ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ್ಕೂ ಹೆಚ್ಚು ಗೋಣಿ ಚೀಲದಲ್ಲಿ ಹುಳ ಪತ್ತೆ, ಸ್ಥಳೀಯರ ಆಕ್ರೋಶ

20-08-26 05:16 pm       HK News Staffer   ಕರಾವಳಿ

ಸರಕಾರದಿಂದ ಉಚಿತ ಅನ್ನಭಾಗ್ಯ ಯೋಜನೆಯಡಿ ಕೊಡಲಾಗುವ ಪಡಿತರ ಅಕ್ಕಿಯಲ್ಲಿ ಹುಳು ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ, ಪಟ್ರಮೆ ಗ್ರಾಮದಲ್ಲಿ ಪೂರೈಸಲಾದ ಅಕ್ಕಿಯಲ್ಲಿ ಹುಳ ಕಂಡುಬಂದಿದ್ದು ಇದನ್ನು ನೋಡಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ, ಆ.20: ಸರಕಾರದಿಂದ ಉಚಿತ ಅನ್ನಭಾಗ್ಯ ಯೋಜನೆಯಡಿ ಕೊಡಲಾಗುವ ಪಡಿತರ ಅಕ್ಕಿಯಲ್ಲಿ ಹುಳು ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ, ಪಟ್ರಮೆ ಗ್ರಾಮದಲ್ಲಿ ಪೂರೈಸಲಾದ ಅಕ್ಕಿಯಲ್ಲಿ ಹುಳ ಕಂಡುಬಂದಿದ್ದು ಇದನ್ನು ನೋಡಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಆಗಸ್ಟ್ 19ರಂದು ಆಹಾರ ಇಲಾಖೆಯ ಗೋದಾಮಿನಿಂದ ಸರಬರಾಜು ಮಾಡಿದ್ದ ಅಕ್ಕಿ ಮೂಟೆಗಳಲ್ಲಿ ಪೂರ್ತಿಯಾಗಿ ಹುಳುಗಳು ಪತ್ತೆಯಾಗಿದೆ. ನಿಡ್ಲೆ ಪಡಿತರ ಕೇಂದ್ರಕ್ಕೆ ಪೂರೈಸಿರುವ 50ಕ್ಕೂ ಹೆಚ್ಚು ಗೋಣಿ ಚೀಲದ ಅಕ್ಕಿಯಲ್ಲಿ ಭಾರೀ ಪ್ರಮಾಣದಲ್ಲಿ ಹುಳುಗಳು ಕಂಡುಬಂದಿದ್ದು ಖರೀದಿಗೆ ಬಂದಿದ್ದವರು ಶಾಕ್ ಆಗಿದ್ದಾರೆ. 

 

ಗೋಣಿ ಚೀಲದಲ್ಲಿ 2024 ರಲ್ಲಿ ಪ್ಯಾಕ್ ಮಾಡಲಾಗಿದ್ದೆಂದು ಲೇಬಲ್ ಹಾಕಲಾಗಿದ್ದು ಎರಡು ವರ್ಷಗಳಿಂದ ಹಾಗೆಯೇ ಇಟ್ಟಿರುವುದರಿಂದ ಹುಳ ಆಗಿರುವ ಶಂಕೆಯಿದೆ. ಪಡಿತರ ಅಕ್ಕಿ ಬಂದ ಖುಷಿಯಲ್ಲಿ ಅಂಗಡಿಗೆ ಬಂದ ಜನರು ಹುಳಗಳಿದ್ದ ಅಕ್ಕಿಯನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದರು. ಒಂದೆಡೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಸಚಿವ ಯು.ಟಿ ಖಾದರ್ ತವರು ಜಿಲ್ಲೆಯಲ್ಲೇ ಈ ರೀತಿ ಹುಳ ಬಿದ್ದ ಅಕ್ಕಿ ಪೂರೈಕೆಯಾಗಿದ್ದು, ಅನ್ನಭಾಗ್ಯ ಅಕ್ಕಿಯ‌ ಪರೀಕ್ಷೆ ಯಾವಾಗ ಎಂದು ಜನರು ಕೇಳುವ ಸ್ಥಿತಿಯಾಗಿದೆ.