ಬ್ರೇಕಿಂಗ್ ನ್ಯೂಸ್
01-07-26 06:52 pm HK News Staffer ಕ್ರೈಂ
ಚಿಕ್ಕಬಳ್ಳಾಪುರ, ಜುಲೈ 01: ಒಂದು ಹೋಂಸ್ಟೇ... ಒಂದು ಮುಚ್ಚಿದ ಕೊಠಡಿ... ಒಬ್ಬ ಯುವತಿಯ ಶವ... ಮತ್ತೊಬ್ಬ ಯುವಕ ಜೀವ-ಮರಣದ ನಡುವೆ ಹೋರಾಟ. ನಂದಿಬೆಟ್ಟದ ತಪ್ಪಲಿನಲ್ಲಿ ನಡೆದ ಈ ನಿಗೂಢ ಘಟನೆ ಕೇವಲ ಆತ್ಮಹತ್ಯೆಯೇ, ಅಥವಾ ಅದರ ಹಿಂದೆ ಇನ್ನೇನಾದರೂ ಭಯಾನಕ ರಹಸ್ಯ ಅಡಗಿದೆಯೇ? ಸ್ಥಳದಲ್ಲಿ ಪತ್ತೆಯಾದ ಡೈರಿ ಮತ್ತು ಕುಟುಂಬದ ಆರೋಪಗಳು ಪ್ರಕರಣವನ್ನು ಮತ್ತಷ್ಟು ರೋಚಕ ಹಾಗೂ ಸಂಕೀರ್ಣವಾಗಿಸಿವೆ.
ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂಸ್ಟೇನಲ್ಲಿ ಬೆಂಗಳೂರಿನ ಫಿಸಿಯೋಥೆರಪಿಸ್ಟ್ ಸಾಯಿ ಸುರಭಿ (30) ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಘಟನಾ ಸ್ಥಳದಲ್ಲಿ ಕೇರಳ ಮೂಲದ ಸಂಜೀತ್ ಅಲಿ ಬರೆದಿದ್ದಾನೆ ಎನ್ನಲಾದ ಭಾವನಾತ್ಮಕ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣದ ತನಿಖೆಗೆ ಹೊಸ ಆಯಾಮ ದೊರೆತಿದೆ. ಇದೇ ವೇಳೆ ಮೃತಳ ತಾಯಿ ಈ ಪ್ರಕರಣವನ್ನು 'ಲವ್ ಜಿಹಾದ್ ಕೊಲೆ' ಎಂದು ಆರೋಪಿಸಿದ್ದು, ಪೊಲೀಸರು ಕೊಲೆ, ಆತ್ಮಹತ್ಯೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ನಿವಾಸಿಯಾಗಿರುವ ಸಾಯಿ ಸುರಭಿ ಹಾಗೂ ಕೇರಳದ ಕೋಳಿಕ್ಕೋಡ್ ಮೂಲದ ಕ್ಯಾಬ್ ಚಾಲಕ ಸಂಜೀತ್ ಅಲಿ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂಸ್ಟೇನಲ್ಲಿ ತಂಗಿದ್ದರು. ಆದರೆ, ಸಂಜೀತ್ ಅಲಿ ಮಾತ್ರ ಒಬ್ಬನೇ ಹೋಂಸ್ಟೇಗೆ ಬಂದಿದ್ದನು. ಯುವತಿ ಯಾವಾಗ ಕೊಠಡಿಗೆ ಬಂದಳು ಎಂಬುದು ಗೊತ್ತಿಲ್ಲ ಎಂದು ಹೋಂಸ್ಟೇ ಕೇರ್ಟೇಕರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಚೆಕ್ಔಟ್ ಸಮಯ ಮುಗಿದರೂ ಕೊಠಡಿಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಸುರಭಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನೇಣು ಹಾಕಿದ್ದ ಹಗ್ಗ ಕತ್ತರಿಸಿದ ಸ್ಥಿತಿಯಲ್ಲಿದ್ದು, ಕೊಠಡಿಯಲ್ಲೇ ಸಂಜೀತ್ ಅಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ ನಿದ್ರೆ ಮಾತ್ರೆ ಅಥವಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬ ಶಂಕೆಯಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಹೀಗಾಗಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಡೈರಿಯಲ್ಲಿ ಸಂಜೀತ್ ಅಲಿ ಬರೆದಿದ್ದಾನೆ ಎನ್ನಲಾದ ಭಾವನಾತ್ಮಕ ಬರಹ ಪತ್ತೆಯಾಗಿದೆ. "ನನ್ನ ಪ್ರಿಯತಮೆ ಹಿಂದೂ... ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? ಅನ್ಯಧರ್ಮದವರಾಗಿದ್ದ ಕಾರಣ ನಮ್ಮ ಮದುವೆ ಆಗಲಿಲ್ಲ. ನಮ್ಮ ಪ್ರೀತಿಯನ್ನು ಈ ಸಮಾಜ ಒಪ್ಪಲಿಲ್ಲ" ಎಂಬ ಅಂಶಗಳು ಅದರಲ್ಲಿ ಉಲ್ಲೇಖವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡೈರಿಯನ್ನು ಪೊಲೀಸರು ವಶಕ್ಕೆ ಪಡೆದು ಅದರ ಹಸ್ತಾಕ್ಷರ ಹಾಗೂ ನಿಖರತೆಯನ್ನು ಪರಿಶೀಲಿಸುತ್ತಿದ್ದಾರೆ.
ಈ ನಡುವೆ ಮೃತಳ ತಾಯಿ ಗೀತಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಸಂಜೀತ್ ಅಲಿ ಸುರಭಿಗೆ ಪರಿಚಯವಾಗಿ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ. ಈತನ ಕಾಟ ತಪ್ಪಿಸಲು ಬೇರೆ ಕಾಲೇಜಿಗೆ ಸೇರಿಸಿದರೂ ಅಲ್ಲಿಗೂ ಹೋಗಿ ಕಿರುಕುಳ ನೀಡುತ್ತಿದ್ದ. ತನ್ನ ಮಗಳನ್ನು ಡ್ರಗ್ಸ್ ಹಾಗೂ ಮದ್ಯದ ವ್ಯಸನಕ್ಕೆ ತಳ್ಳಿದ್ದ. ನಂತರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಸರಿದಾರಿಗೆ ತಂದಿದ್ದರೂ, ಮತ್ತೆ ಸಂಪರ್ಕಿಸಿ ಮುದ್ದೇನಹಳ್ಳಿಯ ಹೋಂಸ್ಟೇಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಹತ್ತು ದಿನಗಳ ಹಿಂದಷ್ಟೇ ಚಿಕ್ಕಬಳ್ಳಾಪುರದ ಶ್ರೀ ಸತ್ಯಸಾಯಿ ಆಸ್ಪತ್ರೆಗೆ ಫಿಸಿಯೋಥೆರಪಿಸ್ಟ್ ಆಗಿ ಸುರಭಿ ಕೆಲಸಕ್ಕೆ ಸೇರಿದ್ದಳು. ಶನಿವಾರ ಸತ್ಸಂಗ ಕಾರ್ಯಕ್ರಮಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದಳು. ಆದರೆ, ಸಂಜೀತ್ ಅಲಿಯನ್ನು ಭೇಟಿಯಾಗಿದ್ದ ವಿಚಾರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ತಾಯಿ ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯದ ಆತ್ಮಹತ್ಯೆಯಂತೆ ಕಂಡರೂ, ತನಿಖಾಧಿಕಾರಿಗಳಿಗೆ ಹಲವು ಅನುಮಾನಗಳು ಮೂಡಿವೆ. ಸುಮಾರು 10 ಅಡಿ ಎತ್ತರದ ಫ್ಯಾನ್ಗೆ ಸುರಭಿ ನೇಣು ಬಿಗಿದುಕೊಂಡಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ. ಸಂಜೀತ್ ಅಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆಯೇ ಅಥವಾ ಪ್ರಕರಣದಲ್ಲಿ ಮತ್ತೇನಾದರೂ ನಡೆದಿದೆ ಎಂಬ ಎಲ್ಲಾ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಕೊಠಡಿಯಿಂದ ಕೆಲವು ಔಷಧಿಗಳು, ಗಾಂಜಾ ಸೇವನೆಗೆ ಬಳಸುವ ಹುಕ್ಕಾ, ಓಲ್ಡ್ ಮಾಂಕ್ ಮದ್ಯದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಎಲ್ಲವನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಸಾಕ್ಷ್ಯಗಳು, ಡೆತ್ ನೋಟ್, ಎಫ್ಎಸ್ಎಲ್ ವರದಿ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸಂಜೀತ್ ಅಲಿಯ ಹೇಳಿಕೆ ಬಂದ ಬಳಿಕವಷ್ಟೇ ಸುರಭಿ ಸಾವಿನ ಹಿಂದಿನ ನಿಜವಾದ ಕಾರಣ ಬಹಿರಂಗವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ತಿಳಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am