ಬ್ರೇಕಿಂಗ್ ನ್ಯೂಸ್
24-03-22 10:38 pm HK Desk news ಕ್ರೈಂ
ಬಾಗಲಕೋಟೆ, ಮಾ.24: ಮುಸ್ಲಿಂ ಯುವಕನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಿಂದೂಗಳ ಬಗ್ಗೆ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದ ಹಿಂದು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿದ್ದಾರೂಢ ಶ್ರೀಕಾಂತ್ ಬಂಧಿತ. ಈತನನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಬಂಧಿತ ಆರೋಪಿ ಮುಸ್ತಾಕ್ ಅಲಿ ಹೆಸರಲ್ಲಿ ಹಿಂದುಗಳನ್ನು ದ್ವೇ಼ಷಿಸಿ ಪೋಸ್ಟ್ ಹಾಕುತ್ತಿದ್ದ. ಈ ಬಗ್ಗೆ ಹಿಂದುಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿ, ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಸಿದ್ದಾರೂಢ ಶ್ರೀಕಾಂತ್ ಬಾಗಲಕೋಟೆಯ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿದ್ದಿಕುರಬೇಟ ಗ್ರಾಮದ ನಿವಾಸಿ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಬಳಿಕ ಈ ರೀತಿ ಪೋಸ್ಟ್ ಹಾಕಲು ಆರಂಭಿಸಿದ್ದ.
ಹಿಂದೂಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದು ಇಂತಹ ಪೋಸ್ಟ್ ಹಾಕಿ ಹಿಂದೂಗಳನ್ನು ಒಗ್ಗಟ್ಟಾಗಿಸಲು ಪ್ರಯತ್ನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಹೇಳಿರೋದಾಗಿ ತಿಳಿದು ಬಂದಿದೆ. ಇನ್ನು ಈತ ತನ್ನ ನಕಲಿ ಖಾತೆಗೆ “ಪಾಕಿಸ್ತಾನಿ ಮುಸ್ಲಿಂ” ಎಂದು ಗೂಗಲ್ ಸರ್ಚ್ ಮಾಡಿ ಟೋಪಿ ಹಾಕಿದ ಭಾರತೀಯ ಮುಸ್ಲಿಮನಂತೆ ಕಾಣುವ ಯಾರದ್ದೋ ಫೋಟೊ ಹಾಕಿದ್ದ.

ಎಷ್ಟೇ ಬುದ್ದಿವಂತಿಕೆ ಉಪಯೋಗಿಸಿದರೂ ನಾವು ಬಿಡೋದಿಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಯಾರೂ ಮಾಡಬಾರದು ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.
Bagalkot Bank employee arrested for creating derogatory Facebook account and creating communal dispute.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm