ಬ್ರೇಕಿಂಗ್ ನ್ಯೂಸ್
12-02-22 10:55 pm HK Desk news ಕ್ರೈಂ
ನವದೆಹಲಿ, ಫೆ.12 : ‘ಡಾರ್ಕ್ನೆಟ್’ ಹಾಗೂ ಕ್ರಿಪ್ಟೊಕರೆನ್ಸಿ ನೆರವಿನಲ್ಲಿ ಕೊರಿಯರ್ ಮೂಲಕ ದೇಶದಾದ್ಯಂತ ಮನೆ, ಮನೆಗಳಿಗೆ ಡ್ರಗ್ಸ್ ತಲುಪಿಸುತ್ತಿದ್ದ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಭೇದಿಸಿದ್ದು, ಬೆಂಗಳೂರಿನ ಎಂಬಿಬಿಎಸ್ ವಿದ್ಯಾರ್ಥಿ ಸೇರಿ 22 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆದಿತ್ಯ ರೆಡ್ಡಿ, ‘ಎಲ್ಎಸ್ಡಿ ಕಿಂಗ್’ ಎಂದೇ ಕರೆಯಲಾಗುತ್ತಿರುವ ರಘುನಾಥ ಕುಮಾರ್ ಹಾಗೂ ಡ್ರಗ್ಸ್ ಮಾರಾಟ ಜಾಲದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಮೊಹ್ಮದ್ ಅಸ್ಲಾಂ ಎಂಬವರು ಬಂಧಿತರಲ್ಲಿ ಪ್ರಮುಖರು. ಡ್ರಗ್ಸ್ ಸಂಬಂಧಿಸಿ ಕರ್ನಾಟಕ ಪೊಲೀಸರು ರಘುನಾಥ ಕುಮಾರ್ ಎಂಬಾತನನ್ನು ಈಗಾಗಲೇ ಬಂಧಿಸಿದ್ದರು. ಆತನ ಮಾಹಿತಿಯಂತೆ ದೇಶದ ವಿವಿಧೆಡೆ ದಾಳಿ ನಡೆಸಲಾಗಿತ್ತು.
ಡಾರ್ಕ್ನೆಟ್ ವೆಬ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡಿಎನ್ಎಂ ಇಂಡಿಯಾ, ಡಿಆರ್ಇಡಿ ಹಾಗೂ ದಿ ಓರಿಯಂಟ್ ಎಕ್ಸ್ಪ್ರೆಸ್ ಎಂಬ ಆನ್ಲೈನ್ ಮಾರುಕಟ್ಟೆಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎನ್ಸಿಬಿ ಮಹಾ ನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ ಸಿಂಗ್ ತಿಳಿಸಿದ್ದಾರೆ.
‘ಆರೋಪಿಗಳು 20–35 ವರ್ಷ ವಯೋಮಾನದವರು. ಕೆಲವರು ಶಾಲೆ ಬಿಟ್ಟವರೂ ಇದ್ದಾರೆ. ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದವರಿದ್ದರು, ಮತ್ತೆ ಕೆಲವರು ಅಪರಾಧ ಕೃತ್ಯಗಳನ್ನೆಸಗುತ್ತಿದ್ದವರು ತಂಡದಲ್ಲಿ ಇದ್ದಾರೆ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸೂರತ್, ಪುಣೆ, ಬೆಂಗಳೂರು, ಕೋಲ್ಕತ್ತ, ಡಾರ್ಜಿಲಿಂಗ್, ದೆಹಲಿ, ಗಾಜಿಯಾಬಾದ್, ರಾಂಚಿ ಹಾಗೂ ಗುವಾಹಟಿಗಳಲ್ಲಿ ನಾಲ್ಕು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಎನ್ಸಿಬಿಯ ಕೋಲ್ಕತ್ತ ಹಾಗೂ ದೆಹಲಿ ವಲಯಕ್ಕೆ ಲಭಿಸಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಮಹಿಳೆ ಶ್ರದ್ಧಾ ಸುರಾನಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸಿಯಲ್ ಕನ್ಸಲ್ಟಂಟ್ ಆಗಿದ್ದಾರೆ. ಡಾರ್ಕ್ನೆಟ್ ಮೂಲಕ ವಿದೇಶಗಳಿಂದ ಡ್ರಗ್ಸ್ ಆಮದು ಮಾಡಿಕೊಳ್ಳುವುದು ಹಾಗೂ ಹಣಕಾಸು ವ್ಯವಹಾರ ನಿರ್ವಹಣೆ ಕಾರ್ಯದಲ್ಲಿ ಆಕೆ ಮತ್ತೊಬ್ಬ ಆರೋಪಿ ಜಸ್ಬೀರ್ ಎಂಬಾತನಿಗೆ ಸಹಕರಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.
Newdelhi a 23-year-old woman financial analyst earning nearly Rs 70,000 a month; threeNetflix enthusiasts emulating their favourite characters from popular narco-series Narcos and Breaking Bad, ‘LSD King’ running his drug network from Bellary jail in Karnataka; a budding psychiatrist who wanted to spread love through drugs; and a Gujarati couple that switched to drugs trade after lockdown hit their legit business.
21-03-26 08:29 pm
HK News Staffer
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
ಕುದುರೆಮುಖ ರಕ್ಷಿತಾರಣ್ಯದಲ್ಲಿ 25ಕ್ಕೂ ಹೆಚ್ಚು ಕಡೆ...
21-03-26 06:57 pm
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
ಕಾಮುಕ ಗುರೂಜಿ ಅಶೋಕ್ ಖಾರಟ್ ಜೊತೆ ಸಂಪರ್ಕ ಆರೋಪ ; ಮ...
21-03-26 01:22 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 08:23 pm
HK News Staffer
ಮೆಲ್ಕಾರ್ ಪೆಟ್ರೋಲ್ ಪಂಪ್ ನಲ್ಲಿ ಪಾನಮತ್ತ ಯುವಕನ ರಂ...
21-03-26 06:31 pm
ಯೂಟ್ಯೂಬ್ ನೋಡಿ ನಕಲಿ ಆನ್ಲೈನ್ ಟ್ರೇಡಿಂಗ್ ಆ್ಯಪ್ ಮ...
21-03-26 03:22 pm
ಉಳ್ಳಾಲದ ರೌಡಿಶೀಟರ್, ಕೋರ್ಟಿಗೆ ವಂಚಿಸಿ ತಲೆಮರೆಸಿಕೊ...
21-03-26 01:57 pm
ಪ್ರಯಾಣಿಕರಿಗೆ ದೊಡ್ಡ ಹೊಡೆತ ; ಮಂಗಳೂರು–ಸುಬ್ರಹ್ಮಣ...
21-03-26 11:56 am
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm