ಬ್ರೇಕಿಂಗ್ ನ್ಯೂಸ್
23-02-26 09:15 pm HK News Desk ಕ್ರೈಂ
ನವದೆಹಲಿ, ಫೆ.23: ಹರಿಯಾಣದ ಗುರುಗ್ರಾಮ್ ನಗರದಲ್ಲಿ ಲಿವ್ ಇನ್ ಸಂಬಂಧದ ಹೆಸರಿನಲ್ಲಿ ಯುವತಿಯ ಮೇಲೆ ಪ್ರಿಯಕರನಿಂದಲೇ ಅಮಾನುಷ ಹಲ್ಲೆ ಕೃತ್ಯ ನಡೆದಿದ್ದು ಆಘಾತ ಮೂಡಿಸಿದೆ. ತ್ರಿಪುರಾ ಮೂಲದ 19 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ತನ್ನ ಸಂಗಾತಿಯಿಂದಲೇ ಗಂಭೀರ ಹಲ್ಲೆಗೀಡಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಸೆಕ್ಟರ್ 69 ರ ಪಿಜಿಯಲ್ಲಿ ವಾಸವಾಗಿದ್ದ ಸಂತ್ರಸ್ತೆ ಬಯೋಟೆಕ್ನಾಲಜಿ ಅಧ್ಯಯನ ಮಾಡುತ್ತಿದ್ದಳು. ಕಳೆದ ಸೆಪ್ಟೆಂಬರ್ನಲ್ಲಿ ಮೊಬೈಲ್ ಆ್ಯಪ್ ಮೂಲಕ ದೆಹಲಿಯ ನರೇಲಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯ ಭರವಸೆ ನೀಡಿದ ಶಿವಂ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಗುರುಗ್ರಾಮದ ಫ್ಲಾಟ್ನಲ್ಲಿ ಲಿವ್ ಇನ್ ಸಂಬಂಧ ಆರಂಭಿಸಿದ್ದ.
ಇತ್ತೀಚೆಗೆ ಇಬ್ಬರ ನಡುವೆ ಉಂಟಾದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆ, ಶಿವಂ ಯುವತಿಯ ಮೇಲೆ ಸತತ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಫೆಬ್ರವರಿ 16 ರಂದು ಹಿಂಸೆ ಮಿತಿಮೀರಿದ್ದು, ಯುವತಿಯ ತಲೆಯನ್ನು ಗೋಡೆಗೆ ಹೊಡೆದು, ಸ್ಟೀಲ್ ಬಾಟಲಿ ಹಾಗೂ ಮಣ್ಣಿನ ಮಡಕೆಯಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಯುವತಿಯ ಖಾಸಗಿ ಅಂಗಗಳಿಗೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಯುವತಿಯ ಕಾಲುಗಳಿಗೆ ಚಾಕುವಿನಿಂದ ಇರಿದು, ಮುಂದೆ ನಡೆಯಲು ಅಥವಾ ತಾಯಿಯಾಗಲು ಸಾಧ್ಯವಾಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ತನ್ನ ಅಮಾನುಷ ಕೃತ್ಯದ ದೃಶ್ಯಗಳನ್ನು ಆರೋಪಿ ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿ ಯುವತಿಗೆ ಹಿಂಸೆ ನೀಡುತ್ತಿದ್ದ.
ಆತನ ಕಾಟ ತಾಳಲಾರದೆ ಯುವತಿ ಫೆಬ್ರವರಿ 18 ರಂದು ಆರೋಪಿಯ ಫೋನ್ ಬಳಸಿ ತಾಯಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡಿದ್ದಾಳೆ. ವಿಷಯದ ಗಂಭೀರತೆ ಅರಿತ ತಾಯಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ ಗುರುಗ್ರಾಮ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಘಟನೆ ಮಹಿಳೆಯರ ಭದ್ರತೆ ಹಾಗೂ ಲಿವ್ ಇನ್ ಸಂಬಂಧಗಳ ಕುರಿತು ಕಳವಳ ಹುಟ್ಟುಹಾಕಿದೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 08:29 pm
HK News Staffer
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm