ಬ್ರೇಕಿಂಗ್ ನ್ಯೂಸ್
12-02-25 10:28 pm Mangalore Correspondent ಕ್ರೈಂ
ಮಂಗಳೂರು, ಫೆ.12: ಅಡ್ಯಾರ್ ಬಳಿಯ ವಳಚ್ಚಿಲ್, ಮೇರ್ಲಪದವು ಪರಿಸರದಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಮಿತಿಮೀರಿದ್ದು, ಇದರ ಪರಿಣಾಮ ಎಂಬಂತೆ ಬಾರ್ ಒಂದರ ಹೊರಭಾಗದಲ್ಲಿ ಬೀದಿ ಕಾಳಗವೇ ನಡೆದುಹೋಗಿದೆ. ಗಾಂಜಾ ಮತ್ತು ಕುಡಿದ ಮತ್ತಿನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.10ರಂದು ರಾತ್ರಿ 8.30ರ ವೇಳೆಗೆ ಸ್ಥಳೀಯರಾದ ಎಲ್ಡ್ರಿಸ್ ಪಿರೇರಾ ಮತ್ತು ಬ್ಯಾಪ್ಟಿಸ್ಟ್ ಪಿರೇರಾ ಅವರು ತಮ್ಮ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದಾಗ ಅಲ್ಲಿನ ಸೀಲ್ ಬಾರ್ ಅಂಡ್ ರೆಸ್ಟೋರೆಂಟ್ ಹೊರಭಾಗದಲ್ಲಿ ರಸ್ತೆಯಲ್ಲೇ ಬೈಕ್ ನಿಲ್ಲಿಸಿ ಯುವಕರು ತೂರಾಡಿಕೊಂಡಿದ್ದರು. ರಸ್ತೆಯಿಂದ ಬೈಕ್ ತೆಗೆಯುವಂತೆ ಹೇಳಿದ್ದಕ್ಕೆ, ಉಲ್ಟಾ ಮಾತನಾಡಿದ್ದು ಎರಡೂ ಕಡೆಯವರ ನಡುವೆ ಜಟಾಪಟಿ ನಡೆದಿದೆ. ಸ್ಥಳೀಯರು ಸೇರಿ ಬೈಕನ್ನು ಬದಿಗೆ ಸರಿಸಲು ಯತ್ನಿಸಿದ್ದಕ್ಕೆ ಅಲ್ಲಿದ್ದ ಹುಡುಗರು ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಆನಂತರ ಜಗಳ ಬಿಡಿಸಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ, ಇದು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಕೈಚೆಲ್ಲಿದ್ದಾರೆ. ಆಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂದು ಸೇರಿದ್ದ ಯುವಕರನ್ನು ಚದುರಿಸಿದ್ದಾರೆ.
ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಳಚ್ಚಿಲ್ ಪದವು ಪರಿಸರದ ಇತರ ಯುವಕರು ಜೊತೆಗೂಡಿ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಸ್ಥಳೀಯ ನಿವಾಸಿ ಎಡ್ವರ್ಡ್ ಹೇಳುವ ಪ್ರಕಾರ, ಸೀಲ್ ಬಾರ್ ಅಂಡ್ ರೆಸ್ಟೋರೆಂಟನ್ನು ಇತ್ತೀಚೆಗೆ ಆರೇಳು ತಿಂಗಳಿನಿಂದ ಹೊಸತಾಗಿ ನಡೆಸುತ್ತಿದ್ದಾರೆ. ಸಿಎಲ್ -7 ಲೈಸನ್ಸ್ ಪಡೆದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ, ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಬಾರ್ ನಲ್ಲಿ ಬಂದು ದಿನವೂ ಗಲಾಟೆ ಮಾಡುತ್ತಿದ್ದಾರೆ. ಪರಿಸರದ ಜನರಿಗೆ ಇಲ್ಲಿ ನಡೆದು ಹೋಗುವುದೇ ಕಷ್ಟವಾಗಿದೆ. ಅಲ್ಲದೆ, ಪಕ್ಕದಲ್ಲೇ ಶ್ರೀನಿವಾಸ ಕಾಲೇಜಿನ ಲೇಡಿಸ್ ಹಾಸ್ಟೆಲ್ ಕೂಡ ಇದ್ದು, ಅಲ್ಲಿನ ಹುಡುಗಿಯರು ಸೇರಿದಂತೆ ಸ್ಥಳೀಯ ಮಹಿಳೆಯರು ಸಂಜೆಯ ಬಳಿಕ ಹೊರಬರದ ಸ್ಥಿತಿಯಾಗಿದೆ. ಡ್ರಗ್ಸ್ ತೆಗೆದುಕೊಂಡ ಸಿರಿಂಜ್, ಗಾಂಜಾ, ಸಿಗರೇಟು ಪ್ಯಾಕೆಟ್ಗಳು ರಸ್ತೆಯಲ್ಲಿ ಬಿದ್ದುಕೊಂಡಿದ್ದು, ಸಂಜೆಯಾಗುತ್ತಿದ್ದಂತೆ ಇಲ್ಲಿ ಬೇರೆಯದ್ದೇ ಲೋಕ ತೆರೆದುಕೊಳ್ಳುತ್ತದೆ ಎಂದಿದ್ದಾರೆ.
ಅಸಹಾಯಕತೆ ಹೇಳಿಕೊಂಡ ಅಬ್ಕಾರಿ ಡೀಸಿ
ಮಂಗಳೂರಿನಲ್ಲಿ ಇತ್ತೀಚೆಗೆ ಅಬಕಾರಿ ಇಲಾಖೆಯಿಂದ ಎರ್ರಾಬಿರ್ರಿ ಎನ್ನುವಂತೆ ಸಿಎಲ್ -7 ಲೈಸನ್ಸ್ ಹೆಸರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಇಲಾಖೆ ಅಧೀಕ್ಷಕ ಟಿ.ಎ. ಶ್ರೀನಿವಾಸ್ ಬಳಿ ಕೇಳಿದಾಗ, ಅಸಹಾಯಕತೆ ತೋಡಿಕೊಂಡಿದ್ದಾರೆ. ಸರ್ಕಾರದ ಸೂಚನೆಯಂತೆ ಸಿಎಲ್- 7 ಲೈಸನ್ಸ್ ಕೊಡಲಾಗುತ್ತಿದೆ. ನಿಯಮ ಪ್ರಕಾರ, ಹೊರಗಡೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಸರ್ಕಾರಕ್ಕೆ ಅದರಿಂದಲೇ ಆದಾಯ ಬರುತ್ತಿರುವುದರಿಂದ ಸಿಎಲ್–7 ಲೈಸನ್ಸ್ ಬಾರ್ ರೀತಿಯಲ್ಲೇ ಆಗಿಹೋಗಿದೆ. ಮೇರ್ಲಪದವು ಸೀಲ್ ರೆಸಿಡೆನ್ಸಿಯ ಬಗ್ಗೆ ದೂರುಗಳು ಬಂದಿವೆ. ಖುದ್ದಾಗಿ ತೆರಳಿ ಪರಿಶೀಲನೆ ಮಾಡುತ್ತೇನೆ. ಗಾಂಜಾ, ಡ್ರಗ್ಸ್ ಹಾವಳಿ ಇದ್ದರೂ ತಪಾಸಣೆ ನಡೆಸುತ್ತೇವೆ ಎಂದಿದ್ದಾರೆ.
ಎಫ್ಐಆರ್ ಬಳಿಕ ವಿದ್ಯಾರ್ಥಿಗಳ ಅಳಲು
ಬಂಟ್ವಾಳ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳು ಸ್ಥಳೀಯರಿಗೆ ಕರೆ ಮಾಡುತ್ತಿದ್ದು, ದಯವಿಟ್ಟು ನಮ್ಮ ಹೆಸರನ್ನು ಸೇರಿಸಬೇಡಿ, ಎಫ್ಐಆರ್ ಆದಲ್ಲಿ ನಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಅಲವತ್ತುಕೊಂಡಿದ್ದಾರೆ. ಆದರೆ ಘಟನೆ ಸಂದರ್ಭದಲ್ಲಿ ಗಾಂಜಾ ಅಮಲಿನಲ್ಲಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದೀರಲ್ವಾ.. ಆವಾಗ ನಿಮಗೆ ಎಫ್ಐಆರ್ ಆಗುತ್ತೆಂದು ಗೋಚರ ಇರಲಿಲ್ವಾ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ವಳಚ್ಚಿಲ್ ನಲ್ಲಿ ಶ್ರೀನಿವಾಸ್ ಮತ್ತು ಎಕ್ಸ್ ಪರ್ಟ್ ಇಂಜಿನಿಯರಿಂಗ್ ಕಾಲೇಜುಗಳಿದ್ದು, ಹೊರಭಾಗದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಇದರ ನಡುವೆ, ಇತ್ತೀಚೆಗೆ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಗೊಂಡಿದ್ದರಿಂದ ಕತ್ತಲಾಗುತ್ತಿದ್ದಂತೆ ಈ ಭಾಗದಲ್ಲಿ ಯುವಕರು ಸ್ಥಿಮಿತ ಕಳಕೊಂಡವರ ರೀತಿ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿನಿಯರನ್ನೂ ಕರೆತಂದು ಗಾಂಜಾ ವ್ಯಸನ ಅಂಟಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಮಾಮೂಲಿ ಗಿರಾಕಿ ಎನ್ನುವ ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.
Mangalore Residents Demand Action as Sieal Residency Bar Triggers Disturbances and Assaults Over Parking and Drug Use. Residents in Valachil, Mangalore, are calling for action after the Sieal Residency Bar has been linked to increasing disturbances and assaults in the area. Local resident Edward Pereira and his brother were reportedly assaulted by a gang for questioning why two-wheelers were being parked in front of their house. A case has since been filed at the Bantwal Rural Police Station. Concerns are further escalating as drug use in Valachil rises, instilling fear among residents. The community is urging authorities to address these issues promptly to restore safety and order in the neighborhood.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am