ಬ್ರೇಕಿಂಗ್ ನ್ಯೂಸ್
21-08-26 11:03 am HK News Staffer ಕ್ರೈಂ
ವಿಜಯವಾಡ, ಆ.20: ಶೋಕಿ ಜೀವನ, ಸ್ನೇಹಿತರ ಬೈಕ್ ಸುತ್ತಾಟ, ಟೀಚರ್ ಮೇಲಿನ ಸಿಟ್ಟು ಹೈಸ್ಕೂಲ್ ಪ್ರಿನ್ಸಿಪಾಲ್ ಮಹಿಳೆಯೊಬ್ಬರ ಪ್ರಾಣವನ್ನೇ ಕಿತ್ತುಕೊಂಡಿದೆ. ಹತ್ತನೇ ಕ್ಲಾಸ್ ವಿದ್ಯಾರ್ಥಿಗಳು ಪ್ರಿನ್ಸಿಪಾಲರ ಮನೆಗೇ ನುಗ್ಗಿ ನಗದು ಹಣವನ್ನು ಕದ್ದೊಯ್ದಿದ್ದಲ್ಲದೆ, ಆಕೆಯನ್ನು ಅಮಾನುಷವಾಗಿ ಕೊಲೆಗೈದು ಗೋವಾಕ್ಕೆ ಹೋಗಿ ಪಾರ್ಟಿ ಮಾಡಿದ್ದಾರೆ. ಆಂಧ್ರಪ್ರದೇಶದ ನಲ್ಗೊಂಡಾ ಜಿಲ್ಲೆಯ ಕೊಂಡಮಲ್ಲೇಪಲ್ಲಿ ಎಂಬಲ್ಲಿ ನಡೆದಿರುವ ಘಟನೆ ತೆಲುಗರ ನಾಡನ್ನೇ ನಡುಗಿಸಿದೆ.
ಕೊಂಡಮಲ್ಲೇಪಳ್ಳಿಯ ನಾಗಾರ್ಜುನ ಪಬ್ಲಿಕ್ ಸ್ಕೂಲಿನ ಡೈರೆಕ್ಟರ್ ಮತ್ತು ಪ್ರಿನ್ಸಿಪಾಲ್ ಆಗಿದ್ದ ಕಲ್ಲು ರೂಪಾ ರೆಡ್ಡಿ ಆಗಸ್ಟ್ 12ರಂದು ತನ್ನದೇ ಮನೆಯಲ್ಲಿ ಭಯಾನಕವಾಗಿ ಕೊಲೆಯಾಗಿದ್ದರು. ಬೆಳ್ಳಂಬೆಳಗ್ಗೆ 27 ಬಾರಿ ಚೂರಿಯಿಂದ ತಿವಿದು ಮಹಿಳೆಯನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಈ ವೇಳೆ, ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಅವರ ಪತಿ ಕೆಲಸದ ನಿಮಿತ್ತ ಹೈದರಾಬಾದ್ ತೆರಳಿದ್ದರು. ಪತ್ನಿ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಬಳಿಕ ಪಕ್ಕದ ಮನೆಯವರಿಗೆ ತಿಳಿಸಿದಾಗಲೇ ಕೊಲೆ ವಿಚಾರ ತಿಳಿದುಬಂದಿತ್ತು.
ಇದರ ಬೆನ್ನಲ್ಲೇ ಪೊಲೀಸರು ಐದು ತಂಡಗಳಲ್ಲಾಗಿ ತನಿಖೆ ಶುರು ಮಾಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಬೆನ್ನತ್ತಿ ಕೃತ್ಯವನ್ನು ಯಾರು ಎಸಗಿದ್ದಾರೆ, ಯಾರಿಗೆ ಇಷ್ಟೊಂದು ದ್ವೇಷ ಇತ್ತು ಎನ್ನುವ ನೆಲೆಯಲ್ಲಿ ಬಹು ಆಯಾಮಗಳಲ್ಲಿ ತನಿಖೆ ಮಾಡಿದ್ದರು. ಏನೆಲ್ಲಾ ಕ್ಲೂ ಸಿಗುತ್ತೋ ಎಲ್ಲವನ್ನೂ ಬೆನ್ನು ಹತ್ತಿ ತನಿಖೆ ಆರಂಭಿಸಿದ್ದರು. 80ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿ ಮಾಹಿತಿ ಕಲೆ ಹಾಕಿದ್ದರು.


ಏಯ್ ಬಾಬೂ ಎಂದಿದ್ದೇ ನೀಡಿತ್ತು ಕ್ಲೂ
ಆಗಸ್ಟ್ 12ರಂದು ಬೆಳಗ್ಗೆ ರೂಪಾ ರೆಡ್ಡಿ ತನ್ನ ಚಿಕ್ಕಮ್ಮನಿಗೆ ಕರೆ ಮಾಡಿದ್ದು, ಸಡನ್ ಫೋನ್ ಕಟ್ ಮಾಡೋ ಮೊದಲು ಅವರ ಬಾಯಿಂದ ಬಾಬು ಎನ್ನುವ ಮಾತು ಬಂದಿತ್ತು. ಇದು ಆಂಟಿ ಮೊಬೈಲ್ ನಲ್ಲಿ ರೆಕಾರ್ಡ್ ಕೂಡ ಆಗಿತ್ತು. ಅದರ ಬೆನ್ನಲ್ಲೇ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆ ಕ್ಷಣದಲ್ಲಿ ಏಯ್ ಬಾಬೂ ಎಂದು ರೂಪಾ ರೆಡ್ಡಿ ಯಾರನ್ನು ಕರೆದಿದ್ದರು ಅನ್ನೋದ್ರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಲು ಶಾಲೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಸಿಕ್ಕ ಮಾಹಿತಿ ಪೊಲೀಸರನ್ನೇ ಬೆಚ್ಚಿಬೀಳಿಸಿತ್ತು. ಯಾಕಂದ್ರೆ, ರೂಪಾ ರೆಡ್ಡಿ ತನ್ನ ಇಷ್ಟದ ಮಕ್ಕಳನ್ನೇ ಬಾಬು ಎಂದು ಪ್ರೀತಿಯಿಂದ ಕರೆಯುತ್ತಿದ್ದರಂತೆ.
ಪೊಲೀಸರು ಇದು ತಿಳಿಯುತ್ತಲೇ ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೇ ಕರೆದು ವನ್ ಟು ವನ್ ಮಾಹಿತಿ ಕಲೆಹಾಕತೊಡಗಿದ್ದರು. ಈ ವೇಳೆ, ಹತ್ತನೇ ತರಗತಿ ಓದುತ್ತಿದ್ದ ಐದು ಮಕ್ಕಳು ಸಡನ್ ಚಕ್ಕರ್ ಹಾಕಿದ್ದು ಕಂಡುಬಂತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಲ್ಲಿ ಬೇಕಾಬಿಟ್ಟಿ ಖರ್ಚು ಮಾಡ್ತಿರುವುದು ಮತ್ತು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ವಿಚಾರ ತಿಳಿದು ಪೊಲೀಸರ ಗಮನ ಅವರತ್ತ ನೆಟ್ಟಿತ್ತು. ಇಬ್ಬರು ವಿದ್ಯಾರ್ಥಿಗಳನ್ನು ಬುಧವಾರ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಪ್ರಿನ್ಸಿಪಾಲ್ ಬಗ್ಗೆ ಸಿಟ್ಟು ಹೊಂದಿದ್ರು
ಹತ್ತನೇ ಕ್ಲಾಸ್ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕೆಂದು ಪ್ರಿನ್ಸಿಪಾಲ್ ರೂಪಾ ರೆಡ್ಡಿ ತನ್ನ ಮಕ್ಕಳಿಗೆ ಬುದ್ಧಿ ಮಾತು ಹೇಳುತ್ತಿದ್ದರೆ, ಇತ್ತ ಹಾಸ್ಟೆಲಿನಲ್ಲಿದ್ದ ಮಕ್ಕಳು ಬೇಕಾಬಿಟ್ಟಿ ವರ್ತನೆ ಮಾಡುತ್ತಿದ್ದ ವಿಚಾರ ತಿಳಿದು ಅವರ ಬ್ಯಾಗ್ ಚೆಕ್ ಮಾಡಿದ್ದರು. ಈ ವೇಳೆ, ನಗದು ಹಣ ಮತ್ತು ಮೊಬೈಲ್ ಬ್ಯಾಗಿನಲ್ಲಿದ್ದುದನ್ನು ನೋಡಿ ಗದರಿದ್ದರು. ಅಲ್ಲದೆ, ಅವರ ಹೆತ್ತವರಿಗೆ ಮಾಹಿತಿ ನೀಡಿ ಅವರನ್ನು ಹಾಸ್ಟೆಲ್ ನಿಂದ ಬೇರೆಡೆಗೆ ಶಿಫ್ಟ್ ಮಾಡಿದ್ದರು. ಇದೇ ಕಾರಣಕ್ಕೆ ರೂಪಾ ರೆಡ್ಡಿಯನ್ನು ವಿದ್ಯಾರ್ಥಿಗಳು ಟಾರ್ಗೆಟ್ ಮಾಡಿದ್ದರೆಂದು ಪೊಲೀಸರು ಶಂಕಿಸಿದ್ದಾರೆ.
ಗ್ಲೌಸ್, ಚೂರಿ ಖರೀದಿಸಿದ್ದರು..
ಐದು ದಿನಗಳ ಹಿಂದೆಯೇ ವಿದ್ಯಾರ್ಥಿಗಳು ಕಳ್ಳತನಕ್ಕೆ ಸಂಚು ಹೂಡಿದ್ದರು. ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಇದಕ್ಕಾಗಿ ಕೈಗೆ ಗ್ಲೌಸ್ ಹಾಕಿ ತಮ್ಮ ಫಿಂಗರ್ ಪ್ರಿಂಟ್ ಬರದಂತೆ ಎಚ್ಚರ ವಹಿಸಿದ್ದರು. ಸೇಫ್ಟಿಗೆ ಇರಲಿ ಎಂದು ಹೊಸತಾಗಿ ಚೂರಿಯನ್ನೂ ಖರೀದಿಸಿ ಇಟ್ಟುಕೊಂಡಿದ್ದರು. ಆಗಸ್ಟ್ 12ರಂದು ಬೆಳಗ್ಗೆ ಇವರಲ್ಲೊಬ್ಬ ಮಂಕಿ ಕ್ಯಾಪ್ ಹಾಕಿ ಟೀಚರ್ ಮನೆಗೆ ಮೊದಲು ಹೊಕ್ಕಿದ್ದಾನೆ. ಈ ವೇಳೆ, ಬೆಡ್ ರೂಮಿನಲ್ಲಿ 2.50 ಲಕ್ಷ ನಗದು ಇರುವುದನ್ನು ತಿಳಿದು ಅದನ್ನು ಕಿತ್ಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಇದೇ ವೇಳೆ, ತನ್ನ ಮುಖಕ್ಕೆ ಹಾಕಿಕೊಂಡಿದ್ದ ಮಂಕಿ ಕ್ಯಾಪ್ ಸ್ವಲ್ಪ ಜಾರಿದ್ದು ಇದನ್ನು ಗಮನಿಸಿದ ರೂಪಾ ರೆಡ್ಡಿ ಏಯ್ ಬಾಬೂ ಅಲ್ವೇನೋ ಎಂದು ಕೂಗಿದ್ದಾರೆ. ತನ್ನನ್ನು ಟೀಚರ್ ಗುರುತು ಹಿಡಿದರು ಎನ್ನುವ ಭಯದಲ್ಲಿ ಆತನೇ ಕ್ರುದ್ಧನಾಗಿ ತನ್ನ ಪ್ರೀತಿಯ ಟೀಚರ್ ಎನ್ನುವುದನ್ನೂ ಲೆಕ್ಕಿಸದೆ ಕೈಲಿದ್ದ ಚೂರಿಯಿಂದ ಯದ್ವಾತದ್ವಾ ತಿವಿದು ಅಮಾನುಷವಾಗಿ ಕೊಲೆ ಮಾಡಿದ್ದಾನೆ. 27 ಬಾರಿ ಚೂರಿಯಿಂದ ತಿವಿದಿದ್ದನ್ನು ಪೊಲೀಸರು ಗುರುತಿಸಿದ್ದಾರೆ.
ಜಟಾಪಟಿ ಸಂದರ್ಭದಲ್ಲಿ ಕೈಯಲ್ಲಿದ್ದ ನಗದು ಹಣದ ಕಂತೆಗೂ ರಕ್ತದ ಕಲೆಗಳು ಅಂಟಿದ್ದವು. ಮಂಕಿ ಕ್ಯಾಪ್ ಮತ್ತು ತನ್ನ ಬಟ್ಟೆಗೂ ರಕ್ತ ಚೆಲ್ಲಿತ್ತು. ಎಲ್ಲವನ್ನೂ ಕಟ್ಟಿಕೊಂಡು ಇಬ್ಬರು ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಬಳಿಕ ನೇರವಾಗಿ ಗೋವಾಕ್ಕೆ ಟ್ರಿಪ್ ಹೋಗಿ ಏನೂ ಆಗಿಯೇ ಇಲ್ಲ ಎನ್ನುವಂತೆ ಮಜಾ ಉಡಾಯಿಸಿದ್ದರು. ಪೊಲೀಸರು ಆರೋಪಿಗಳ ಬಳಿಯಿಂದ 1.54 ಲಕ್ಷ ನಗದು, ರಕ್ತದ ಕಲೆಗಳಿದ್ದ ಕರೆನ್ಸಿ ನೋಟುಗಳು, ಅದೇ ಹಣದಲ್ಲಿ ಖರೀದಿಸಿದ್ದ ಐಫೋನ್ ಮತ್ತು ರೂಪಾ ರೆಡ್ಡಿಯ ಕೈಯಲ್ಲಿದ್ದ ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ.
ವಿಚಿತ್ರ ಏನಂದ್ರೆ, ಹತ್ತನೇ ಕ್ಲಾಸಿನ ಈ ವಿದ್ಯಾರ್ಥಿಗಳು ಸುಲಭದಲ್ಲಿ ಹೇಗೆ ಹಣ ಗಳಿಸಬಹುದು ಎನ್ನುವ ಬಗ್ಗೆ ಯೂಟ್ಯೂಬ್ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಸರ್ಚ್ ಮಾಡಿದ್ದೂ ಮೊಬೈಲಿನಲ್ಲಿ ದಾಖಲಾಗಿದೆ. ಹರೆಯದ ವಿದ್ಯಾರ್ಥಿಗಳ ಹುಚ್ಚಾಟ, ಪಾರ್ಟಿ ಗೀಳು ಟೀಚರ್ ಪ್ರಾಣವನ್ನೇ ಕಸಿದುಕೊಂಡಿದೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
ಕೆಎಫ್ ಸಿ ಬಳಿಕ ಮಂಗಳೂರಿನಲ್ಲಿ ಎಂಎಫ್ ಸಿ ರೆಸ್ಟೋರೆಂ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm