ಬ್ರೇಕಿಂಗ್ ನ್ಯೂಸ್
02-02-26 12:18 pm HK News Desk ಕರ್ನಾಟಕ
ಬಾಗಲಕೋಟೆ, ಫೆ.2 : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ತಾಯಿ ತನ್ನ ಮೂವರು ಮಕ್ಕಳನ್ನು ನೇಣಿಗೆ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ರೂಪಾ ಎಂಬ ಮಹಿಳೆ ಗಂಡ ಮತ್ತು ಅತ್ತೆ ಮೇಲಿನ ಕೋಪದಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಕ್ಕಳನ್ನು ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ರೂಪಾ ಮೊದಲು ಮನೆಯ ಒಳಗಡೆ ಮೂವರು ಮಕ್ಕಳನ್ನು ನೇಣಿಗೆ ಹಾಕಿ ಕೊಂದಿದ್ದು ಬಳಿಕ ತಾನು ಡೀಸೆಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವ ರೂಪಾರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೂಪಾ 2018ರಲ್ಲಿ ಹನಮಂತ ಎಂಬುವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದರು. ಅತ್ತೆ ರೇಣವ್ವರಿಂದ ನಿರಂತರ ಕಿರುಕುಳ ಎದುರಾಗುತ್ತಿತ್ತು ಎಂಬ ಆರೋಪಗಳಿದ್ದವು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ರೂಪಾ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಬಾದಾಮಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಗಲಕೋಟ ಎಸ್ಪಿ ಸಿದ್ದಾರ್ಥ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ತಾಯಿಯೇ ತನ್ನ ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಇದೆ. ಮಕ್ಕಳು ಮೃತಪಟ್ಟಿದ್ದು, ತಾಯಿ ಗಂಭೀರ ಸ್ಥಿತಿಯಲ್ಲಿದ್ದಾಳೆ. ಗಂಡ–ಹೆಂಡತಿ ಕಲಹ ಮತ್ತು ಅತ್ತೆ–ಮಾವರಿಂದ ಕಿರುಕುಳ ಇದ್ದ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಮಹಿಳೆ ಆರೋಗ್ಯ ಸುಧಾರಿಸಿದ ಬಳಿಕ ಹೇಳಿಕೆ ಪಡೆಯಲಾಗುವುದು. ತನಿಖೆಯ ನಂತರವೇ ನಿಖರ ಕಾರಣ ತಿಳಿಯಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
In a tragic incident at Hiremuchalagudda village in Badami taluk, a woman allegedly hanged her three young children before attempting suicide by consuming diesel. The deceased children have been identified as Samruddhi (5), Preetham (4), and Suksith (2). The mother, Roopa, is undergoing treatment at a private hospital in critical condition.
14-04-26 02:04 pm
HK News Staffer
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
ದಾವಣಗೆರೆ ದಕ್ಷಿಣದಲ್ಲಿ ಪ್ರಚಾರದಿಂದ ದೂರ; ಸಿಎಂ ರಾಜ...
13-04-26 04:20 pm
ಪಿಗ್ಮಿ ಏಜೆಂಟರು ಮಧ್ಯವರ್ತಿಗಳಲ್ಲ, ಬ್ಯಾಂಕುಗಳ ನೌಕರ...
12-04-26 07:58 pm
14-04-26 10:48 pm
HK News Staffer
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
ಅಮೆರಿಕ- ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯ...
13-04-26 01:27 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
14-04-26 11:16 pm
HK News Desk
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am
ಸುದೀಪ್ ರೈ ಆತ್ಮಹತ್ಯೆ ಪ್ರಕರಣ ; ಪತ್ನಿ ಸೌಮ್ಯಾ ಶೆಟ...
11-04-26 11:14 pm
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm