ಬ್ರೇಕಿಂಗ್ ನ್ಯೂಸ್
17-01-25 07:58 pm Mangaluru Correspondent ಕ್ರೈಂ
ಉಳ್ಳಾಲ, ಜ.17: ಮಟ ಮಟ ಮಧ್ಯಾಹ್ನವೇ ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕ್ ಶಾಖೆಯಿಂದ ಕೋಟಿಗಟ್ಟಲೆ ಮೌಲ್ಯದ ಚಿನ್ನ, ನಗದು ದರೋಡೆ ನಡೆದಿದೆ. ಘಟನೆಯ ಬಗ್ಗೆ ಹಲವು ರೀತಿಯ ಅನುಮಾನ ಮೂಡಿದ್ದು ಬ್ಯಾಂಕ್ ಬಗ್ಗೆ ತಿಳಿದವರೇ ಮಗುವನ್ನ ಚಿವುಟಿ ತೊಟ್ಟಿಲು ತೂಗಿದ್ರಾ ಎಂಬ ಪ್ರಶ್ನೆಗಳು ಮೂಡಿವೆ.
ಮಂಗಳೂರಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಕಾರ್ಯಕ್ರಮದಲ್ಲಿ ಪೊಲೀಸರು ಬ್ಯುಸಿಯಾಗಿದ್ದ ವೇಳೆಯಲ್ಲೇ ಕೆ.ಸಿ.ರೋಡಿನ ಕೋಟೆಕಾರು ವ್ಯ.ಸೇ.ಸ. ಸಂಘದ ಕಚೇರಿಯಲ್ಲಿ ದರೋಡೆ ನಡೆಸಲಾಗಿದೆ. ಆರು ವರ್ಷಗಳ ಹಿಂದೆ ಕೋಟೆಕಾರು ಸಹಕಾರಿ ಬ್ಯಾಂಕಿನ ಕೆ.ಸಿ.ರೋಡಿನ ಶಾಖೆಯಲ್ಲಿ ಶುಕ್ರವಾರ ಮಧ್ಯಾಹ್ನವೇ ಚಿನ್ನಾಭರಣ ದರೋಡೆಯಾಗಿತ್ತು. ಈ ವೇಳೆ ಶಾಖೆಯ ಸರಪ್ಪ ರಾಮಚಂದ್ರ ಆಚಾರಿ ಎಂಬವರು ಚಿನ್ನವನ್ನ ದರೋಡೆ ಮಾಡಿ ಕೊಂಡೊಯ್ಯುತ್ತಿದ್ದ ದರೋಡೆಕೋರನ ಎದೆಗೆ ಕಲ್ಲಲ್ಲಿ ಹೊಡೆದಿದ್ದು, ದರೋಡೆಕೋರ ಚಿನ್ನ ಹೊಂದಿದ್ದ ಗೋಣಿಯನ್ನ ಸ್ಥಳದಲ್ಲೇ ಬಿಟ್ಟು ಓಡಿದ್ದ. ವಿಶೇಷವೆಂದರೆ ಅಂದಿನ ದರೋಡೆ ಪ್ರಕರಣದಲ್ಲಿ ಕೋ.ಸೇ.ಸ. ಸಂಘದ ಆಗಿನ ನಿರ್ದೇಶಕಿಯೊಬ್ಬರ ಆರಡಿ ಎತ್ತರದ ಅಜಾನುಬಾಹು ಪತಿಯೇ ಸೂತ್ರಧಾರನಾಗಿದ್ದ. ಆತನನ್ನ ಬಳಿಕ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ಇಂದು ಕೂಡ ದರೋಡೆಕೋರರು ಶುಕ್ರವಾರದ ಮಧ್ಯಾಹ್ನವನ್ನೇ ಆಯ್ಕೆ ಮಾಡಿ ಕೃತ್ಯ ಎಸಗಿದ್ದಾರೆ. ಕೆ.ಸಿ ರೋಡಲ್ಲಿ ಬಹುತೇಕ ಮುಸ್ಲಿಂ ವರ್ತಕರೇ ಇದ್ದು ಶುಕ್ರವಾರ ಮಧ್ಯಾಹ್ನದ ವೇಳೆ ಎಲ್ಲರೂ ಮಸೀದಿಗೆ ತೆರಳುತ್ತಾರೆ. ಈ ಸಮಯವನ್ನೇ ದರೋಡೆಕೋರರು ಮತ್ತೆ ಬಳಸಿಕೊಂಡಿದ್ದು ಪತ್ತೆಯಾಗಿದೆ. ದರೋಡೆ ಸಂದರ್ಭದಲ್ಲೇ ಬ್ಯಾಂಕಿನ ಭದ್ರತಾ ಕೋಶದ ಸಿಸಿ ಕ್ಯಾಮೆರಾ ಹಾಳಾಗಿದ್ದು, ಶುಕ್ರವಾರ ಮಧ್ಯಾಹ್ನ ಸಿಸಿಟಿವಿ ಟೆಕ್ನೀಷಿಯನ್ ದುರಸ್ತಿ ಕಾರ್ಯಕ್ಕೆ ಬಂದ ಹತ್ತೇ ನಿಮಿಷದಲ್ಲಿ ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಒಳಗೆ ಎಂಟ್ರಿ ನೀಡಿದ್ದಾರೆ.
ಬ್ಯಾಂಕ್ ಒಳಗೆ ಒಟ್ಟು ನಾಲ್ಕು ಕ್ಯಾಮೆರಾಗಳಿದ್ದು , ಟೆಕ್ನೀಷಿಯನ್ ಹೇಳುವ ಪ್ರಕಾರ ಮೂರು ಕ್ಯಾಮೆರಾಗಳು ಚಾಲನೆಯಲ್ಲಿದ್ದು ಅದರಲ್ಲಿ ದರೋಡೆಯ ಯಾವುದೇ ವೀಡಿಯೋ ಸಾಕ್ಷ ದಾಖಲಾಗಿಲ್ಲವೆಂದು ಹೇಳಿದ್ದಾರೆ.




ಟೆಕ್ನೀಷಿಯನ್ ಬೆರಳಿನ ಉಂಗುರವನ್ನೇ ಎಳೆದೊಯ್ದರು !
ಘಟನೆ ವೇಳೆ ಬ್ಯಾಂಕಿನ ಒಳಗಡೆ ಮೂರು ಮಹಿಳಾ ಸಿಬ್ಬಂದಿ, ಚಿನ್ನ ತೂಗುವ ಸರಪ್ಪ ಮತ್ತು ಓರ್ವ ಗ್ರಾಹಕರಿದ್ದು ಅವರು ಘಟನೆಯ ಸ್ವಲ್ಪ ಮೊದಲು ಮಸೀದಿಗೆ ತೆರಳಿರುವುದಾಗಿ ಸಿಸಿಟಿವಿ ಟೆಕ್ನೀಷಿಯನ್ ಸಂದೀಪ್ ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದಾರೆ. ಬ್ಯಾಂಕಿನ ಒಳ ಹೊಕ್ಕಿದ ನಾಲ್ವರು ಮುಸುಕು ಧಾರಿಗಳಲ್ಲಿ ಓರ್ವ ಪಿಸ್ತೂಲ್ ಹಿಡಿದಿದ್ದು ಉಳಿದ ಮೂವರು ತಲ್ವಾರು ಚಾಕುಗಳನ್ನ ಹಿಡಿದಿದ್ದರಂತೆ. ಮಾರಕಾಯುಧಗಳಿಂದ ಬೆದರಿಸಿ ಬ್ಯಾಂಕ್ ಸಿಬ್ಬಂದಿಗಳನ್ನ ನೆಲದಲ್ಲಿ ಕೂರಿಸಿದ್ದಾರೆ. ಈ ವೇಳೆ ಟೆಕ್ನೀಷಿಯನ್ ದರೋಡೆಕೋರರಲ್ಲಿ ಏನೂ ಮಾಡಬೇಡಿ ಎಂದು ಕೈ ಮುಗಿದಿದ್ದು ಈ ವೇಳೆ ಸಂದೀಪ್ ಕೈ ಬೆರಳಿನಲ್ಲಿದ್ದ ಚಿನ್ನದ ಉಂಗುರವನ್ನ ಕಂಡ ದರೋಡೆಕೋರರು ಬಲವಂತವಾಗಿ ಎಳೆದಿದ್ದಾರೆ. ಭದ್ರತಾ ಕೋಶದಿಂದ ಸುಮಾರು ಹನ್ನೆರಡು ಕೋಟಿಗೂ ಅಧಿಕ ಬೆಲೆ ಬಾಳುವ ಚಿನ್ನ ಮತ್ತು ಸುಮಾರು ಹನ್ನೊಂದು ಲಕ್ಷದಷ್ಟು ನಗದನ್ನ ದರೋಡೆಕೋರರು ಗೋಣಿಯಲ್ಲಿ ಎಗರಿಸಿದ್ದಾರೆಂದು ಹೇಳಲಾಗಿದೆ. ಸುಮಾರು ಆರು ಕೋಟಿ ಮೌಲ್ಯದ ಚಿನ್ನಾಭರಣವನ್ನ ಬಿಟ್ಟೋಗಿದ್ದಾರಂತೆ. ದರೋಡೆಕೋರರು ಕಾರಲ್ಲಿ ಪಲಾಯನಗೈಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಲಾಕರ್ ಇದ್ದರೂ ಚಿನ್ನದ ಕಾವಲಿಗೆ ಸೆಕ್ಯುರಿಟಿ ಇಲ್ಲ !
ಈ ಹಿಂದೆ ಬ್ಯಾಂಕ್ನಲ್ಲಿ ನಿರ್ದೇಶಕಿಯ ಪತಿಯೇ ಚಿನ್ನವನ್ನ ದರೋಡೆಗೈದ ಪ್ರಕರಣ ನಡೆದಿದ್ದರೂ ಕೋಟೆಕಾರು ಸಹಕಾರಿ ಸಂಘದ ಧುರೀಣರು ಎಚ್ಚೆತ್ತುಕೊಳ್ಳಲಿಲ್ಲ. ಗ್ರಾಹಕರು ಬ್ಯಾಂಕ್ ಮೇಲಿನ ನಂಬಿಕೆಯಿಂದ ಕೋಟಿ ಮೌಲ್ಯದ ಚಿನ್ನವನ್ನ ಅಡವಿಟ್ಟಿದ್ದರೂ ಅದನ್ನ ಕಾವಲು ಕಾಯಲು ಕನಿಷ್ಟ ಓರ್ವ ಕಾವಲುಗಾರನನ್ನ ನೇಮಿಸದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬ್ಯಾಂಕಲ್ಲಿ ದರೋಡೆ ಮಾಡಲು ಶುಕ್ರವಾರ ದಿನವೇ ಬೇಕೇ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಸಂಘದ ನಿರ್ದೇಶಕಿಯ ಪತಿಯೇ ಬ್ಯಾಂಕ್ ನಲ್ಲಿ ದರೋಡೆ ನಡೆಸಿದ್ದ. ಆ ಪ್ರಕರಣದಲ್ಲೂ ಹಲವು ಅನುಮಾನಗಳಿದ್ದು ಪೊಲೀಸರು ಬ್ಯಾಂಕ್ನ ಸಿಬ್ಬಂದಿಗಳನ್ನ ಈ ಬಗ್ಗೆ ಕೂಲಂಕುಷ ವಿಚಾರಣೆ ನಡೆಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.


ಬೆದರು ಬೊಂಬೆಗಳಾದ ಹೈವೇ ಸಿಸಿ ಕ್ಯಾಮೆರಾಗಳು
ಒಟ್ಟು ಐದು ಜನ ದರೋಡೆಕೋರರು ಕೃತ್ಯವೆಸಗಿ ಫಿಯೆಟ್ ಕಾರಲ್ಲಿ ತಲಪಾಡಿ ಟೋಲ್ ಗೇಟ್ ಪಾಸಾಗಿರುವ ಮಾಹಿತಿ ಸಿಕ್ಕಿದೆ. ಕೆ.ಸಿ.ರೋಡ್ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಿದ್ದರೂ ಅವು ಚಾಲನೆಯಲ್ಲಿರದೆ ಇರುವುದರಿಂದ ಪೊಲೀಸರ ತನಿಖೆಗೆ ಹಿನ್ನಡೆಯಾಗಿದೆ.
The Mangalore Kotekar bank robbery occurred under troubling circumstances, as detailed in a special crime report by Headline Karnataka. At the time of the incident, the CCTV cameras were not operational due to ongoing repairs. This is particularly concerning, given that there was a previous attempted robbery a few years ago, after which bank officials did not implement adequate security measures to protect the establishment.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
05-11-25 05:27 pm
Bangalore Correspondent
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm