ಬ್ರೇಕಿಂಗ್ ನ್ಯೂಸ್
24-02-25 10:51 pm HK News Desk ಕ್ರೈಂ
ನವದೆಹಲಿ, ಫೆ.24: ದೆಹಲಿಯ ತ್ರಿಲೋಕಪುರಿಯ ದಂಪತಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ತೆರಳಿದ್ದರು. ಅಲ್ಲಿ ಜೊತೆಗೆ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋ, ಫೋಟೋವನ್ನು ತೆಗೆದು ಮಕ್ಕಳು, ಸಂಬಂಧಿಕರಿಗೂ ಕಳಿಸಿಕೊಟ್ಟಿದ್ದರು. ಪ್ರಯಾಗರಾಜ್ ನಲ್ಲಿ ಗಂಡ- ಹೆಂಡತಿ ಜೊತೆಯಾಗಿಯೇ ಇದ್ದಾರೆಂದು ಬಿಂಬಿಸುವಂತೆ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಅದೇ ದಿನ ರಾತ್ರಿ ಅಲ್ಲಿಯೇ ಹೊಟೇಲ್ ಒಂದರಲ್ಲಿ ರೂಮ್ ಮಾಡಿದ್ದು ಮರುದಿನ ನೋಡಿದರೆ ಮಹಿಳೆ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಫೆ.18ರಂದು ರಾತ್ರಿ ಘಟನೆ ನಡೆದಿದ್ದರೆ, ಪ್ರಯಾಗರಾಜ್ ಕಮಿಷನರೇಟ್ ಪೊಲೀಸರು 48 ಗಂಟೆಗಳಲ್ಲೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಫೆ.19ರ ಬೆಳಗ್ಗೆ ಹೊಟೇಲ್ ಕೊಠಡಿಯಲ್ಲಿ 40 ವರ್ಷದ ಮಹಿಳೆಯ ಕತ್ತು ಕೊಯ್ದ ಸ್ಥಿತಿಯಲ್ಲಿ ಕೊಲೆಯಾಗಿದೆ ಎನ್ನುವ ಸುದ್ದಿ ಪೊಲೀಸರಿಗೆ ಬಂದಿತ್ತು. ಝುನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರ್ ಕಾಲನಿಯ ಹೋಮ್ ಸ್ಟೇ ಒಂದರಲ್ಲಿ ಘಟನೆ ನಡೆದಿತ್ತು. ಹೋಮ್ ಸ್ಟೇಯನ್ನು ಕುಂಭ ಮೇಳದ ಯಾತ್ರಿಕರ ನಿವಾಸಕ್ಕೆ ಬಳಸಿಕೊಳ್ಳಲಾಗಿತ್ತು.
ಹೋಮ್ ಸ್ಟೇ ಸಿಬಂದಿಯನ್ನು ಪ್ರಶ್ನೆ ಮಾಡಿದಾಗ, ಹಿಂದಿನ ದಿನ ರಾತ್ರಿ ಪತಿ- ಪತ್ನಿಯೆಂದು ಹೇಳಿಕೊಂಡು ಬಂದಿದ್ದು, ರೂಮ್ ಪಡೆದಿದ್ದರು. ಹೊಟೇಲ್ ಸಿಬಂದಿ ಯಾವುದೇ ಐಡಿಯನ್ನೂ ಪಡೆಯದೆ ರೂಮ್ ಕೊಟ್ಟಿದ್ದ. ಮರುದಿನ ಬೆಳಗ್ಗೆ ಈ ರೀತಿ ಆಗಿರುವುದಾಗಿ ಮಾಹಿತಿ ನೀಡಿದ್ದರು. ತನಿಖೆಯ ವೇಳೆ ಮಹಿಳೆ ದೆಹಲಿಯಿಂದ ಪ್ರಯಾಗರಾಜ್ ಬಂದವರೆಂದು ತಿಳಿದುಬಂದಿತ್ತು. ಕೂಡಲೇ ಮಹಿಳೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮತ್ತು ಪತ್ರಿಕೆಯಲ್ಲಿ ಷೇರ್ ಮಾಡಿದ್ದು, ಯಾರೆಂದು ಪತ್ತೆ ಮಾಡಲು ಮುಂದಾಗಿದ್ದರು. ಫೆ.21ರಂದು ಮಹಿಳೆಯ ಸಂಬಂಧಿಕರು ಪತ್ರಿಕೆಯಲ್ಲಿ ಫೋಟೋ ನೋಡಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಮೃತ ಮಹಿಳೆ ಮೀನಾಕ್ಷಿ ಎಂದಾಗಿದ್ದು, ದೆಹಲಿಯ ತ್ರಿಲೋಕ್ ಪುರಿ ನಿವಾಸಿ. ಪತಿ ಅಶೋಕ್ ಕುಮಾರ್ ಎಂದಾಗಿದ್ದು, ಪ್ರಯಾಗರಾಜ್ ಜೊತೆಯಾಗಿಯೇ ಬಂದಿದ್ದರು ಎಂಬ ಮಾಹಿತಿಯನ್ನು ಆಕೆಯ ಸೋದರ ಪರ್ವೇಶ್ ಕುಮಾರ್ ತಿಳಿಸಿದ್ದಾನೆ. ಅಲ್ಲದೆ, ಫೆ.21ರಂದು ಆಕೆಯ ಇಬ್ಬರು ಮಕ್ಕಳಾದ ಅಶ್ವಿನಿ ಮತ್ತು ಆದರ್ಶ್ ಜೊತೆಗೆ ಪ್ರಯಾಗರಾಜ್ ಬಂದಿದ್ದು, ತನ್ನ ಅಕ್ಕನ ಗುರುತು ಹಿಡಿದಿದ್ದಾನೆ. ಪೊಲೀಸರು ಆರೋಪಿ ವಿರುದ್ಧ ಕೇಸು ದಾಖಲಿಸಿದ್ದಲ್ಲದೆ, ಕೆಲವೇ ಕ್ಷಣಗಳಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ತಾನೇ ಪತ್ನಿಯನ್ನು ಕೊಲೆಗೈದಿದ್ದಾಗಿ ಆರೋಪಿ ಅಶೋಕ್ ಕುಮಾರ್ ಒಪ್ಪಿಕೊಂಡಿದ್ದಾನೆ. ಮೂರು ತಿಂಗಳ ಮೊದಲೇ ಪತ್ನಿಯನ್ನು ಕೊಲ್ಲಲು ಪ್ಲಾನ್ ಹಾಕಿದ್ದೆ ಎಂದೂ ಹೇಳಿದ್ದಾನೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೊಬ್ಬ ಯುವತಿಯ ಸಂಪರ್ಕವಾಗಿದ್ದು, ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಅಡ್ಡಿಬಂದ ಹಳೆಯ ಹೆಂಡತಿಯನ್ನು ಮುಗಿಸಲು ಯೋಜನೆ ಹಾಕಿದ್ದ. ಇದೇ ಕಾರಣಕ್ಕೆ ಆಕೆಯನ್ನು ಕರೆದುಕೊಂಡು ಪ್ರಯಾಗರಾಜ್ ತೆರಳಿದ್ದು, ಅಲ್ಲಿ ಹೋಮ್ ಸ್ಟೇಯಲ್ಲಿರುವಾಗಲೇ ಕೊಲೆ ಮಾಡಿದ್ದಾನೆ. ಪತ್ನಿಯೊಂದಿಗೆ ಜಗಳ ನಡೆಸಿ, ಆಕೆ ಬಾತ್ ರೂಮಿಗೆ ಹೋಗಿದ್ದಾಗ ಚೂರಿಯಿಂದ ಕುತ್ತಿಗೆಯನ್ನು ಸೀಳಿ ಅಲ್ಲಿಂದ ಎಸ್ಕೇಪ್ ಆಗಿದ್ದ.
ಆನಂತರ, ಮಗನಿಗೆ ಫೋನ್ ಮಾಡಿದ್ದ ಅಶೋಕ್ ಕುಮಾರ್, ತ್ರಿವೇಣಿ ಸಂಗಮದ ರಶ್ ನಲ್ಲಿ ಪತ್ನಿ ಮೀನಾಕ್ಷಿ ಕಾಣೆಯಾಗಿದ್ದು, ತುಂಬಾ ಹುಡುಕಾಡಿ ಮರಳುತ್ತಿದ್ದೇನೆ ಎಂದು ಹೇಳಿದ್ದ. ಆದರೆ ಮಗ ಏನೋ ಸಂಶಯದಿಂದ ತನ್ನ ತಾಯಿಯ ಫೋಟೋ ಹಿಡಿದುಕೊಂಡು ಪ್ರಯಾಗರಾಜ್ ಬಂದಿದ್ದು, ಹುಡುಕಾಟ ಶುರು ಮಾಡಿದ್ದ. ಹೀಗಿರುವಾಗಲೇ ಪೊಲೀಸರು ಕೂಡ ಮಹಿಳೆಯ ಪತ್ತೆಗಾಗಿ ಸರ್ಚ್ ಮಾಡತೊಡಗಿದ್ದರು. ವಿಶೇಷ ಅಂದ್ರೆ, ಮುನ್ನಾ ದಿನವಷ್ಟೇ ಅಶೋಕ್ ತಾನು ಪತ್ನಿಯೊಂದಿಗೆ ಕುಂಭ ಸ್ನಾನ ಮಾಡುತ್ತಿರುವ ಬಗ್ಗೆ ಫೋಟೋ ಹಾಕಿ ತಾವು ಒಟ್ಟಿಗಿದ್ದೇವೆಂದು ತಿಳಿಸಲು ಪ್ರಯತ್ನಿಸಿದ್ದ. ಆದರೆ ಆತ ಕೃತ್ಯದಿಂದ ಪಾರಾಗಲು ಮಾಡಿದ್ದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
A couple from Delhi's Trilokpuri arrived in Uttar Pradesh's Prayagraj to witness the Mahakumbh festival. The husband, dutifully recording videos and snapping photos of their time together, sent them home to their children, painting a picture of a happy trip. They checked into a modest homestay to spend the night but by morning, the wife's blood-soaked body lay sprawled across the room.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm