ಬ್ರೇಕಿಂಗ್ ನ್ಯೂಸ್
04-01-25 11:31 am Mangalore Correspondent ಕ್ರೈಂ
ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಿಂಗಾರಿ ಬೀಡಿ ಮಾಲೀಕ, ಬಂಟ್ವಾಳ, ಕಲ್ಲಡ್ಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸುಲೇಮಾನ್ ಹಾಜಿಯವರ ಬೋಳಂತೂರಿನ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿದ ದರೋಡೆಕೋರರು ಕೋಟ್ಯಂತರ ರೂಪಾಯಿ ದುಡ್ಡನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯಿಂದ 10.45ರ ನಡುವೆ ಘಟನೆ ನಡೆದಿದ್ದು, ಅಧಿಕಾರಿಗಳ ಸೋಗಿನಲ್ಲಿ ಬಂದು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತಮಿಳುನಾಡು ನೋಂದಣಿಯ ಎರ್ಟಿಕಾ ಕಾರಿನಲ್ಲಿ ಏಳು ಮಂದಿಯ ತಂಡ ಬಂದಿದ್ದು, ಕುಟುಂಬಸ್ಥರೊಂದಿಗೆ ಮೊದಲಿಗೆ ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಿದ್ದಾರೆ. ಉದ್ಯಮಿ ಸುಲೇಮಾನ್ ತನಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಹೇಳಿದಾಗ, ಚಾಲಕನಾಗಿದ್ದ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದ್ದು ಸಾಹೇಬ್ರೇ ಇವರು ಚೆನ್ನೈನಿಂದ ಇಡಿ ಅಧಿಕಾರಿಗಳು ಬಂದಿದ್ದಾರೆ, ನೀವು ತೆರಿಗೆ ಕಟ್ಟುತ್ತಿಲ್ಲ ಎಂದು ದೂರು ಬಂದಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಸುಲೇಮಾನ್ ತಪಾಸಣೆಗೆ ಒಪ್ಪಿದ್ದು, ಅವರನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ.
ಕೂಡಲೇ ಅಧಿಕಾರಿಗಳ ಸೋಗಿನಲ್ಲಿದ್ದವರು ನಿಮ್ಮ ಮೊಬೈಲನ್ನು ಕೊಟ್ಟುಬಿಡಿ, ತಂದೆ, ಮಗನಲ್ಲಿ ಒಬ್ಬರನ್ನು ನಾವು ವಶಕ್ಕೆ ಪಡೆಯುತ್ತೇವೆ ಎಂದಿದ್ದಾರೆ. ಅಲ್ಲದೆ, ಮನೆಯನ್ನು ತಪಾಸಣೆ ನಡೆಸಿದ್ದು, ಕಪಾಟಿನಲ್ಲಿ ತುಂಬಿಟ್ಟಿದ್ದ ನಗದು ಹಣವನ್ನು ಮೂಟೆಕಟ್ಟಿ ಗೋಣಿಚೀಲದಲ್ಲಿ ತುಂಬಿಸಿದ್ದಾರೆ. ಎರಡು ಗಂಟೆ ಕಾಲ ಅಂದರೆ, ರಾತ್ರಿ 10.45ರ ವರೆಗೆ ಮನೆಯಲ್ಲಿ ತಡಕಾಡಿದ್ದು, ಇವರ ಸಹಿ ಎಲ್ಲ ಪಡೆದಿದ್ದಾರೆ. ನಿಮ್ಮಲ್ಲಿ ಒಬ್ಬರು ನಮ್ಮ ಜೊತೆಗೆ ಬನ್ನಿ, ನಾವು ಬಿಸಿ ರೋಡ್ ನಲ್ಲಿ ಲಾಡ್ಜ್ ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಸುಲೇಮಾನ್ ಹಾಜಿಯವರು ನಮ್ಮ ಮೊಬೈಲನ್ನು ಕೊಟ್ಟುಬಿಡಿ ಎಂದಿದ್ದಕ್ಕೆ, ನೀವು ಬಿಸಿ ರೋಡ್ ಬನ್ನಿ ಅಲ್ಲಿ ಕೊಡುತ್ತೇವೆ ಎಂದಿದ್ದಾರೆ.
ಅದರಂತೆ, ಸುಲೇಮಾನ್ ಮತ್ತು ಅವರ ಮಗ ಖಾಲಿದ್ ತಮ್ಮ ಇನ್ನೋವಾ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಎರ್ಟಿಕಾದಲ್ಲಿದ್ದ ದರೋಡೆಕೋರರು ಕೆಲವೇ ಕ್ಷಣದಲ್ಲಿ ವೇಗವಾಗಿ ತೆರಳಿದ್ದು ಕಲ್ಲಡ್ಕ ತಲುಪುವ ಮೊದಲೇ ಮಾಯವಾಗಿದ್ದರು. ಖಾಲಿದ್ ತನ್ನ ಅಜ್ಜಿಯ ಕೈಯಲ್ಲಿದ್ದ ಮೊಬೈಲನ್ನು ಹಿಡಿದುಕೊಂಡಿದ್ದು, ತನ್ನ ಮತ್ತು ತಂದೆಯ ಮೊಬೈಲಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಇದು ತಿಳಿಯುತ್ತಲೇ ಏನೋ ಎಡವಟ್ಟು ಆಗಿದೆಯೆಂದು ನೇರವಾಗಿ ಮರಳಿ ಬಂದು ಬೋಳಂತೂರಿನ ಯುವಕರಲ್ಲಿ ವಿಷಯ ತಿಳಿಸಿದ್ದಾರೆ. ಇವರ ಮನೆಯಿಂದ 50 ಮೀಟರ್ ದೂರದಲ್ಲಿ ಮಸೀದಿ ಮತ್ತು ರಾತ್ರಿಯೂ ಬಹಳಷ್ಟು ಯುವಕರು ಇರುತ್ತಿದ್ದರು. ಅವರ ಎದುರಿನಿಂದಲೇ ಅಧಿಕಾರಿಗಳೆಂಬ ಭಯದಲ್ಲಿ ಕಾರಿನಲ್ಲಿ ನೇರ ಹೋಗಿದ್ದವರು ಮತ್ತೆ ಬಂದು ದರೋಡೆ ವಿಷಯ ಹೇಳಿಕೊಂಡಿದ್ದಾರೆ.
ಸುಲೇಮಾನ್ ಹಾಜಿಯವರು ನಾಲ್ಕು ದಿನಗಳ ಹಿಂದೆ ಬಂಟ್ವಾಳದ ಬಿಸಿ ರೋಡ್ - ಕಳ್ಳಿಗೆಯಲ್ಲಿ ವಾಣಿಜ್ಯ ಕಟ್ಟಡ ಸಂಕೀರ್ಣ ಒಂದನ್ನು ಮಾರಿದ್ದು, 3.60 ಕೋಟಿಗೆ ಮಾರಾಟ ಮಾಡಿದ್ದಾರೆಂದು ಸುದ್ದಿಯಿತ್ತು. ಇದಲ್ಲದೆ, ಶನಿವಾರ ವಾರಾಂತ್ಯದಲ್ಲಿ ಬೀಡಿ ಮಜೂರಿಗೆಂದು ಒಂದೂವರೆ ಕೋಟಿಯಷ್ಟು ನಗದು ತಂದಿಡುತ್ತಾರೆ. ಈ ಬಗ್ಗೆ ತಿಳಿದವರೇ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದ್ದು, ನಾಲ್ಕು ಕೋಟಿಗೂ ಹೆಚ್ಚು ನಗದನ್ನು ಹೊತ್ತೊಯ್ದಿದ್ದಾರೆ. ಮನೆಯಲ್ಲಿ ಚಿನ್ನಾಭರಣ ಇದ್ದರೂ ಅದರ ಗೊಡವೆಗೆ ಹೋಗದೆ ರಾಶಿಗಟ್ಟಲೆ ನಗದು ಸಿಗುತ್ತಲೇ ಅದನ್ನು ಮೂಟೆ ಕಟ್ಟಿಕೊಂಡು ಹೋಗಿದ್ದಾರೆ.
ಸುಲೇಮಾನ್ ಹಾಜಿಯವರು ನಾಲ್ಕು ವರ್ಷಗಳ ಹಿಂದೆ ಬೋಳಂತೂರಿನ ನಾರ್ಶದಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ದೊಡ್ಡ ಮನೆ ಕಟ್ಟಿದ್ದರೂ ಅದರಲ್ಲಿ ಸಿಸಿಟಿವಿ ಇಟ್ಟುಕೊಂಡಿಲ್ಲ. ಬೋಳಂತೂರು, ಕೊಳ್ನಾಡು, ಸಾಲೆತ್ತೂರು, ಚಿಕ್ಕಮಗಳೂರು ಹೀಗೆ ಹಲವು ಕಡೆ ಒಂದು ಸಾವಿರ ಎಕ್ರೆಗೂ ಹೆಚ್ಚು ಅಡಿಕೆ, ರಬ್ಬರ್ ತೋಟಗಳನ್ನು ಹೊಂದಿದ್ದಾರೆ. ಬಿಸಿ ರೋಡಿನಲ್ಲಿ ಸಿಂಗಾರಿ ಟೆಕ್ಸ್ ಟೈಲ್ಸ್, ಸಿಂಗಾರಿ ಕಾಂಪ್ಲೆಕ್ಸ್ ಹೆಸರಲ್ಲಿ ಹಲವಾರು ವಾಣಿಜ್ಯ ಸಂಕೀರ್ಣಗಳು ಇವರ ಹೆಸರಿನಲ್ಲಿವೆ. ಕೋಟ್ಯಧಿಪತಿಯಾಗಿದ್ದರೂ, ಸ್ಥಳೀಯರ ಬಗ್ಗೆ ನಂಬಿಕೆ ಇಲ್ಲದೆ ಮನೆ, ತೋಟಗಳಲ್ಲಿ ಪಶ್ಚಿಮ ಬಂಗಾಳದ ಕಾರ್ಮಿಕರನ್ನೇ ಹೆಚ್ಚಾಗಿ ಇಟ್ಟುಕೊಂಡಿದ್ದಾರೆ. ಮನೆಯಲ್ಲಿ ಫುಲ್ ಅಡಿಕೆ ಸ್ಟಾಕ್ ಇಟ್ಟುಕೊಂಡಿದ್ದು, ದಿನವೂ ಸ್ಥಳೀಯ ಕೆಲವರು ಅಡಿಕೆ ಸುಲಿಯಲು ಬರುತ್ತಿದ್ದಾರೆ. ಇಷ್ಟೆಲ್ಲ ಇದ್ದರೂ, ಹೆಚ್ಚಿನ ವಹಿವಾಟನ್ನು ನಗದಿನ ರೂಪದಲ್ಲಿಯೇ ನಡೆಸುತ್ತಾರೆ ಎನ್ನುವುದು ಸ್ಥಳೀಯರ ಮಾಹಿತಿ.
ಸುಲೇಮಾನ್ ಹಾಜಿಯವರ ಸಿಂಗಾರಿ ಬೀಡಿಗೆ ಚಿಕ್ಕಮಗಳೂರು ದೊಡ್ಡ ಮಾರ್ಕೆಟ್ ಆಗಿದ್ದು, ಅಲ್ಲಿ ಗಣೇಶೋತ್ಸವ ಇತ್ಯಾದಿ ಹಿಂದುಗಳ ಹಬ್ಬಗಳಿಗೂ ದೇಣಿಗೆ ಕೊಡುತ್ತಾರೆ. ಈ ಹಿಂದೆ ಎರಡು ಬಾರಿ ಸುಲೇಮಾನ್ ಮೇಲೆ ಬಿಸಿ ರೋಡಿನ ಸ್ಥಳೀಯರೇ ಅಟ್ಯಾಕ್ ಮಾಡಿ ಹಣ ಕಿತ್ತುಕೊಳ್ಳುವ ಯತ್ನ ಮಾಡಿದ್ದಿದೆ. ಈಗ ನಡೆದಿರುವ ಕೃತ್ಯವನ್ನೂ ಸ್ಥಳೀಯರೇ ಯಾರೋ ಹೆಣೆದಿದ್ದು, ನಕಲಿ ನಂಬರ್ ಪ್ಲೇಟ್ ಮುಂದಿಟ್ಟು ದರೋಡೆ ನಡೆಸಿರುವ ಸಾಧ್ಯತೆಯಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಎಸ್ಪಿ ಯತೀಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore robbers enter Singari Beedi owner's house at Kalladka, posing as ED officers, escape with crores of cash. Sulaiman Haji, a resident of Narsha near Bolanthoor in Bantwal taluk, runs the Singari Beedi business and has been doing so for many years. Late Friday night, a group arrived at his house in a car with Tamil Nadu registration plates and pretended to be ED officers.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm