ಬ್ರೇಕಿಂಗ್ ನ್ಯೂಸ್
31-01-22 10:30 pm HK Desk news ಕ್ರೈಂ
ಕರಾಚಿ, ಜ.31 : ಮೊಬೈಲಿನಲ್ಲಿ ಪಬ್ ಜಿ ವಿಡಿಯೋ ಗೇಮ್ ಹುಚ್ಚಾಟಕ್ಕೆ ಬಿದ್ದ 14 ವರ್ಷದ ಹುಡುಗನೊಬ್ಬ ತಾಯಿ, ಇಬ್ಬರು ಸೋದರಿಯರು ಸೇರಿ ಒಂದೇ ಕುಟುಂಬದ ನಾಲ್ವರನ್ನು ಗುಂಡಿಟ್ಟು ಕೊಂದು ಹಾಕಿದ ಘಟನೆ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ತಾಯಿ ನಹೀದ್ ಮುಬಾರಕ್ (45), ಆಕೆಯ ಮಗ 22 ವರ್ಷದ ತೈಮೂರ್, ಇನ್ನಿಬ್ಬರು 17 ಮತ್ತು 11 ವರ್ಷದ ಇಬ್ಬರು ಹೆಣ್ಮಕ್ಕಳು ದಾರುಣ ಸಾವಿಗೀಡಾದವರು. ಇವರನ್ನು ಕೊಂದು ಹಾಕಿದ 14 ವರ್ಷದ ಹುಡುಗ ಮಾತ್ರ ಈ ಕುಟುಂಬದಲ್ಲಿ ಉಳಿದಿರುವ ಏಕೈಕ ವ್ಯಕ್ತಿ. ಉಳಿದೆಲ್ಲರೂ ಒಂದೇ ಕುಟುಂಬದ ಕುಡಿಗಳು ಒಡಹುಟ್ಟಿದವನ ಗುಂಡಿನಿಂದಲೇ ಸಾವಿಗೀಡಾಗಿದ್ದಾರೆ.

Unknown Battle ground ಎನ್ನುವ ಹೆಸರಿನ ಪಬ್ ಜಿ ವಿಡಿಯೋ ಗೇಮನ್ನು ಹೆಚ್ಚು ಕಾಲ ಆಡುತ್ತಿದ್ದ ಹುಡುಗ ಅದರಿಂದ ಮಾನಸಿಕವಾಗಿ ಸಮಸ್ಯೆಗೀಡಾಗಿದ್ದ. ಅದೇ ವಿಚಾರದಲ್ಲಿ ಕುಟುಂಬದಲ್ಲಿ ಕಲಹ ಏರ್ಪಟ್ಟು ಹುಡುಗ ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿದೆ. ತಾಯಿ ನಹೀದ್ ಮುಬಾರಕ್ ಗಂಡನಿಂದ ಬೇರ್ಪಟ್ಟಿದ್ದು ಮಕ್ಕಳೊಂದಿಗೆ ವಾಸವಿದ್ದಳು. ಆರೋಗ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಳು.

ಆದರೆ 14 ವರ್ಷದ ಹುಡುಗ ಮೊಬೈಲ್ ವಿಡಿಯೋ ಗೇಮ್ ನಲ್ಲಿ ಆಡುತ್ತಾ ಕಲಿಯುವುದರಲ್ಲಿ ಹಿಂದೆ ಬಿದ್ದಿದ್ದ. ಇದೇ ವಿಚಾರದಲ್ಲಿ ಹುಡುಗನಿಗೆ ತಾಯಿ ಬೈದಿದ್ದು, ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಹುಡುಗ ಕಪಾಟಿನಲ್ಲಿದ್ದ ಪಿಸ್ತೂಲ್ ತೆಗೆದು ತಾಯಿ ಮತ್ತು ಮನೆಯಲ್ಲಿದ್ದ ತನ್ನ ಒಡ ಹುಟ್ಟಿದವರ ಮೇಲೆ ಗುಂಡು ಹಾರಿಸಿದ್ದಾನೆ. ಅವರು ಸ್ಥಳದಲ್ಲೇ ಸಾವು ಕಂಡಿದ್ದಾರೆ.
A 14-year-old boy allegedly shot dead his entire family, including mother and two minor sisters, allegedly "under the influence" of online game PUBG, police in the capital of Pakistan's Punjab province said.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
11-08-26 10:23 pm
HK News Staffer
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
Vitla School Bus Accident: ನಿಯಂತ್ರಣ ತಪ್ಪಿ ವಿದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm