ಬ್ರೇಕಿಂಗ್ ನ್ಯೂಸ್
09-02-22 04:53 pm HK Desk news ಕ್ರೈಂ
ಮಂಡ್ಯ, ಫೆ.9 : ಮಂಡ್ಯವನ್ನು ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಐವರ ಹತ್ಯಾಕಾಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಎರಡೇ ದಿನದಲ್ಲಿ ಪೊಲೀಸರು ಹತ್ಯೆ ಹಿಂದಿನ ಕಹಾನಿಯನ್ನು ಭೇದಿಸಿದ್ದಾರೆ. ಅಕ್ರಮ ಸಂಬಂಧವೇ ಕೊಲೆಗೆ ಮೂಲ ಕಾರಣ ಎನ್ನೋದು ಬೆಳಕಿಗೆ ಬಂದಿದ್ದು, ತನ್ನ ಕಾಮತೀಟೆಗೆ ಅಡ್ಡಿಯಾದ ತಂಗಿ ಮತ್ತು ಆಕೆಯ ಮಕ್ಕಳನ್ನೇ ಅಕ್ಕನೇ ನಿರ್ದಾಕ್ಷಿಣ್ಯವಾಗಿ ಕೊಲೆಗೈದಿರುವ ವಿಚಾರ ಬಯಲಾಗಿದೆ.
ಫೆ.6ರಂದು ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್ ಎಸ್ ಬಳಿ ಐವರನ್ನು ಕೊಚ್ಚಿ ಕೊಲೆಗೈದ ಭೀಕರ ಹತ್ಯಾಕಾಂಡ ನಡೆದಿದ್ದು, ಮರುದಿನ ವಿಷಯ ತಿಳಿಯುತ್ತಲೇ ಸ್ಥಳೀಯ ಜನರು ಬೆಚ್ಚಿಬೀಳುವಂತಾಗಿತ್ತು. ಗಂಗಾರಾಮ್ ಎಂಬಾತನ ಪತ್ನಿ ಲಕ್ಷ್ಮೀ(26), ರಾಜ್(13), ಕೋಮಲ್(7), ಕುನಾಲ್ (4), ಗೋವಿಂದ (8) ಎಂಬ ತಾಯಿ, ಮಕ್ಕಳು ಒಂದೇ ರಾತ್ರಿಯಲ್ಲಿ ಮಲಗಿದಲ್ಲೇ ದುರಂತ ಸಾವು ಕಂಡಿದ್ದರು.

ಕೊಲೆಯ ಬಳಿಕ ಸಿಕ್ಕಿದ್ದ ಸುಳಿವನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೈಸೂರು ನಿವಾಸಿ ಲಕ್ಷ್ಮೀ(30) ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ಸಂಬಂಧದಲ್ಲಿ ಕೊಲೆಯಾದ ಮಹಿಳೆಗೆ ದೊಡ್ಡಪ್ಪನ ಮಗಳಾಗಿದ್ದು, ಅಕ್ಕ ಆಗುತ್ತಾಳೆ. ತನ್ನ ಗಂಡ ಗಂಗಾರಾಮ್ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದನ್ನು ತಿಳಿದ ಲಕ್ಷ್ಮೀ ಇತ್ತೀಚೆಗೆ ರಂಪ ಮಾಡಿದ್ದಳು. ಆನಂತರ, ಗಂಡ ಆಕೆಯಿಂದ ದೂರವಿದ್ದು, ಪತ್ನಿ, ಮಕ್ಕಳ ಜೊತೆಗೆ ವಾಸವಿದ್ದ. ಮೊನ್ನೆ ಗಂಗಾರಾಮ್ ವ್ಯಾಪಾರ ನಿಮಿತ್ತ ಮನೆಯಿಂದ ದೂರ ಇರುವ ವಿಚಾರ ತಿಳಿದಿದ್ದ ಆರೋಪಿ ಲಕ್ಷ್ಮೀ, ನಿನ್ನ ಜೊತೆ ಮಾತನಾಡಲು ಇದೆಯೆಂದು ಹೇಳಿ ಈಕೆಯ ಮನೆಗೆ ಬಂದಿದ್ದಳು.

ಆನಂತರ ಜೊತೆಗೆ ಊಟ ಮಾಡಿ ಮಲಗಿದ್ದ ಆರೋಪಿ ಲಕ್ಷ್ಮೀ, ತಾಯಿ, ಮಕ್ಕಳು ನಿದ್ರೆಗೆ ಜಾರುತ್ತಲೇ ಮನೆಯಲ್ಲಿದ್ದ ಸುತ್ತಿಗೆಯಿಂದ ತಲೆಗೆ ಬಡಿದು ಒಬ್ಬೊಬ್ಬರನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಸೋದರಿ ಲಕ್ಷ್ಮೀಯನ್ನು ಮಾತ್ರ ಹತ್ಯೆ ಮಾಡುವ ಉದ್ದೇಶ ಇತ್ತಾದರೂ, ಆನಂತರ ಮಕ್ಕಳು ನೋಡಿದರೆಂದು ಅವರನ್ನೂ ಕೊಂದು ಮುಗಿಸಿದ್ದಾಳೆ. ಕೃತ್ಯದ ಬಳಿಕ ಏನೂ ಆಗೇ ಇಲ್ಲ ಎನ್ನುವಂತೆ ನಾಲ್ಕೈದು ಗಂಟೆ ಅದೇ ಮನೆಯಲ್ಲಿ ಕಳೆದು ನಸುಕಿನ ಜಾವ ನಾಲ್ಕು ಗಂಟೆಗೆ ಮೈಸೂರಿಗೆ ತೆರಳಿದ್ದಳು. ಆನಂತರ ಮರುದಿನ ಬೆಳಗ್ಗೆ ಹತ್ತು ಗಂಟೆಗೆ ಸ್ಥಳಕ್ಕೆ ಬಂದು ತಂಗಿ ಸತ್ತಿರುವ ಬಗ್ಗೆ ಗೋಳಾಡಿ ನಾಟಕ ಮಾಡಿದ್ದಾಳೆ. ತನ್ನ ತಂಗಿಯನ್ನು ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿ, ಅತ್ತು ಕರೆದು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಳು. ಆದರೆ, ಕೊಲೆ ಕೃತ್ಯದ ಬಗ್ಗೆ ಲಕ್ಷ್ಮೀ ಗಂಡ ಗಂಗಾರಾಮ್ ಗೆ ತಿಳಿದಿರಲಿಲ್ಲ.

ಆದರೆ ಗಂಗಾರಾಮ್ ಜೊತೆಗೆ ಪ್ರೀತಿ ಮತ್ತು ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮೀ, ಆತನನ್ನು ಪಡೆದೇ ತೀರಬೇಕೆಂದು ತಂಗಿ ಮತ್ತು ಆಕೆಯ ಮಕ್ಕಳನ್ನು ಕೊಂದು ಹಾಕಿದ್ದಾಳೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆಯ ಬಳಿಕ ಮನೆಯ ಮುಂದೆ ಗೋಳಾಡಿದ್ದಲ್ಲದೆ, ಟಿವಿ ಕ್ಯಾಮರಾಗಳನ್ನು ಕಂಡು ದೂರಕ್ಕೆ ಹೋಗುವಂತೆ ಬೆದರಿಕೆ ಹಾಕಿದ್ದಳು. ಕ್ಯಾಮರಾದಲ್ಲಿ ಬರದಂತೆ ಮುಖ ಮುಚ್ಚಿಕೊಳ್ಳುತ್ತಿದ್ದ ಯುವತಿ, ಟಿವಿಯವರು ಬರಬೇಡಿ ಎಂದು ಹೇಳುತ್ತಿದ್ದಳು.
ಆದರೆ, ಗಂಗಾರಾಮ್ ಮತ್ತು ಲಕ್ಷ್ಮೀ ನಡುವಿನ ಸಂಬಂಧದ ಬಗ್ಗೆ ತಿಳಿದಿದ್ದ ಕೆಲವರು ಪೊಲೀಸರಿಗೆ ಸುಳಿವು ನೀಡಿದ್ದರು. ಅದೇ ಸುಳಿವು ಆಧರಿಸಿ, ಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪಾತಕಿಯ ಕೃತ್ಯ ತಿಳಿದುಬಂದಿದೆ. ತಂಗಿ, ಮಕ್ಕಳನ್ನು ಕೊಂದು ಮುಗಿಸಿದರೆ, ಗಂಗಾರಾಮ್ ಜೊತೆ ಸಂತೋಷದಿಂದ ಬಾಳಬಹುದು ಎಂದುಕೊಂಡಿದ್ದ ಲಕ್ಷ್ಮೀ ಈಗ ಕಂಬಿ ಎಣಿಸುವಂತಾಗಿದೆ.
ಮಂಡ್ಯದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ; ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ 5 ಜನರ ಕೊಲೆ !
Five of family found murdered in Mandya, illicit affair reason for Murder. Five of a family, including four children, were found murdered at KRS village in Srirangapatna taluk in Mandya district on Sunday.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm