ಬ್ರೇಕಿಂಗ್ ನ್ಯೂಸ್
13-05-26 09:25 pm HK News Desk ಕ್ರೈಂ
ಮುಂಬೈ, ಮೇ 13: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೆಂದು ವಿಪಕ್ಷಗಳು ಟೀಕೆ ಮಾಡಿದ್ದರೆ, ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆ ಆರಂಭಿಸಿವೆ. ಇದೇ ವೇಳೆ, ರಾಜಸ್ಥಾನ ಪೊಲೀಸರು ಪ್ರಕರಣ ಸಂಬಂಧಿಸಿ 15ಕ್ಕು ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಶ್ನೆಪತ್ರಿಕೆ ಮಹಾರಾಷ್ಟ್ರದ ನಾಸಿಕ್ ಅಥವಾ ಪುಣೆಯಿಂದ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು, 30 ಸಾವಿರದಿಂದ 28 ಲಕ್ಷ ರು. ವರೆಗಿನ ದರದಲ್ಲಿ ಬೇಕಾಬಿಟ್ಟಿ ಮಾರಾಟವಾಗಿದೆ. 410 ಪ್ರಶ್ನೆಗಳ ಅಭ್ಯಾಸ ಪ್ರಶ್ನೆಪತ್ರಿಕೆಗಳ ರೂಪದಲ್ಲಿ ವಿದ್ಯಾರ್ಥಿಗಳಿಗೆ ಇದನ್ನು ಹಂಚಿಕೆ ಮಾಡಲಾಗಿದ್ದು, ಇದರಲ್ಲಿದ್ದ 120 ಪ್ರಶ್ನೆಗಳು ನೀಟ್ ಪರೀಕ್ಷೆಯಲ್ಲಿ ಬಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಎನ್ಟಿಎಯು ಅನಿವಾರ್ಯವಾಗಿ ಪರೀಕ್ಷೆಯನ್ನೇ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಈ ಹಿಂದೆಯೂ ನೀಟ್ ಪರೀಕ್ಷೆ ವೇಳೆ ಅಕ್ರಮದ ಆರೋಪ ಕೇಳಿಬಂದಿತ್ತಾದರೂ ಈ ರೀತಿ ಪರೀಕ್ಷೆ ರದ್ದು ಮಾಡುತ್ತಿರುವುದು ಇದೇ ಮೊದಲು. ಮರುಪರೀಕ್ಷೆ ದಿನಾಂಕವನ್ನು ಮುಂದಿನ 8-10 ದಿನಗಳಲ್ಲಿ ಪ್ರಕಟಿಸುವುದಾಗಿ ಎನ್ಟಿಎ ತಿಳಿಸಿದೆ. 'ಪರೀಕ್ಷೆ ರದ್ದು ಮಾಡುವ ನಿರ್ಧಾರವನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ಮತ್ತು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕೈಗೊಳ್ಳಲಾಗಿದೆ' ಎಂದು ಎನ್ಟಿಎ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೊಂಡಿದೆ. ಮೇ 3ರಂದು ಬೆಂಗಳೂರು ಸೇರಿ ದೇಶದ 551 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು.

ನಾಸಿಕ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಲೀಕ್ ?
ನೀಟ್ ಪ್ರಶ್ನೆಪತ್ರಿಕೆ ನಾಸಿಕ್ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸುವ ಪ್ರೆಸ್ನಿಂದಲೇ ಲೀಕ್ ಆಗಿರುವ ಶಂಕೆ ಇದೆ. ಪ್ರೆಸ್ಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಒಂದು ಪ್ರತಿಯನ್ನು ಆರೋಪಿಗಳಿಗೆ ವರ್ಗಾಯಿಸಿದ್ದಾರೆ. ಆ ಬಳಿಕ ಅದು ಹರ್ಯಾಣದ ಗುರುಗ್ರಾಮದ ವೈದ್ಯರೊಬ್ಬರನ್ನು ತಲುಪಿದೆ. ವೈದ್ಯನಿಂದ ಜೈಪುರದ ಜಾಮ್ವಾ ರಾಮಗಢ ಮೂಲದ ವ್ಯಕ್ತಿಗೆ, ಅಲ್ಲಿಂದ ರಾಜಸ್ಥಾನದ ಸಿಕಾರ್ನ ರಾಕೇಶ್ ಕುಮಾರ್ ಎಂಬ ವ್ಯಕ್ತಿಯನ್ನು ತಲುಪಿತ್ತು. ಆತ ಪ್ರಮುಖ ಕೋಚಿಂಗ್ ಸಂಸ್ಥೆಗಳಿಗೆ ತಲುಪಿಸಿದ್ದಾನೆ. ಪರೀಕ್ಷೆಗೆ 4 ದಿನ ಮೊದಲು ನಾಗ್ಪುರದಿಂದ ಸಿಕಾರ್ಗೆ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ 28 ಲಕ್ಷ ರು. ಕೊಟ್ಟು ಪ್ರಶ್ನೆಪತ್ರಿಕೆ ಖರೀದಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಇದೇ ವೇಳೆ, ಆರೋಪಿ ರಾಕೇಶ್ ಮೂಲಕ ಪ್ರಶ್ನೆಪತ್ರಿಕೆಯು ಕೇರಳದ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆಯ ಮುನ್ನಾ ದಿನ ತಲುಪಿತ್ತು. ಪಿಡಿಎಫ್ ರೂಪದಲ್ಲಿದ್ದ ಇದನ್ನು ಆಕೆ ಸಿಕಾರ್ನಲ್ಲಿ ಪಿಜಿ ನಡೆಸುತ್ತಿದ್ದ ತನ್ನ ತಂದೆಗೆ ಕಳುಹಿಸಿಕೊಟ್ಟಿದ್ದಾಳೆ. 'ಅಪ್ಪಾ, ನಾಳೆಯ ಪರೀಕ್ಷೆಯಲ್ಲಿ ಇದರಲ್ಲಿರುವ ಪ್ರಶ್ನೆಗಳೇ ಬರಲಿವೆ. ಪಿಜಿಯಲ್ಲಿರುವ ಹುಡುಗಿಯರಿಗೆ ಇದನ್ನು ಹಂಚಿ' ಎಂದೂ ತಿಳಿಸಿದ್ದಳು. ಅದರಂತೆ ಯುವಕನ ತಂದೆ ತಕ್ಷಣ ಅದನ್ನು ಪಿಜಿ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯ ತಂದೆ ಪರಿಚಿತ ಶಿಕ್ಷಕರೊಬ್ಬರ ಮೂಲಕ ಪ್ರಶ್ನೆ ಪತ್ರಿಕೆಯನ್ನು ತಾಳೆ ಹಾಕಿಸಿದ್ದಾರೆ. ಆಗ ಅಭ್ಯಾಸ ಪತ್ರಿಕೆಯಲ್ಲಿದ್ದ 45 ರಸಾಯನಶಾಸ್ತ್ರ ಪ್ರಶ್ನೆಗಳು ನೀಟ್ ಪರೀಕ್ಷೆಯಲ್ಲಿ ಒಂದೇ ಅನುಕ್ರಮದಲ್ಲಿ ಬಂದಿದ್ದವು.
ಪ್ರಶ್ನೆಪತ್ರಿಕೆ ಸೋರಿಕೆ ಖಚಿತವಾಗುತ್ತಿದ್ದಂತೆ ವಿದ್ಯಾರ್ಥಿನಿಯ ತಂದೆ, ತಕ್ಷಣ ಸಿಕಾರ್ನ ಉದ್ಯೋಗ್ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದಾಗ ಪರೀಕ್ಷೆ ನಡೆಸಿದ ಎನ್ಟಿಎಗೆ ಮಾಹಿತಿ ನೀಡಿದ್ದಾರೆ. ಎನ್ಟಿಎ ಈ ಮಾಹಿತಿಯನ್ನು ಇಂಟೆಲಿಜೆನ್ಸ್ ಬ್ಯುರೋಗೆ (ಐಬಿ) ಕಳುಹಿಸಿಕೊಟ್ಟಿದ್ದು, ಬಳಿಕ ರಾಜಸ್ಥಾನದಲ್ಲಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಬಳಿಕ ರಾಜಸ್ಥಾನ ಪೊಲೀಸರು ತನಿಖೆ ನಡೆಸಿ, ಸುಮಾರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am