ಬ್ರೇಕಿಂಗ್ ನ್ಯೂಸ್
14-05-26 01:41 pm HK News Staffer ಕ್ರೈಂ
ಉಳ್ಳಾಲ, ಮೇ 14: ಉಳ್ಳಾಲ ಬೈಲ್ ಮೂಲದ ಮಹಿಳೆಯೊಬ್ಬರ ದಾಖಲಾತಿಗಳನ್ನು ದುರುಪಯೋಗಪಡಿಸಿ ಬೇರೊಬ್ಬ ಮಹಿಳೆ ನಕಲಿ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ತೆರಳಿದ ಘಟನೆ ನಡೆದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಬಿ. ಅವರ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಶೋಧ ಕೇಶವ ಎಂಬವರ ಹೆಸರಿನಲ್ಲಿ ಅನ್ಯ ಮಹಿಳೆ ಪಾಸ್‌ಪೋರ್ಟ್ ಪಡೆದು ವಿದೇಶ ಪ್ರಯಾಣ ಮಾಡಿರುವ ಕುರಿತು ಮೇ 8ರಂದು ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು.
ಪಾಸ್‌ಪೋರ್ಟ್ ಅಪ್ಲಿಕೇಶನ್ ಸಂಖ್ಯೆ BNX067061521924 ಪರಿಶೀಲಿಸಿದ ವೇಳೆ ಅರ್ಜಿಯಲ್ಲಿ ನಮೂದಿಸಿದ್ದ ಹೆಸರು, ವಿಳಾಸ ಹಾಗೂ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ. ತನಿಖೆಯಲ್ಲಿ ಪಾಸ್‌ಪೋರ್ಟ್‌ನಲ್ಲಿ ಬಳಸಿದ್ದ ಭಾವಚಿತ್ರವು ಪ್ರೀತಾ ಡಿ’ಸೋಜಾ ಎಂಬವರದ್ದು ಎಂದು ತಿಳಿದುಬಂದಿದೆ. ಪಾಸ್‌ಪೋರ್ಟ್ ಸೇವಾ ಪೋರ್ಟಲ್ ದಾಖಲೆಗಳ ಪ್ರಕಾರ, ಅರ್ಜಿಯಲ್ಲಿ “ಯಶೋಧ ಕೇಶವ “ ಎಂದು ಕೈಬರಹದಲ್ಲಿ ನಮೂದಿಸಿ, ಅದರೊಂದಿಗೆ ಪ್ರೀತಾ ಡಿ’ಸೋಜಾ ಅವರ ಭಾವಚಿತ್ರ ಅಳವಡಿಸಲಾಗಿತ್ತು. ಯಶೋಧ ಎಂಬ ಹೆಸರಿನ ಸಹಿಯನ್ನೂ ಪ್ರೀತಾ ಡಿ’ಸೋಜ ಅವರೇ ಮಾಡಿರುವುದು ಪತ್ತೆಯಾಗಿದೆ.
ಇನ್ನಷ್ಟು ಪರಿಶೀಲನೆ ನಡೆಸಿದಾಗ, ಪ್ರೀತಾ ಡಿ’ಸೋಜಾ ಅವರು ಯಶೋಧ ಕೇಶವ ಅವರ ದಾಖಲೆಗಳಲ್ಲಿದ್ದ ವಿಳಾಸವನ್ನು ಬಳಸಿ ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಪಾಸ್‌ಪೋರ್ಟ್ ಪಡೆದು, 2025ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಿರುವುದು ತಿಳಿದುಬಂದಿದೆ.
ಅಕ್ರಮಕ್ಕೆ ಉಳ್ಳಾಲ ನಿವಾಸಿ ಪ್ರೇಮ್ ಡಿ’ಸೋಜಾ ಸಹಕಾರ ನೀಡಿದ್ದಾನೆ ಎನ್ನಲಾಗಿದ್ದು, ಪ್ರೀತಾ ಡಿ’ಸೋಜಾ ಅವರನ್ನು ಇಸ್ರೇಲ್‌ಗೆ ಕಳುಹಿಸುವ ಉದ್ದೇಶದಿಂದ ಯಶೋಧ ಕೇಶವ ಎಂಬವರ ದಾಖಲಾತಿಗಳನ್ನು ಬಳಸಿ ಪಾಸ್‌ಪೋರ್ಟ್ ಸಿದ್ಧಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗೆಯೇ, ಯಶೋಧ ಕೇಶವ ಅವರು ತಮ್ಮ ದಾಖಲಾತಿಗಳನ್ನು ಪ್ರೀತಾ ಡಿ’ಸೋಜಾ ಅವರಿಗೆ ನೀಡಿ ನಕಲಿ ಪಾಸ್‌ಪೋರ್ಟ್ ಪಡೆಯಲು ಸಹಕರಿಸಿರುವ ಆರೋಪವೂ ಕೇಳಿಬಂದಿದೆ. ಪ್ರಕರಣದಲ್ಲಿ ಪ್ರೀತಾ ಡಿ’ಸೋಜಾ, ಪ್ರೇಮ್ ಡಿ’ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಇತರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am