ಬ್ರೇಕಿಂಗ್ ನ್ಯೂಸ್
20-02-22 11:03 pm Mangalore Correspondent ಕ್ರೈಂ
ಮಂಗಳೂರು, ಫೆ.20 : ಕಂಪ್ಯೂಟರ್ ಕ್ಲಾಸ್ ನಡೆಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ಕಿರುಕುಳ ಕೊಟ್ಟು 10 ಲಕ್ಷ ಸಾಲಕ್ಕೆ 50 ಲಕ್ಷ ಪೀಕಿಸಿಕೊಂಡ ಆರೋಪದಲ್ಲಿ ದಂಪತಿ ಸೇರಿ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ನಂತೂರು ನಿವಾಸಿ ಸ್ವರೂಪ ಎನ್. ಶೆಟ್ಟಿ ಎಂಬವರು 2016 ರಲ್ಲಿ ಜೆಪ್ಪಿನಮೊಗರಿನಲ್ಲಿ ಕಂಪ್ಯೂಟರ್ ತರಬೇತಿ ಕ್ಲಾಸ್ ನಡೆಸುತ್ತಿದ್ದರು. ಈ ವೇಳೆ, ಅಲ್ಲಿನ ವಿದ್ಯಾರ್ಥಿಯೊಬ್ಬನ ತಾಯಿ ತನ್ನ ಮನೆ ಏಲಂ ಆಗುತ್ತೆ ಎಂದು ಹೇಳಿ ಸ್ವರೂಪ ಬಳಿ ಅಲವತ್ತುಕೊಂಡಿದ್ದರು. ಅದರಂತೆ, ತನ್ನ ಸ್ನೇಹಿತೆಯಾಗಿದ್ದ ಶರ್ಮಿಳಾ (48) ಎಂಬವರನ್ನು ಸ್ವರೂಪ ಪರಿಚಯಿಸಿದ್ದರು.
ಶರ್ಮಿಳಾ ಮತ್ತು ಆಕೆಯ ಗಂಡ ಮೋಹನದಾಸ್, ವಿದ್ಯಾರ್ಥಿಯ ತಾಯಿಗೆ ತಿಂಗಳಿಗೆ ಹತ್ತು ಪರ್ಸೆಂಟ್ ಬಡ್ಡಿಗೆ ಹತ್ತು ಲಕ್ಷ ಸಾಲ ನೀಡಿದ್ದರು. ಸಾಲ ಪಡೆದ ಮಹಿಳೆ ತಿಂಗಳಿಗೆ ಒಂದು ಲಕ್ಷ ರೂ. ಬಡ್ಡಿ ಪಾವತಿ ಮಾಡಬೇಕಿತ್ತು. ಅದಕ್ಕೆಂದು ಚೆಕ್ ಪಡೆದಿದ್ದ ಶರ್ಮಿಳಾ, ಆನಂತರ ಮಹಿಳೆಯನ್ನು ಪೀಡಿಸಿ ಹಣವನ್ನು ವಾಪಸ್ ಪಡೆದಿದ್ದರುಎನ್ನಲಾಗಿದೆ.
ಆದರೆ ಈ ನಡುವೆ ಮಹಿಳೆಯನ್ನು ಪರಿಚಯಿಸಿದ ಕಾರಣಕ್ಕಾಗಿ ಶರ್ಮಿಳಾ ಮತ್ತು ಮೋಹನದಾಸ್ ದಂಪತಿ ಸ್ವರೂಪ ಶೆಟ್ಟಿಯನ್ನು ಹಿಡಿದುಕೊಂಡಿದ್ದು ತಮ್ಮ ಅಸಲು ಮತ್ತು ಬಡ್ಡಿ ಬಂದಿಲ್ಲವೆಂದು ಕಿರುಕುಳ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಜಾಮೀನಿನ ನೆಪದಲ್ಲಿ ಸ್ವರೂಪ ಶೆಟ್ಟಿ ಹೆಸರಲ್ಲಿ ಖಾಲಿ ಚೆಕ್ ಪಡೆದಿದ್ದು ಅದನ್ನು ಮುಂದಿಟ್ಟು ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ. ಅಲ್ಲದೆ, ಖಾಲಿ ಚೆಕ್ ನಲ್ಲಿ ಐದು ವರ್ಷಗಳ ಬಡ್ಡಿ ಎಂದು ಹೇಳಿ ಬೇಕಾಬಿಟ್ಟಿಯಾಗಿ ಲಕ್ಷಾಂತರ ಹಣವನ್ನು ನಮೂದಿಸಿ ಬ್ಯಾಂಕಿನಿಂದ ಡ್ರಾ ಮಾಡಿದ್ದಾರೆ.
ಒಟ್ಟು 50 ಲಕ್ಷ ರೂ. ಮೊತ್ತವನ್ನು ಸ್ವರೂಪ ಶೆಟ್ಟಿ ಬಳಿಯಿಂದ ಪಡೆದಿದ್ದು ಆಕೆ ನಷ್ಟಕ್ಕೀಡಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನೇ ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದರು. ಈ ಬಗ್ಗೆ ಸ್ವರೂಪ ಶೆಟ್ಟಿ ಎರಡು ದಿನಗಳ ಹಿಂದೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಆರೋಪಿಗಳಾದ ಶರ್ಮಿಳಾ (48), ಆಕೆಯ ಗಂಡ ಮೋಹನದಾಸ್ (52) ಮತ್ತು ಇವರಿಗೆ ಸಹಕರಿಸಿದ ಬಂಟ್ವಾಳ ಮೂಲದ ಸಾಯಿಕಿರಣ್ (52) ಎಂಬವರನ್ನು ಬಂಧಿಸಿದ್ದಾರೆ.
Three persons including a woman have been arrested for extorting money to the tune of Rs 50 lakh from a gullible woman under relevant IPC sections and Karnataka Prohibition of Charging Exorbitant Interest Act. The victim is Swaroopa N Shetty, a resident of Nanthoor and the arrested accused are Sharmila (48) and Mohandas (52) of Jeppinamogaru, and Sati Kiran (52) from Bantwal taluk.
12-05-26 02:26 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
12-05-26 11:34 am
HK News Staffer
ಒಂದು ವರ್ಷ ಚಿನ್ನ ಖರೀದಿಸ್ಬೇಡಿ...ಇಂಧನ ಉಳಿಸಿ, ವಿದ...
11-05-26 08:05 pm
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
12-05-26 01:54 pm
HK News Staffer
ಧರ್ಮಸ್ಥಳ ಬುರುಡೆ ಅಗೆದಿದ್ದೇ ಬಂತು..! ಹತ್ತು ತಿಂಗಳ...
12-05-26 01:11 pm
ಬೈಕಂಪಾಡಿಯಲ್ಲಿ ಮೊಬೈಲ್ ಅಂಗಡಿಗೆ ಕನ್ನ; 6 ವರ್ಷದಿಂದ...
12-05-26 11:19 am
ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನ...
11-05-26 04:58 pm
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm