ಬ್ರೇಕಿಂಗ್ ನ್ಯೂಸ್
10-07-26 03:25 pm HK News Staffer ಕ್ರೈಂ
ಮಂಗಳೂರು, ಜುಲೈ 10: ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರೂ, ಮಂಗಳೂರು ಸೇರಿದಂತೆ ಬಹುತೇಕ ಕಡೆ ವಸತಿಯುತ ಖಾಸಗಿ ಶಾಲೆಗಳು ರಜೆ ನೀಡದೆ ತರಗತಿ ನಡೆಸಿವೆ. ಮೂರು ಬಾರಿಯೂ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಜಿಲ್ಲಾಡಳಿತ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ಕಾರಣ ಕೇಳಿ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.
ಈ ಬಾರಿ ವಿಳಂಬವಾಗಿಯೇ ಮಳೆ ಶುರುವಾಗಿದ್ದು ಒಂದು ತಿಂಗಳ ಬಳಿಕ ಮಳೆ ಜೋರಾಗಿದೆ. ರೆಡ್ ಅಲರ್ಟ್ ಘೋಷಣೆ ಮಾಡಿರುವುದು ಕೂಡ ಬಹಳ ಕಡಿಮೆ. ಆದರೆ ಕಳೆದೊಂದು ವಾರದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲೆ ಮತ್ತು ಪಿಯು ವರೆಗಿನ ಕಾಲೇಜುಗಳಿಗೆ ಮೂರು ರಜೆಗಳನ್ನು ಘೋಷಣೆ ಮಾಡಿತ್ತು. ಆದರೆ ಈ ರಜೆ ಆದೇಶ ಉಲ್ಲಂಘಿಸಿ ಕೆಲವು ಖಾಸಗಿ ಶಾಲೆಗಳಲ್ಲಿ ತರಗತಿ ನಡೆಸಲಾಗಿದೆ ಎಂದು ದೂರು ಬಂದಿದ್ದು, ಹತ್ತಕ್ಕೂ ಹೆಚ್ಚು ಶಾಲೆ, ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿದೆ.
ಮೊದಲ ರಜೆ ಘೋಷಣೆ ಮಾಡಿದಾಗಲೇ ಬಹಳಷ್ಟು ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿ ಬಳಿಕ ತರಗತಿಗಳನ್ನು ನಡೆಸಿದ್ದವು. ವಿಷಯ ತಿಳಿದು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಶಾಲೆ, ಕಾಲೇಜುಗಳಿಗೆ ಎಚ್ಚರಿಕೆ ರವಾನಿಸಿದ್ದರು. ಎರಡನೇ ಬಾರಿ ರಜೆ ಘೋಷಣೆ ಮಾಡಿದಾಗಲೂ ಇದೇ ರೀತಿಯಾಗಿದ್ದು ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸಲಾಗಿತ್ತು. ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘನೆಯಾಗಿದ್ದರಿಂದ ಸದರಿ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ನಲ್ಲಿ ಯಾವ ಕಾರಣಕ್ಕೆ ರಜೆ ನೀಡಿಲ್ಲ ಎನ್ನುವ ವಿವರವನ್ನು ಏಳು ದಿನಗಳ ಒಳಗೆ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾಡಳಿತದ ರಜೆ ಆದೇಶ ಉಲ್ಲಂಘಿಸಿದ ಶಾಲೆ, ಕಾಲೇಜುಗಳ ಬಗ್ಗೆ ದೂರು ನೀಡಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದ.ಕ. ಜಿಲ್ಲಾಡಳಿತಕ್ಕೆ ಅನೇಕ ವಿದ್ಯಾರ್ಥಿಗಳು ದೂರವಾಣಿ ಮತ್ತು ಇತರ ಮೂಲಗಳ ಮೂಲಕ ದೂರುಗಳನ್ನು ನೀಡಿದ್ದು ಇದನ್ನು ಆಧರಿಸಿ ನೋಟಿಸ್ ಜಾರಿಗೊಳಿಸಲಾಗಿದೆ.
ರಜೆ ಘೋಷಣೆ ಮಾಡಿದ ಬಳಿಕವೂ ಕೆಲವು ಖಾಸಗಿ ಶಾಲೆ- ಕಾಲೇಜುಗಳಲ್ಲಿ ತರಗತಿ ನಡೆಸಲಾಗಿದೆ. ಆರಂಭದಲ್ಲಿ ಎಚ್ಚರಿಕೆ ನೀಡಿ ಬಿಟ್ಟಿದ್ದೆವು. ಆದರೆ ಮತ್ತೆ ಮತ್ತೆ ಉಲ್ಲಂಘನೆಯಾದಾಗ ನೋಟಿಸ್ ನೀಡುವುದನ್ನು ಮಾಡಿದ್ದೇವೆ. ಮುಂದೆಯೂ ಪುನರಾವರ್ತನೆಯಾದರೆ ಅವರ ಶಾಲಾ ಪರವಾನಗಿಯನ್ನು ರದ್ದು ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿ ಡಾ.ಎಚ್.ವಿ ದರ್ಶನ್ ಹೇಳಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm