ಬ್ರೇಕಿಂಗ್ ನ್ಯೂಸ್
03-02-22 06:18 pm Mangalore Correspondent ಕ್ರೈಂ
ಮಂಗಳೂರು, ಫೆ.3 : ಕಾಲೇಜಿಗೆ ತೆರಳುವ ಅಪ್ರಾಪ್ತ ಹುಡುಗಿಯರಿಗೆ ನಾನಾ ರೀತಿಯ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಪ್ರಕರಣವನ್ನು ಪತ್ತೆ ಮಾಡಿರುವ ಮಂಗಳೂರು ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಅತ್ತಾವರದ ನಂದಿಗುಡ್ಡೆ ಬಳಿಯ ಎಸ್.ಎಮ್.ಆರ್ ಲಿಯಾನಾ ರೆಸಿಡೆನ್ಸಿ ಹೆಸರಿನ ಅಪಾರ್ಟ್ಮೆಂಟಿನಲ್ಲಿ ಶಮೀನಾ ಎಂಬ ಮಹಿಳೆ ಮತ್ತು ಆಕೆಯ ಗಂಡ ಸಿದ್ಧಿಕ್ ಎಂಬವರು ಮನೆಯೊಂದನ್ನು ಬಾಡಿಗೆ ಪಡೆದು ಅಲ್ಲಿ ಕೃತ್ಯ ಎಸಗುತ್ತಿದ್ದರು. ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನು ಒತ್ತಾಯಪೂರ್ವಕ ಕರೆತಂದು ಹಣ ಇನ್ನಿತರ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಆನಂತರ, ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಾ ಮತ್ತೆ ಮತ್ತೆ ತಮ್ಮ ಕೃತ್ಯಕ್ಕೆ ಸಹಕರಿಸುವಂತೆ ಒತ್ತಡ ಹೇರುತ್ತಿದ್ದರು.
ಈ ಬಗ್ಗೆ 17 ವರ್ಷದ ಅಪ್ರಾಪ್ತ ಯುವತಿ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಶಮೀನಾ ಮತ್ತು ಸಿದ್ದಿಕ್ ನಡೆಸುತ್ತಿದ್ದ ದಂಧೆಗೆ ಆಯಿಷಮ್ಮ ಎಂಬ ಮಹಿಳೆ ಸಾಥ್ ನೀಡಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಇನ್ನೂ ಕೆಲವರು ಸಹಕರಿಸುತ್ತಿದ್ದು, ತಂಡವಾಗಿ ದಂಧೆ ನಡೆಸುತ್ತಿದ್ದರು. ಕಾಲೇಜಿಗೆ ಹೋಗುವ ಯುವತಿಯರನ್ನು ಟಾರ್ಗೆಟ್ ಮಾಡಿ, ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ಬಳಸುತ್ತಿರುವುದು ಕಂಡುಬಂದಿದೆ. ಆರೋಪಿಗಳ ಬಳಿಯಿಂದ 5 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದು, ಅದನ್ನು ಆಧರಿಸಿ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
The Women's Police Station of Pandeshwar has arrested five persons for allegedly forcing minor girls and women into prostitution with false entrappments and blackmail in SMR Liana Apartments near Nandigudda of Attavar in the city. The action was taken based on a complaint by a victim, a 17-year-old girl against two women and a man. As per the complaint, Shameena has rented an apartment in Leona Apartments and has been committing this crime with the help of her husband Siddique.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 02:02 pm
HK News Desk
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
04-02-26 12:29 pm
Mangalore Correspondent
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm