ಬ್ರೇಕಿಂಗ್ ನ್ಯೂಸ್
04-03-22 02:12 pm Bengaluru Correspondent ಕ್ರೈಂ
ಬೆಂಗಳೂರು, ಮಾ.4: ಏರ್ಟೆಲ್ ಸಿಮ್ ಹೊಂದಿರುವ ಗ್ರಾಹಕರೇ ಎಚ್ಚರ. ನಿಮ್ಮ ಹೆಸರಲ್ಲೇ ಸಿಮ್ ಪಡೆದು ಸೈಬರ್ ವಂಚನೆ ಮಾಡೋರಿದ್ದಾರೆ, ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೈಬರ್ ವಂಚನೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಏರ್ಟೆಲ್ ಕಂಪನಿಯ ಇಬ್ಬರು ಎಕ್ಸಿಕ್ಯುಟಿವ್ ಗಳನ್ನೇ ಬಂಧಿಸಿದ್ದಾರೆ.
ಹರ್ಷ(24) ಹಾಗೂ ಚೇತನ್(27) ಬಂಧಿತ ಆರೋಪಿಗಳು. ಕಳೆದ ಜನವರಿಯಲ್ಲಿ ರಾಜೇಶ್ವರ್ ಎಂಬ ಸೈಬರ್ ವಂಚಕನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ರೇವಾ ಯುನಿವರ್ಸಿಟಿಯಲ್ಲಿ ಸೀಟು ಕೊಡಿಸೋದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಆತನ ಸಿಮ್ ತಪಾಸಣೆ ನಡೆಸಿದಾಗ, ನಕಲಿ ಸಿಮ್ ಮೂಲಕ ಕರೆ ಮಾಡಿದ್ದು ಕಂಡುಬಂದಿತ್ತು. ಸೀಟು ಕೊಡಿಸುವುದಾಗಿ ಹೇಳಿ 1.25 ಲಕ್ಷ ರೂ. ವಂಚಿಸಿದ್ದ.

ಇದೇ ರೀತಿ ಆರೋಪಿ ರಾಜೇಶ್ವರ್ ಹಲವರಿಗೆ ವಂಚಿಸಿರುವುದು ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿತ್ತು. ಸಿಮ್ ಸಿಕ್ಕಿದ್ದು ಹೇಗೆ ಎಂದು ತಪಾಸಣೆ ನಡೆಸಿದ ವೇಳೆ ಏರ್ಟೆಲ್ ಕಂಪನಿಯ ಇಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್ ಗಳೇ ಈತನಿಗೆ ಸಹಕಾರ ನೀಡಿರುವುದು ಗಮನಕ್ಕೆ ಬಂದಿತ್ತು. ಅದರಂತೆ, ಪೊಲೀಸರು ಸೈಬರ್ ವಂಚಕನಿಗೆ ಸಹಕಾರ ನೀಡಿರುವ ಆರೋಪದಲ್ಲಿ ಇಬ್ಬರು ಎಕ್ಸಿಕ್ಯುಟಿವ್ ಗಳನ್ನು ಬಂಧಿಸಿದ್ದಾರೆ.

ನಮ್ಮ ಬಳಿಯಿಂದಲೇ ಹೆಚ್ಚುವರಿ ದಾಖಲಾತಿ ಪಡೆದು ಪ್ರತ್ಯೇಕ ಸಿಮ್ ಖರೀದಿ ಮಾಡುತ್ತಿದ್ದ ಇವರು, ಅದನ್ನ ಸೈಬರ್ ವಂಚಕರಿಗೆ ನೀಡುತ್ತಿದ್ದರು. ಏರ್ಟೆಲ್ ಕಚೇರಿಯಲ್ಲೇ ಕುಳಿತು ಸೈಬರ್ ವಂಚಕರ ಪರ ಕೆಲಸ ಮಾಡುತ್ತಿದ್ದರು. ಗ್ರಾಹಕರ ಬಳಿ ಹೆಚ್ಚುವರಿ ದಾಖಲಾತಿ ಶೇಖರಿಸಿ ಸಿಮ್ ಗಳನ್ನು ಪಡೆಯುತ್ತಿದ್ದ ಆರೋಪಿಗಳು, ಅದನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದರು.
Bangalore Two Airtel executives staffs arrested for using customers sim and committing cyber crime. The duo have duped people in lakhs.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm