Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್ ಮುಂದೆ ಬಂದು ನಿಂತಿದ್ದ ಐಷಾರಾಮಿ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆ

20-09-26 02:16 pm       HK News Staffer   ಕ್ರೈಂ

ಮಧ್ಯರಾತ್ರಿ ಹೋಟೆಲ್ ಮುಂದೆ ಬಂದು ನಿಂತಿದ್ದ ಐಷಾರಾಮಿ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬೆಂಗಳೂರು, ಸೆ 20: ಮಧ್ಯರಾತ್ರಿ ಹೋಟೆಲ್ ಮುಂದೆ ಬಂದು ನಿಂತಿದ್ದ ಐಷಾರಾಮಿ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಪೊಲೀಸ್ ಠಾಣೆಯ ಮುಂಭಾಗದಲ್ಲೇ ಇರುವ ಹೋಟೆಲ್‌ವೊಂದರ ಮುಂಭಾಗದಲ್ಲಿ ನಿಂತಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ. ಮೃತರನ್ನ ಮೂಲತಃ ವಿರಾಜಪೇಟೆಯವರಾದ ಸಲೀಂ ಅಕ್ಬರ್ (46) ಎಂದು ಗುರುತಿಸಲಾಗಿದೆ.

ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಠಾಣೆ ಎದುರಿನ ಹೋಟೆಲ್ ಬಳಿ ಕಾರು ಬಂದು ನಿಂತಿದೆ. ಬೆಳಗ್ಗೆ ಹೋಟೆಲ್ ಸಿಬ್ಬಂದಿ ಗಮನಿಸಿದಾಗ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಸೋಕೋ ತನಿಖಾ ತಂಡ ಹಾಗೂ ಕೋರಮಂಗಲ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರು ಚಾಲನೆ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮೃತ ಅಕ್ಬರ್ ಅವರ ಹಿನ್ನೆಲೆ ಹಾಗೂ ಅವರು ರಾತ್ರಿ ಎಲ್ಲಿಗೆ ಹೊರಟಿದ್ದರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

A man was found dead inside a luxury car that had been parked outside a hotel in Bengaluru’s Koramangala area late at night, police said.