ಬ್ರೇಕಿಂಗ್ ನ್ಯೂಸ್
07-04-22 06:26 pm Bengaluru Correspondent ಕ್ರೈಂ
ಬೆಂಗಳೂರು, ಎ.7: ಹಣದ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಉದ್ಯಮಿ ತಂದೆಯೇ ಮಗನನ್ನು ಥಿನ್ನರ್ ಸುರಿದು ಬೆಂಕಿ ಹಚ್ಚಿ ಕೊಂದ ಘಟನೆ ಚಾಮರಾಜಪೇಟೆ ಬಳಿಯ ಆಜಾದ್ ನಗರದಲ್ಲಿ ನಡೆದಿದೆ. ಈ ಬಗ್ಗೆ ತಂದೆಯ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಎ.1ರಂದು ಆಜಾದ್ ನಗರದ ಗೋಡೌನ್ ಬಳಿ ತಂದೆ – ಮಗನ ಮಧ್ಯೆ ಗಲಾಟೆ ನಡೆದಿತ್ತು. 12 ಸಾವಿರ ಹಣ ಲೆಕ್ಕದಲ್ಲಿ ಕಡಿಮೆ ಬಂದಿದ್ದಕ್ಕೆ ತಂದೆ ಸುರೇಂದ್ರ, ಮಗ ಅರ್ಪಿತ್ ಬಳಿ ಪ್ರಶ್ನೆ ಮಾಡಿದ್ದರು. ಈ ವೇಳೆ ತಂದೆ ಗಲಾಟೆ ಮಾಡಿದ್ದಲ್ಲದೆ, ಮಗನ ಮೇಲೆಯೇ ಕಚೇರಿಯಲ್ಲಿದ್ದ ಥಿನ್ನರ್ ಬಾಟಲಿಯನ್ನು ಸುರಿದಿದ್ದಾನೆ. ಭಯಗೊಂಡ ಅರ್ಪಿತ್ ಕಚೇರಿಯಿಂದ ಹೊರಕ್ಕೆ ಓಡಿ ಬಂದಿದ್ದು, ರಸ್ತೆಯಲ್ಲಿದ್ದಾಗಲೇ ತಂದೆ ಸುರೇಂದ್ರ ಬೆಂಕಿ ಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾನೆ. ಮಗನಿಗೆ ಬೆಂಕಿ ಹಚ್ಚಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಕೂಡಲೇ ಸ್ಥಳದಲ್ಲಿದ್ದವರು ಅರ್ಪಿತ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ತಂದೆ ಸುರೇಂದ್ರ, ಒಂದು ಕೋಟಿ ವೆಚ್ಚದಲ್ಲಿ ಮಗನಿಗಾಗಿ ಫ್ಯಾಬ್ರಿಕೇಶನ್ ಉದ್ಯಮ ಮಾಡಿಕೊಟ್ಟಿದ್ದರು. ಮೂರು ವರ್ಷಗಳಿಂದ ತಂದೆ- ಮಗ ಇಬ್ಬರೂ ಸೇರಿಕೊಂಡು ವ್ಯಾಪಾರ ನೋಡಿಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಇದರ ನಡುವಲ್ಲೇ ಅರ್ಪಿತ್ ಗೆ ಹೆಣ್ಣು ನೋಡಿದ್ದು ಮದುವೆಗೂ ಸಿದ್ಧತೆ ನಡೆದಿತ್ತು. ಮೊನ್ನೆ ಘಟನೆ ನಡೆದ ಮರುದಿನ ಹೆಣ್ಣಿನ ಕಡೆಯವರು ಅರ್ಪಿತ್ ಮನೆಗೆ ಬರುವವರಿದ್ದರು. ಈ ಬಗ್ಗೆ ಅರ್ಪಿತ್ ತನ್ನ ಸ್ನೇಹಿತರಲ್ಲೂ ಹೇಳಿಕೊಂಡಿದ್ದ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಸಂಜೀವ ಪಾಟೀಲ್, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲಿ ಮನೆ ರಿನೋವೇಶನ್ ಆಗುತ್ತಿದ್ದುದರಿಂದ ಸ್ಥಳದಲ್ಲಿ ಕಾರ್ಮಿಕರು ಮತ್ತು ಇತರರು ಸೇರಿದ್ದರು. ಈ ವೇಳೆ, ತಂದೆ- ಮಗ ಜಗಳ ಮಾಡಿಕೊಂಡು ಹೊರಬಂದಿದ್ದು ತಂದೆಯೇ ಬೆಂಕಿ ಹಚ್ಚಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮೊದಲೇ ಆತನ ಮೇಲೆ ಥಿನ್ನರ್ ಹಾಕಿದ್ದರಿಂದ ಬೆಂಕಿ ಹತ್ತಿಕೊಂಡು ಘಟನೆ ಆಗಿದೆ. ಎರಡು- ಮೂರು ವರ್ಷಗಳಿಂದ ಬ್ಯುಸಿನೆಸ್ ವಿಚಾರದಲ್ಲಿ ತಂದೆ- ಮಗ ಗಲಾಟೆ ಮಾಡಿಕೊಂಡಿದ್ದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.
In a shocking incident, a man allegedly set his son on fire over a financial dispute in broad daylight with chilling videos showing him engulfed in flames trying desperately to save himself in Bengaluru. According to police, 55-year old Surendra, a native of Rajasthan allegedly threw paint thinner on his 25-year old son Arpit on the roadside and then set him on fire on April 1 at Azad Nagar near Chamarajpet. The chilling video shows Arpit engulfed in flames trying desperately to save himself. He succumbed to burn injuries a week later on Thursday.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm