ಬ್ರೇಕಿಂಗ್ ನ್ಯೂಸ್
17-05-26 09:10 pm HK News Staffer ಕ್ರೈಂ
ಮಂಗಳೂರು, ಮೇ 17: ಉಳ್ಳಾಲದ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಇಸ್ರೇಲ್ ತೆರಳಿದ ಪ್ರಕರಣದಲ್ಲಿ ಪೊಲೀಸರೇ ಎಡವಟ್ಟು ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ.
ಉಳ್ಳಾಲಬೈಲು ನಿವಾಸಿ ಪ್ರೀತಾ ಡಿಸೋಜ ಎಂಬವರು ಯಶೋಧ ಕೇಶವ ಎಂಬ ಮಹಿಳೆಯ ಹೆಸರಲ್ಲಿ ಪಾಸ್ಪೋರ್ಟ್ ಅರ್ಜಿ ಸಲ್ಲಿಸಿ ಪ್ರತ್ಯೇಕ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ದಾಖಲೆಯಲ್ಲಿ ಯಶೋಧ ಎನ್ನುವ ಹೆಸರಿದ್ದರೂ, ಅರ್ಜಿಯಲ್ಲಿ ಪ್ರೀತಾ ಡಿಸೋಜ ಅವರದ್ದೇ ಫೋಟೋ ಲಗತ್ತಿಸಲಾಗಿತ್ತು. ಹೀಗಾಗಿ ಪರಿಶೀಲನೆ ಸಂದರ್ಭದಲ್ಲಿ ತಪ್ಪೆಸಗಿದ್ದು ಪೊಲೀಸರಿಗೆ ಅರಿವಿಗೆ ಬಂದಿರಲಿಲ್ಲ.
ತಪ್ಪು ಮಾಹಿತಿ ನೀಡಿ ಪಾಸ್ಪೋರ್ಟ್ ಮಾಡಿಸಿದ್ದಲ್ಲದೆ, ಅದೇ ನಕಲಿ ವಿಳಾಸದ ಮೂಲಕ ಪ್ರೀತಾ ಡಿಸೋಜ 2025ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ಇಸ್ರೇಲ್ ತೆರಳಿದ್ದರು. ಆದರೆ ಆ ಸಂದರ್ಭದಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ಮತ್ತು ಪಾಸ್ಪೋರ್ಟ್ ಪರಿಶೀಲನೆ ಮಾಡಿದ್ದ ಹೆಡ್ ಕಾನ್ಸ್ ಟೇಬಲ್ ಅವರ ನಿರ್ಲಕ್ಷ್ಯದಿಂದಾಗಿ ಪ್ರಮಾದ ಆಗಿರುವುದು ಮೇಲ್ನೋಟಕ್ಕೆ ವ್ಯಕ್ತವಾಗಿದ್ದರಿಂದ ಪೊಲೀಸ್ ಕಮಿಷನರ್ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ.
ಪಾಸ್ಪೋರ್ಟ್ ಸೇವಾ ಪೋರ್ಟಲ್ ದಾಖಲೆಗಳ ಪ್ರಕಾರ, ಅರ್ಜಿಯಲ್ಲಿ ಯಶೋಧ ಕೇಶವ ಎಂಬುದಾಗಿ ಕೈಬರಹದಲ್ಲಿ ನಮೂದಿಸಿದ್ದು, ಪ್ರೀತಾ ಡಿಸೋಜ ಅವರ ಫೋಟೋ ಲಗತ್ತಿಸಲಾಗಿತ್ತು. ಯಶೋಧ ಹೆಸರಿನ ಸಹಿಯನ್ನೂ ಪ್ರೀತಾ ಡಿಸೋಜ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಇಷ್ಟೆಲ್ಲ ಅವಾಂತರ ಮಾಡಿದ್ದರೂ ಪರಿಶೀಲನೆ ಮಾಡಿದ್ದ ಅಂದಿನ ಪೊಲೀಸರು, ಸರಿಯಾದ ದಾಖಲೆಗಳನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದು ಎದ್ದು ಕಾಣುತ್ತದೆ.
ಈ ಅಕ್ರಮಕ್ಕೆ ಉಳ್ಳಾಲ ನಿವಾಸಿ ಪ್ರೇಮ್ ಡಿಸೋಜ ಎಂಬಾತ ಸಹಕರಿಸಿದ್ದು, ಪ್ರೀತಾಳನ್ನು ಇಸ್ರೇಲ್ ಕಳುಹಿಸುವ ಉದ್ದೇಶದಿಂದ ತನ್ನ ಪರಿಚಯದ ಯಶೋಧ ಅವರ ದಾಖಲೆಗಳನ್ನು ತಯಾರಿ ಮಾಡಿಕೊಟ್ಟಿದ್ದ. ಇದೀಗ ಅಕ್ರಮ ತಿಳಿಯುತ್ತಿದ್ದಂತೆ ಉಳ್ಳಾಲ ಠಾಣೆಯಲ್ಲಿ ಪ್ರೇಮ್ ಡಿಸೋಜ, ಪ್ರೀತಾ ಡಿಸೋಜ, ಯಶೋಧ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am