ಬ್ರೇಕಿಂಗ್ ನ್ಯೂಸ್
18-03-22 06:17 pm Bengaluru Correspondent ಕ್ರೈಂ
ಬೆಂಗಳೂರು, ಮಾ.18: 23 ವರ್ಷದ ದಲಿತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಬಳಿಕ ಯುವತಿಯನ್ನು ಜಾತಿ ವಿಚಾರದಲ್ಲಿ ಮದುವೆಯಾಗಲು ನಿರಾಕರಿಸಿ ಪ್ರಿಯಕರನೇ ಬೆಂಕಿ ಹಚ್ಚಿ ಸುಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ವಿಜಯಪುರ ಜಿಲ್ಲೆಯ ಮೂಲದ ದಾನೇಶ್ವರಿ (23) ಎಂದು ಗುರುತಿಸಲಾಗಿದೆ. ಆರೋಪಿ ಶಿವಕುಮಾರ್ ಚಂದ್ರಶೇಖರ್ ಹರೇಹಾಳ ವಿರುದ್ಧ ಯುವತಿಯ ತಂಗಿ ಬೆಂಗಳೂರಿನಲ್ಲಿ ಪೊಲೀಸ್ ದೂರು ನೀಡಿದ್ದು ಜಾತಿ ನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿದೆ.
ದಾನೇಶ್ವರಿ ಮತ್ತು ಶಿವಕುಮಾರ್ ವಿಜಯಪುರ ಜಿಲ್ಲೆಯ ನಿವಾಸಿಗಳಾಗಿದ್ದು ಅಲ್ಲಿ ಒಂದೇ ಕಾಲೇಜಿನಲ್ಲಿ ಜೊತೆಯಾಗಿ ಇಂಜಿನಿಯರಿಂಗ್ ಮುಗಿಸಿದ್ದರು. ಅಲ್ಲಿದ್ದಾಗಲೇ ಪ್ರೀತಿ ನೆಪದಲ್ಲಿ ಇಬ್ಬರೂ ಸಂಬಂಧ ಇಟ್ಟುಕೊಂಡಿದ್ದರು. ಆಬಳಿಕ ಇಬ್ಬರು ಕೂಡ ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ಅಲ್ಲಿಯೂ ಸಂಬಂಧ ಮುಂದುವರಿಸಿದ್ದರು. ಆರೋಪಿ ಶಿವಕುಮಾರ್ ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ.
ಇತ್ತೀಚೆಗೆ ಮದುವೆಯ ಬಗ್ಗೆ ದಾನೇಶ್ವರಿ, ಹುಡುಗನ ಬಳಿ ಚರ್ಚೆ ನಡೆಸಿದ್ದು ತಂದೆ, ತಾಯಿ ಬಳಿ ಕೇಳಿಕೊಂಡು ಬರುವುದಾಗಿ ಹೇಳಿ ಆರೋಪಿ ಊರಿಗೆ ತೆರಳಿದ್ದ. ಆನಂತರ, ಮರಳಿ ಬಂದಿದ್ದ ಶಿವಕುಮಾರ್, ಹುಡುಗಿ ಕೆಳ ಜಾತಿಯವಳು, ಮದುವೆಯಾಗಲು ಹೆತ್ತವರು ನಿರಾಕರಿಸಿದ್ದಾರೆ ಎಂದು ಹೇಳಿದ್ದ. ಇದರಿಂದ ಚಿಂತೆಗೆ ಒಳಗಾಗಿದ್ದ ದಾನೇಶ್ವರಿ, ಶಿವಕುಮಾರ್ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು.
ಆದರೆ ಶಿವಕುಮಾರ್, ಹುಡುಗಿಯನ್ನು ನಿಂದಿಸಿದ್ದಲ್ಲದೆ ಜಾತಿ ಹೆಸರೇಳಿ ಅವಾಚ್ಯ ಪದಗಳಿಂದ ಬೈದು ಕಳಿಸಿದ್ದ. ಆನಂತರ ಆರೋಪಿ, ಮಾತುಕತೆಗೆಂದು ನಿರ್ಜನ ಪ್ರದೇಶಕ್ಕೆ ಬರಹೇಳಿದ್ದು ಅಲ್ಲಿರುವಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ದೂರಲಾಗಿದೆ. ಅರೆಬರೆ ಸುಟ್ಟು ಹೋಗಿದ್ದ ಯುವತಿಯನ್ನು ಬಳಿಕ ಆತನೇ ಆಸ್ಪತ್ರೆಗೆ ಒಯ್ದು ದಾಖಲಿಸಿದ್ದು ಬಳಿಕ ಎಸ್ಕೇಪ್ ಆಗಿದ್ದ. ಮಾರ್ಚ್ 15 ರಂದು ಯುವತಿ ದಾನೇಶ್ವರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪೊಲೀಸರು ಆರೋಪಿ ಯುವಕನ ವಿರುದ್ಧ ಜಾತಿ ನಿಂದನೆ ಕೇಸು ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ.
In a shocking development, a man has allegedly torched his partner belonging to the Dalit community, to death in Bengaluru, police said on Friday.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm