ಬ್ರೇಕಿಂಗ್ ನ್ಯೂಸ್
25-02-22 11:00 pm Mangalore Correspondent ಕ್ರೈಂ
ಬೆಳ್ತಂಗಡಿ, ಫೆ.25 : ಧರ್ಮಸ್ಥಳ ಭಾಗದಲ್ಲಿ ಬಜರಂಗದಳ ಮತ್ತು ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬ ದಲಿತ ವ್ಯಕ್ತಿಗೆ ಕ್ಷುಲ್ಲಕ ಕಾರಣಕ್ಕೆ ತುಳಿದು ಹಲ್ಲೆಗೊಳಿಸಿದ ಘಟನೆ ನಡೆದಿದ್ದು, ತರುವಾಯ ಎರಡು ದಿನಗಳ ಬಳಿಕ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕೊಲೆಯಾದ ವ್ಯಕ್ತಿ ದಿನೇಶ್ ನಾಯ್ಕ (41) ಎಂಬವನಾಗಿದ್ದು, ಆರೋಪಿಯನ್ನು ಕಿಟ್ಟ ಅಲಿಯಾಸ್ ಕೃಷ್ಣ ಡಿ. ಎಂದು ಗುರುತಿಸಲಾಗಿದೆ. ಫೆ.23ರಂದು ದಿನೇಶ್ ನಾಯ್ಕ, ಕೃಷ್ಣನಿಗೆ ಸೇರಿದ ಅಂಗಡಿಯ ಮುಂದೆ ಬಂದು ಜಾಗದ ದಾಖಲೆಗಳನ್ನು ಮಾಡಿಕೊಟ್ಟಿರುವ ವಿಚಾರದಲ್ಲಿ ತಗಾದೆ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಕೃಷ್ಣ, ದಿನೇಶ ನಾಯ್ಕನ ಮೇಲೆ ಹಲ್ಲೆಗೈದು ಹೊಟ್ಟೆಗೆ ತುಳಿದಿದ್ದ. ಇದರಿಂದ ತೀವ್ರ ನೋವಿಗೆ ಒಳಗಾಗಿದ್ದ ದಿನೇಶ ನಾಯ್ಕ ಮನೆಗೆ ತೆರಳಿ, ಆಗಿರುವ ವಿಚಾರವನ್ನು ಮನೆಯವರಲ್ಲಿ ಹೇಳಿ ನೋವಿನಲ್ಲಿ ಮಲಗಿದ್ದ.
ಆನಂತರ, ಹೊಟ್ಟೆಯ ಭಾಗಕ್ಕೆ ಹಲ್ಲೆಯಾಗಿದ್ದರಿಂದ ನೋವಿನಿಂದ ಬಳಲುತ್ತಿದ್ದ ಮಗನ ಬಗ್ಗೆ, ದಿನೇಶ್ ನಾಯ್ಕನ ತಾಯಿ ಆರೋಪಿ ಕೃಷ್ಣನ ಬಳಿಗೆ ಬಂದು, ನೀನು ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿದ್ದಾನೆ. ನನಗೆ ಆತನನ್ನು ಆಸ್ಪತ್ರೆಗೆ ಒಯ್ಯಲು ಹಣ ಇಲ್ಲ. ನೀನೇ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದರು. ಅದರಂತೆ, ಆರೋಪಿ ಕೃಷ್ಣ, ದಿನೇಶ್ ನಾಯ್ಕನನ್ನು ಆತನ ಪತ್ನಿಯ ಜೊತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲು ಮಾಡಿದ್ದ. ಅಲ್ಲದೆ, ವೈದ್ಯರಲ್ಲಿ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಿದ್ದ. ಆದರೆ ದಿನೇಶ್ ಫೆ.25ರಂದು ನಸುಕಿನಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇದರ ಬಗ್ಗೆ ದಿನೇಶ್ ನಾಯ್ಕನ ತಾಯಿ ಪದ್ಮಾವತಿ, ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿ ಕೃಷ್ಣನ ಹಲ್ಲೆಯಿಂದಲೇ ಮೃತಪಟ್ಟಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
Dharmasthala BJP member alleged of assault and Murder, case filed. The deceased has been identified as Dinesh Nayak.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm