ಬ್ರೇಕಿಂಗ್ ನ್ಯೂಸ್
05-03-22 08:42 pm Bengaluru Correspondent ಕ್ರೈಂ
ಬೆಂಗಳೂರು, ಮಾ.5 :ಇಂಟರ್ನೆಟ್, ವಾಟ್ಸಪ್ ಜಾಲತಾಣದ ಮೂಲಕ ಗಿರಾಕಿಗಳನ್ನು ಕುದುರಿಸಿ ಡ್ರಗ್ಸ್ ಪೂರೈಸುತ್ತಿದ್ದ ನೈಜೀರಿಯನ್ ಮೂಲದ ಡ್ರಗ್ ಪೆಡ್ಲರ್ ನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ನೆಲ್ಸನ್ ಬಂಧಿತ ಆರೋಪಿ. ಇಂಟರ್ನೆಟ್, ವಾಟ್ಸಪ್ ಕರೆಗಳ ಮೂಲಕ ಗಿರಾಕಿ ದೃಢಪಡಿಸಿ ಆನ್ ಲೈನಲ್ಲೇ ಹಣ ಪಡೆದು ಡ್ರಗ್ಸ್ ಅಡಗಿಸಿಟ್ಟ ಲೊಕೇಷನ್ ಕಳಿಸ್ತಿದ್ದ. ನಿರ್ಜನ ಪ್ರದೇಶದ ಪೊದೆ-ಮರ-ಗಿಡಗಳ ಎಡೆಯಲ್ಲಿ ಮೊದಲೇ ಡ್ರಗ್ಸ್ ತಂದಿಟ್ಟು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಲೊಕೇಷನ್ ಹಾಕುತ್ತಿದ್ದ. ಡ್ರಗ್ಸ್ ಅಡಗಿಸಿಟ್ಟಿರುವ ಸ್ಥಳದ ಫೋಟೋ ತೆಗೆದು ಗ್ರಾಹಕರ ಮೊಬೈಲಿಗೆ ಕಳುಹಿಸ್ತಿದ್ದ. ಅಲ್ಲಿಗೆ ಬರುತ್ತಿದ್ದ ಗಿರಾಕಿಗಳು ತಾವಾಗಿಯೇ ಡ್ರಗ್ಸ್ ಪಡೆದು ತೆರಳುತ್ತಿದ್ದರು. ಹೀಗಾಗಿ ಗಿರಾಕಿ ಮತ್ತು ಡ್ರಗ್ಸ್ ಪೂರೈಕೆದಾರನ ಬಗ್ಗೆ ನೇರ ಸಂಪರ್ಕ ಇರುತ್ತಿರಲಿಲ್ಲ.

ಇಂಜಿನಿಯರಿಂಗ್, ಮೆಡಿಕಲ್ ಸ್ಟೂಡೆಂಟ್ ಗಳೇ ಈತನಿಗೆ ಪ್ರಮುಖ ಗ್ರಾಹಕರಾಗಿದ್ದರು. ಬಂಧಿತನಿಂದ 25 ಲಕ್ಷ ರೂ. ಮೌಲ್ಯದ MDMA ಟ್ಯಾಬ್ಲೆಟ್ಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಜಿ ಹಳ್ಳಿ ಇನ್ಸ್ ಪೆಕ್ಟರ್ ಸಂತೋಷ್ ಮತ್ತು ತಂಡ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಕತರ್ನಾಕ್ ಪೆಡ್ಲರನ್ನು ಅರೆಸ್ಟ್ ಮಾಡಿದ್ದಾರೆ.


ಮತ್ತಿಬ್ಬರು ನೈಜೀರಿಯನ್ನರಿಂದ 50 ಲಕ್ಷದ ಡ್ರಗ್ಸ್ ವಶಕ್ಕೆ
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮತ್ತಿಬ್ಬರು ನೈಜೀರಿಯನ್ನು ಬಂಧಿಸಿದ್ದಾರೆ. ನೈಜಿರಿಯ ಪ್ರಜೆಗಳಾದ ಕ್ರಿಸ್ಟಿನ್ ಮತ್ತು ಜಾನ್ ಓಬಿನಾ ಬಂಧಿತರು. ಅವರಿಂದ 50 ಲಕ್ಷ ರೂ. ಮೌಲ್ಯದ 400 ಗ್ರಾಂ ಎಂಡಿಎಂಎ ಡ್ರಗ್ಸನ್ನು ವಶಕ್ಕೆ ಪಡೆಯಲಾಗಿದೆ. ಇವರು ಐಟಿ ಬಿಟಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Bangalore Three Nigerians drug peddlers arrested for selling drugs via online. Engineering and Medical students were the main target for their illegal drug business.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm