ಬ್ರೇಕಿಂಗ್ ನ್ಯೂಸ್
23-07-24 12:30 pm Mangalore Correspondent ಕ್ರೈಂ
ಮಂಗಳೂರು, ಜುಲೈ 23: ಗುಜರಾತ್ ಮೂಲದ ಅಡಿಕೆ ವ್ಯಾಪಾರಿ ಕಂಪನಿಗಳ ಶೇಟುಗಳು ಮಂಗಳೂರಿನ ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರ್ಲೀನ್ ಟ್ರೇಂಡಿಂಗ್ ಕಂಪೆನಿ, ವಿಮಲ್ ಬ್ರದರ್ಸ್ ಹಾಗೂ ಕಮಲೇಶ್ ಪಡಾಲಿಯಾ ಎಂಬ ಕಂಪೆನಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರ್ಲೀನ್ ಟ್ರೇಡಿಂಗ್ ಕಂಪನಿಯು ಇಲ್ಲಿನ ವರ್ತಕರಿಗೆ ಒಟ್ಟು ರು. 1.34 ಕೋಟಿ ಹಾಗೂ ವಿಮಲ್ ಬ್ರದರ್ಸ್ ಕಂಪನಿಯು ರು. 1.21 ಕೋಟಿ ವಂಚನೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದು ವಿಮಲ್ ಬ್ರದರ್ಸ್ ಕಂಪನಿಯ ಮಾಲೀಕರಾದ ಕಮಲೇಶ್ ಪಡಾಲಿಯಾ ಮತ್ತು ಆತನ ಪತ್ನಿ ರೋಹಿಣಿ ಸೇರಿ ರು. 59.62 ಲಕ್ಷ ವಂಚಿಸಿದ್ದಾರೆ. ಆರೋಪಿಗಳು ತಮ್ಮ ಕಂಪನಿಯನ್ನು ಮುಚ್ಚಿ ಅದರಲ್ಲಿದ್ದ 115 ಚೀಲ ಅಡಿಕೆಯನ್ನು ಸಂಬಂಧಿಕರ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಎಂದು ಪ್ರತಿಕ್ರಿಯೆ ಬರುತ್ತಿದೆ’ ಎಂದು ಹಬೀಬ್ ರಹಿಮಾನ್ ಕೆ. ಅವರು ದೂರು ನೀಡಿದ್ದಾರೆ.
ವಿಮಲ್ ಬ್ರದರ್ಸ್ ಕಂಪನಿಯು ಒಟ್ಟು ರು. 25.25 ಲಕ್ಷ ವಂಚಿಸಿದೆ ಎಂದು ಎಸ್.ಆರ್.ಟ್ರೇಡಿಂಗ್ ಕಂಪನಿಯ ಪಾಲುದಾರ ಶ್ರೀಪತಿ ಭಟ್ ಮತ್ತು ಕೆ.ಎಸ್.ನಾರಾಯಣ ಭಟ್ ದೂರಿನಲ್ಲಿ ತಿಳಿಸಿದ್ದಾರೆ. ತನಗೆ ರು. 36.39 ಲಕ್ಷ ವಂಚನೆಯಾಗಿದೆ ಎಂದು ಎ.ಎ.ಸುಪಾರಿ ಟ್ರೇಡಿಂಗ್ ಕಂಪನಿಯ ಮಾಲೀಕ ಅಬ್ದುಲ್ ರಹಿಮಾನ್ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಡಿಕೆ ಖರೀಸಿದ್ದ ಗುಜರಾತಿನ ವರ್ತಕ ಕಮಲೇಶ್ ಪಡಾಲಿಯಾ 8.99 ಲಕ್ಷ ರೂ. ಹಣವನ್ನು ನೀಡದೇ ವಂಚಿಸಿದ ಬಗ್ಗೆ ಬೀಬಿ ಅಲಾಬಿ ರಸ್ತೆಯ ಒಣ ಅಡಿಕೆ ವ್ಯಾಪಾರಿ ಯೂಸುಫ್ ದೂರು ನೀಡಿದ್ದಾರೆ.
Mangalore Arecanut business owners cheated in crores by Gujrathi owners, case filed at cyber crime police station. Case has been booked against Parvin trading company, vimal brothers and Kamlesh Padaliya for cheating
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm