ಬ್ರೇಕಿಂಗ್ ನ್ಯೂಸ್
05-03-22 11:05 am Mangalore Correspondent ಕ್ರೈಂ
ಉಳ್ಳಾಲ, ಮಾ.5: ರಿಟ್ಝ್ ಕಾರಲ್ಲಿ ಬಂದ ಮುಸುಕುಧಾರಿಗಳು ಮೀನಿನ ಟೆಂಪೋವನ್ನು ತಡೆದು ಎರಡು ಲಕ್ಷ ರೂಪಾಯಿ ದರೋಡೆಗೈದು ವ್ಯಾಪಾರಿ ಮೇಲೆ ತಲವಾರಿನಿಂದ ಹಲ್ಲೆಗೈದ ಘಟನೆ ರಾ.ಹೆ. 66ರ ಆಡಂಕುದ್ರು ಎಂಬಲ್ಲಿ ನಡೆದಿದೆ.
ಉಳ್ಳಾಲ ಮುಕ್ಕಚ್ಚೇರಿಯ ಮೀನಿನ ವ್ಯಾಪಾರಿ ಮುಸ್ತಾಫ(47) ತಲವಾರಿನ ಏಟಿನಿಂದ ಗಂಭೀರ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 6.15ರ ವೇಳೆಗೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ಘಟನೆ ನಡೆದಿದೆ. ಮುಸ್ತಾಫ ಅವರು ಎಂದಿನಂತೆ ಬೆಳಗ್ಗೆ ತನ್ನ ಏಸ್ ಟೆಂಪೋದಲ್ಲಿ ಮಂಗಳೂರಿನ ದಕ್ಕೆಗೆ ಮೀನು ತರಲೆಂದು ಹೊರಟಿದ್ದರು. ಟೆಂಪೋದಲ್ಲಿ ಮಾಸ್ತಿಕಟ್ಟೆಯ ಮೂಸ ಎಂಬವರು ಜೊತೆಗೆ ಪಯಣಿಸುತ್ತಿದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ರಿಟ್ಝ್ ಕಾರು ಮುಸ್ತಾಫ ಅವರನ್ನ ತಡೆದು ನಿಲ್ಲಿಸಿದೆ.

ರಿಟ್ಝ್ ಕಾರಲ್ಲಿ ಮೂರು ಮುಸಕುಧಾರಿಗಳಿದ್ದು ಇಬ್ಬರು ಕೆಳಗಿಳಿದು ಮುಸ್ತಾಫ ಅವರಲ್ಲಿದ್ದ ಹಣದ ಬ್ಯಾಗನ್ನ ಕೊಡುವಂತೆ ಹೇಳಿದ್ದಾರೆ. ಟೆಂಪೋದಲ್ಲಿಯೇ ಇದ್ದ ಮುಸ್ತಾಫ ಅವರು ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಮುಸುಕುಧಾರಿಗಳು ತಲವಾರನ್ನ ಮುಸ್ತಾಫ ಅವರ ಕುತ್ತಿಗೆಗೆ ಇಟ್ಟು ಹಣ ಎಗರಿಸಿದ್ದು ವಿರೋಧಿಸಿದ ಮುಸ್ತಾಫ ಅವರು ತಲವಾರಿನ ಅಲಗನ್ನು ಗಟ್ಟಿಯಾಗಿ ಎರಡು ಕೈಗಳಲ್ಲಿ ಹಿಡಿದಿದ್ದು ಆಗಂತುಕರು ತಲವಾರನ್ನ ಎಳೆದಾಗ ಎರಡೂ ಕೈಗಳಿಗೂ ಗಂಭೀರ ಗಾಯಗಳಾಗಿದೆ.

ಮುಸ್ತಾಫ ಅವರಲ್ಲಿದ್ದ 2 ಲಕ್ಷ 5 ಸಾವಿರ ರೂಪಾಯಿಗಳನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಎಸಿಪಿ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಸಿಸಿ ಕ್ಯಾಮೆರಾ ಫೂಟೇಜನ್ನ ಪರಿಶೀಲನೆ ನಡೆಸಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಸ್ತಾಫ ಅವರು ಕಲ್ಲಾಪಿನ ಪೆಟ್ರೋಲ್ ಬಂಕ್ ಎದುರುಗಡೆ ಕಳೆದ ಹಲವು ವರುಷಗಳಿಂದ ಮೀನಿನ ವ್ಯಾಪಾರ ನಡೆಸುತ್ತಿದ್ದು, ಲಕ್ಷ ರೂಪಾಯಿಗಳ ಮಟ್ಟದ ವಹಿವಾಟು ನಡೆಸುವವರು. ಯಾವತ್ತೂ ಲಕ್ಷಗಟ್ಟಲೆ ಹಣ ಹಿಡಿದು ಇವರು ಧಕ್ಕೆಗೆ ತೆರಳುತ್ತಿದ್ದು, ಇವತ್ತು ಎರಡು ಲಕ್ಷದ ಕಡಿಮೆ ಮೊತ್ತದ ಹಣ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಇರುವವರೇ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ.
Mangalore Miscreants attack fish tempo driver with sword in Ullal. Mustfa who was on his way back to home was stopped by miscreants who came in Ritz car and was attacked with swords. Dcp Dhinikar Shetty and team are now investigating the case
12-05-26 02:26 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
12-05-26 05:15 pm
HK News Staffer
ಅಧಿಕಾರಕ್ಕೆ ಬರುತ್ತಿದ್ದಂತೆ ‘ಎಣ್ಣೆ ಸಾಮ್ರಾಜ್ಯ’ ಕ್...
12-05-26 11:34 am
ಒಂದು ವರ್ಷ ಚಿನ್ನ ಖರೀದಿಸ್ಬೇಡಿ...ಇಂಧನ ಉಳಿಸಿ, ವಿದ...
11-05-26 08:05 pm
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
12-05-26 01:54 pm
HK News Staffer
ಧರ್ಮಸ್ಥಳ ಬುರುಡೆ ಅಗೆದಿದ್ದೇ ಬಂತು..! ಹತ್ತು ತಿಂಗಳ...
12-05-26 01:11 pm
ಬೈಕಂಪಾಡಿಯಲ್ಲಿ ಮೊಬೈಲ್ ಅಂಗಡಿಗೆ ಕನ್ನ; 6 ವರ್ಷದಿಂದ...
12-05-26 11:19 am
ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನ...
11-05-26 04:58 pm
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm