕರ ಎಂದು ಹೇಳಿದ್ದರು. ಕೇಸು ದಾಖಲಾಗಿದ್ದರೂ, ಹಿಂದು ದೇವರನ್ನು ನಿಂದಿಸಿ ಪೋಸ್ಟ್ ಮಾಡಿದ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
A youth was arrested for posting objectionable and threatening content disrupting social harmony on social media.The arrested is identified as Mohammed Azmal (20), a resident of Beltangady. The accused reportedly created an Instagram account titled mari_gudi_5. In the month of March, when the Hijab row took place in a college at Car Street.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm