ಬ್ರೇಕಿಂಗ್ ನ್ಯೂಸ್
19-05-26 04:23 pm HK News Staffer ಕ್ರೈಂ
ಬೆಂಗಳೂರು, ಮೇ 20: ಪ್ರಧಾನಿ ಮೋದಿ, ಇನ್ಫೋಸಿಸ್ ನಾರಾಯಣ್ ಮೂರ್ತಿ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ. ಅನಿಲ್ ಅಂಬಾನಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇನ್ನೂ ಹಲವರ ಹೆಸರನ್ನು ದುರುಪಯೋಗಪಡಿಸಿಕೊಂಡು, “ದಿನಕ್ಕೆ ₹1 ಲಕ್ಷ ಗಳಿಸುವ ಯೋಜನೆ” ಎಂದು ಹೇಳುವ ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ. ಹಲವರು ಈ ವಿಡಿಯೋವನ್ನು ಹಂಚಿಕೊಂಡು, “ಕ್ವಾಂಟ್ರಮ್ ಎಐ” ಹೆಸರಿನ ಹೂಡಿಕೆ ಯೋಜನೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ಹರಡುತ್ತಿದ್ದಾರೆ.
ಸುಮಾರು 3 ನಿಮಿಷ 34 ಸೆಕೆಂಡ್ ಅವಧಿಯ ಈ ವೈರಲ್ ವಿಡಿಯೋದಲ್ಲಿ ಮೋದಿ, ಸುಧಾ ಮೂರ್ತಿ, ಪ್ರಿಯಾಂಕಾ ಗಾಂಧಿ ಜನರಿಗೆ “ಕ್ವಾಂಟ್ರಮ್ ಎಐ” ಪ್ರೋಗ್ರಾಂ ಮೂಲಕ ದಿನಕ್ಕೆ ಕನಿಷ್ಠ ₹1 ಲಕ್ಷ ಗಳಿಸಬಹುದು ಎಂದು ಹೇಳುತ್ತಿರುವಂತೆ ತೋರಿಸಲಾಗಿದೆ. ವಿಡಿಯೋದಲ್ಲಿ ಎಐ ಆಧಾರಿತ ತಂತ್ರಜ್ಞಾನದಿಂದ ಹಣಕಾಸು ಮಾರುಕಟ್ಟೆ ವಿಶ್ಲೇಷಣೆ ಮಾಡಬಹುದು, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಹಣ ಗಳಿಸಬಹುದು ಹಾಗೂ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಂಡರೆ ವೈಯಕ್ತಿಕ ವ್ಯವಸ್ಥಾಪಕರು ಸಂಪರ್ಕಿಸುತ್ತಾರೆ ಎಂಬ ಹೇಳಿಕೆಗಳನ್ನೂ ಸೇರಿಸಲಾಗಿದೆ.
ಆದರೆ ಈ ವಿಡಿಯೋ ಕುರಿತು ನಡೆದ ಫ್ಯಾಕ್ಟ್ ಚೆಕ್ನಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ. ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮೋದಿ, ಸುಧಾ ಮೂರ್ತಿ, ಪ್ರಿಯಾಂಕಾ ಗಾಂಧಿ ಅವರ ತುಟಿ ಚಲನೆಗಳು ಆಡಿಯೋ ಭಾಗಕ್ಕೆ ಹೊಂದಿಕೆಯಾಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಧ್ವನಿಯನ್ನು ಕೃತಕವಾಗಿ ಸೇರಿಸಿರುವ ಅನುಮಾನ ವ್ಯಕ್ತವಾಯಿತು.
ಬಳಿಕ ಗೂಗಲ್ ಲೆನ್ಸ್ ಮೂಲಕ ವಿಡಿಯೋದ ಕೀಫ್ರೇಮ್ಗಳನ್ನು ಪರಿಶೀಲಿಸಿದಾಗ, ಇದೇ ಮೂಲ ವಿಡಿಯೋ 2017ರಲ್ಲಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದದ್ದು ಪತ್ತೆಯಾಗಿದೆ. “ಶ್ರೀಮತಿ ಜಮ್ನಾಬಾಯಿ ನರ್ಸೀ ಕ್ಯಾಂಪಸ್ನಲ್ಲಿ ಸುಧಾ ಮೂರ್ತಿ” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾಗಿದ್ದ ಆ ನೈಜ ವಿಡಿಯೋದಲ್ಲಿ, ಮಕ್ಕಳನ್ನು ಆಡಂಬರದಿಂದ ಬೆಳೆಸಿದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದರು. ಇದರಲ್ಲಿ ಯಾವುದೇ ಹೂಡಿಕೆ, ಹಣ ಗಳಿಕೆ ಅಥವಾ “ಕ್ವಾಂಟ್ರಮ್ ಎಐ” ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ.
ಮುಂದಿನ ತಾಂತ್ರಿಕ ಪರಿಶೀಲನೆಯಲ್ಲಿ ವೈರಲ್ ವಿಡಿಯೋದ ಆಡಿಯೋ ಭಾಗವನ್ನು ಪ್ರತ್ಯೇಕಿಸಿ AI ಪತ್ತೆ ಸಾಧನಗಳ ಮೂಲಕ ಪರೀಕ್ಷಿಸಿದಾಗ, ಅದು AI Generated ಧ್ವನಿ ಎಂಬುದು ದೃಢಪಟ್ಟಿದೆ. ಅಂದರೆ, ಹಳೆಯ ನೈಜ ವಿಡಿಯೋಗೆ ಕೃತಕ ಬುದ್ಧಿಮತ್ತೆ ಬಳಸಿ ಹೊಸ ಧ್ವನಿ ಸೇರಿಸಿ, ನಕಲಿ ಹೂಡಿಕೆ ಪ್ರಚಾರಕ್ಕೆ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿದೆ.


ಇದಲ್ಲದೆ, “ಕ್ವಾಂಟ್ರಮ್ ಎಐ” ಯೋಜನೆ ಕುರಿತು ಸುಧಾ ಮೂರ್ತಿ, ಮೋದಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖರು ಅವರ ಯಾವುದೇ ಅಧಿಕೃತ ಹೇಳಿಕೆ, ಪ್ರಮಾಣಿತ ವೆಬ್ಸೈಟ್ ಅಥವಾ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸಂಪೂರ್ಣ ದಾರಿ ತಪ್ಪಿಸುವ ಮತ್ತು ನಕಲಿ ಮಾಹಿತಿ ಒಳಗೊಂಡಿರುವುದು ಖಚಿತವಾಗಿದೆ.
ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ, ಧ್ವನಿ ಹಾಗೂ ಹೂಡಿಕೆ ಜಾಹೀರಾತುಗಳ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಹರಡುವ “ತ್ವರಿತ ಹಣ ಗಳಿಕೆ” ಯೋಜನೆಗಳನ್ನು ಅಂಧವಾಗಿ ನಂಬಬಾರದು. ಯಾವುದೇ ಹೂಡಿಕೆ ಮಾಡುವ ಮೊದಲು ಅದರ ಅಧಿಕೃತತೆ ಮತ್ತು ಮೂಲವನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಡಿಯೋ ಸತ್ಯವಾಗಿರಬೇಕೆಂದಿಲ್ಲ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು.
“Earn ₹1 lakh per day” videos using PM Modi and #PriyankaGandhi clips are going viral on social media. Experts warn these are likely fake investment scams using #AI-edited videos to trap people. Don’t fall for it and invest blindly, otherwise you may end up losing your money. pic.twitter.com/tiJyUl5jba
— Headline Karnataka (@hknewsonline) May 19, 2026
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am