ಬ್ರೇಕಿಂಗ್ ನ್ಯೂಸ್
04-04-22 08:22 pm HK Desk news ಕ್ರೈಂ
ಲಕ್ನೋ, ಎ.4: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಕ್ಷೇತ್ರದ ಗೋರಖನಾಥ್ ದೇವಸ್ಥಾನದ ಆವರಣಕ್ಕೆ ಕತ್ತಿ ಹಿಡಿದು ನುಗ್ಗಿದ ಆಗಂತುಕನೊಬ್ಬ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಭಾನುವಾರ ರಾತ್ರಿ ವ್ಯಕ್ತಿ ದೇವಸ್ಥಾನದ ಆವರಣಕ್ಕೆ ಬಂದಿದ್ದು, ಸಿಬಂದಿ ಆತನನ್ನು ಬೆನ್ನಟ್ಟಿ ಹಿಡಿಯುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೃತ್ಯವನ್ನು ಉತ್ತರ ಪ್ರದೇಶ ಗೃಹ ಸಚಿವಾಲಯ ಭಯೋತ್ಪಾದನಾ ಕೃತ್ಯ ಎಂದು ಹೇಳಿದ್ದು, ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿದೆ. ಬಂಧಿತ ಯುವಕನನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದ್ದು, ಆತ ಕೆಮಿಕಲ್ ಇಂಜಿನಿಯರ್ ಓದಿದ್ದ ವ್ಯಕ್ತಿ ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಘಟನೆ ಸಂದರ್ಭದಲ್ಲಿ ಇಬ್ಬರು ಸೆಕ್ಯುರಿಟಿ ಸಿಬಂದಿಗೆ ಗಾಯವಾಗಿದೆ.
ಆಗಂತುಕನನ್ನು ಸಕಾಲದಲ್ಲಿ ಹಿಡಿದು ಬಂಧಿಸಿದ ಇಬ್ಬರು ಪೊಲೀಸ್ ಸಿಬಂದಿಗೆ ಉತ್ತರ ಪ್ರದೇಶ ಸರಕಾರ ತಲಾ 5 ಲಕ್ಷ ಬಹುಮಾನ ಘೋಷಿಸಿದೆ. ಅಲ್ಲದೆ, ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿದೆ. ಆರೋಪಿ ಆಹ್ಮದ್ ಮುರ್ತಾಜಾ 2015ರಲ್ಲಿ ಐಐಟಿ ಪದವಿ ಪೂರೈಸಿದ್ದು ಆನಂತರ ಎರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಈ ನಡುವೆ ಮಾನಸಿಕ ಖಿನ್ನತೆಗೊಳಗಾಗಿ ಪತ್ನಿಯ ಜೊತೆಗೂ ಜಗಳ ಮಾಡಿದ್ದ. ಇದೇ ಕಾರಣದಿಂದ ದೇವಸ್ಥಾನ ಆವರಣಕ್ಕೆ ನುಗ್ಗಿರುವ ಸಾಧ್ಯತೆಯಿದೆ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
The incident at Gorakhnath temple was part of a "serious conspiracy", the Uttar Pradesh government's Home department said in a statement on Monday.Ahmad Murtaza Abbasi, a chemical engineer, attacked security personnel deployed at the Gorakhnath temple in UP's Gorakhpur on Sunday night. A video of the incident shows the accused chasing security personnel with a sickle.Two jawans of the Uttar Pradesh Provincial Armed Constabulary suffered injuries in the incident.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm