ಬ್ರೇಕಿಂಗ್ ನ್ಯೂಸ್
18-03-22 05:22 pm HK Desk news ಕ್ರೈಂ
ಸಕಲೇಶಪುರ, ಮಾ.18 : ಅಕ್ರಮ ಗೋಮಾಂಸ ವಿಷಯದಲ್ಲಿ ಹಿಂದು - ಮುಸ್ಲಿಂ ಜಗಳ ಆಗಿದ್ದು ಅದರ ನೆಪದಲ್ಲಿ ಕೊಲೆಯಾಗಿದ್ದು ನೋಡಿದ್ದೇವೆ. ಆದರೆ, ಇಲ್ಲೊಂದು ಮುಸ್ಲಿಂ ಗ್ಯಾಂಗ್ ಅಕ್ರಮ ಗೋಮಾಂಸ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ತಮ್ಮದೇ ಸಮುದಾಯದ ಯುವಕನನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಂದು ಹಾಕಿದ ಘಟನೆ ನಡೆದಿದೆ.
ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ನಿವಾಸಿ ಅಪ್ಸರ್ ಪಾಶ (32) ಮೃತಪಟ್ಟ ಯುವಕ. ಪಟ್ಟಣದಲ್ಲಿ ಗೋವನ್ನು ಕದ್ದು ತಂದು ಮನೆಯಲ್ಲೇ ಕಡಿದು ಮಾಂಸ ಮಾಡುವ ಜಾಲ ಸಕ್ರಿಯವಾಗಿದ್ದು ಅದೇ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ವೈಷಮ್ಯ ಉಂಟಾಗಿತ್ತು. ಅಕ್ರಮ ಗೋಮಾಂಸ ಮಾಡುವ ಹಾಜಿ ಖುರೇಷಿ ಕುಟುಂಬ ಹಾಗೂ ಕೊಲೆಯಾದ ಅಪ್ಸರ್ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯ ಇದೆ. ಹಾಜಿ ಖುರೇಷಿ ಕುಟುಂಬದವರು ಗೋವನ್ನು ಕಡಿದ ನಂತರ ಸ್ವಚ್ಛ ಮಾಡಿದ ನೀರನ್ನು ಮನೆ ಬಳಿಯ ಚರಂಡಿಯಲ್ಲಿ ಹರಿಯ ಬಿಡುತ್ತಿದ್ದರು. ರಕ್ತ ಇನ್ನಿತರ ತ್ಯಾಜ್ಯ ಜೊತೆಗೆ ಬಿಡುತ್ತಿದ್ದುದರಿಂದ ಅವು ಅಪ್ಸರ್ ಮನೆಯ ಮುಂದೆ ಚರಂಡಿಯಲ್ಲಿ ನಿಲ್ಲುತ್ತಿದ್ದ ಕಾರಣ ವಿಪರೀತ ದುರ್ವಾಸನೆ ಬೀರುತ್ತಿತ್ತು.

ಇದೇ ವಿಚಾರದಲ್ಲಿ ಕೆಲವು ತಿಂಗಳ ಹಿಂದೆ ಅಪ್ಸರ್ ಮನೆಯವರು ಹಾಜೀ ಖುರೇಷಿ ಕುಟುಂಬಕ್ಕೆ ಪ್ರಶ್ನೆ ಮಾಡಿದ್ದರಿಂದ ಸಣ್ಣ ಮಟ್ಟಿನ ಜಗಳವಾಗಿತ್ತು. ಇದಾದ ನಂತರ ಅಕ್ರಮ ಗೋ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪೋಲಿಸರು ಎರಡು, ಮೂರು ಬಾರಿ ಹಾಜಿ ಖುರೇಷಿಯವರ ಅಂಗಡಿಯಿಂದ ಗೋ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಇದಕ್ಕೆ ಅಪ್ಸರ್ ಕುಟುಂಬವೇ ಕಾರಣವೆಂದು ಆಗಾಗ ಅಪ್ಸರ್ ಕುಟುಂಬದ ಜೊತೆ ಹಾಜಿ ಖುರೇಷಿ ಗ್ಯಾಂಗ್ ಜಗಳ ಕಾಯುತ್ತಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿ ಅಪ್ಸರ್ ತಮ್ಮ ಇಮ್ರಾನ್ ಎಂಬಾತನಿಗೆ ಗುರುವಾರ ಬೆಳಗ್ಗೆ ಆಜಾದ್ ರಸ್ತೆಯಲ್ಲಿ ಹಾಜಿ ಖುರೇಷಿ ಮತ್ತವರ ಗ್ಯಾಂಗ್ ಹಲ್ಲೆ ನಡೆಸಿದೆ. ವಿಚಾರ ತಿಳಿದ ಅಪ್ಸರ್ ಸ್ಥಳಕ್ಕೆ ಆಗಮಿಸಿ ಅಲ್ಲಿದ್ದ ಗುಂಪಿಗೆ ಯಾರು ಹೊಡೆದಿದ್ದು ಎಂದು ಕೇಳಿದ್ದಾನೆ. ಈ ಸಂದರ್ಭದಲ್ಲಿ ಏಕಾಏಕಿ ಬಂದ ಹಾಜಿ ಖುರೇಷಿ ಗ್ಯಾಂಗ್ ಅಪ್ಸರ್ ಮೇಲೆ ಬಿದ್ದು ಹಲ್ಲೆ ನಡೆಸಿದೆ. ಹಾಜಿ ಖುರೇಷಿ ಗ್ಯಾಂಗ್ನ ಎಸಾನ್ ಖುರೇಷಿ ಎಂಬಾತ ಚೂರಿಯಿಂದ ಅಪ್ಸರ್ಗೆ ಇರಿದಿದ್ದಾನೆ. ತಕ್ಷಣ ಸ್ಥಳದಲ್ಲಿದ್ದವರು ಜಗಳ ಬಿಡಿಸಿ ಅಪ್ಸರ್ನನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಅಪ್ಸರ್ ಹಾಗೂ ಹಾಜಿ ಖುರೇಷಿ ಗ್ಯಾಂಗ್ ನಡುವೆ ಮತ್ತೆ ಹೊಡೆದಾಟ ನಡೆದಿದ್ದು ಭಯದ ವಾತಾವರಣ ಉಂಟಾಗಿತ್ತು. ಚೂರಿ ಇಳಿತಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅಪ್ಸರ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಒಟ್ಟಾರೆಯಾಗಿ ಪಟ್ಟಣದಲ್ಲಿ ಅಕ್ರಮ ಗೋಮಾಂಸ ಮಾಫಿಯಾಕ್ಕೆ ಒಂದು ಹೆಣ ಬಿದ್ದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಆಡಳಿತ ಹಾಗೂ ಪೋಲಿಸರು ಅಕ್ರಮ ಗೋ ಮಾಂಸ ಮಾರಾಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ರೀತಿಯ ಘಟನೆ ಆಗಿದೆ ಎಂದು ಕುಶಾಲನಗರ ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ.

ಸಕಲೇಶಪುರದಲ್ಲಿ ಯಾರು ಕೂಡ ದನದ ಮಾಂಸ ಮಾರಾಟ ಮಾಡಬಾರದು. ಮುಸ್ಲಿಂ ಸಾಬರು ಮಾತ್ರ ತಿನ್ನೋದಲ್ಲ. ಇತರ ಮಂದಿಯೂ ತಿನ್ನುತ್ತಾರೆ. ನಾವಂತೂ ದನ ತಿನ್ನುವುದಿಲ್ಲ. ಇಲ್ಲಿ ದನವನ್ನು ಕದ್ದು ತಂದು ಮಾಂಸ ಮಾಡುವುದಕ್ಕೆ ಯಾಕೆ ಅವಕಾಶ ಕೊಡುತ್ತೀರಿ. ಇದರ ಹಿಂದೆ ಗೋಮಾಂಸ ಮಾಫಿಯಾ ಇದೆ. ಈಗ ಅಮಾಯಕ ಯುವಕನ ಕೊಲೆ ಆಗಿದೆ, ನಾವು ಇದನ್ನು ಹಾಗೇ ಬಿಡುವುದಿಲ್ಲ. ಗೋಮಾಂಸ ಮಾಡುವುದನ್ನು ಪೊಲೀಸರು ನಿಲ್ಲಿಸಲಿ ಎಂದು ಆಸ್ಪತ್ರೆ ಆವರಣದಲ್ಲಿ ಸೇರಿದ್ದ ಅಪ್ಸರ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.
Sakleshpura 32 Year old man indulged in illegal cow slaughter at house, youth killed for questioning. Family approaches police station and requests to take necessary action.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm