ಬ್ರೇಕಿಂಗ್ ನ್ಯೂಸ್
22-06-24 11:24 pm HK News Desk ಕ್ರೈಂ
ತುಮಕೂರು, ಜೂ 22: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಆಗಿದ್ದು, ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಕೆರೆ ಬಳಿ ಕಾರು ನಿಲ್ಲಿಸಿ ಮೊಬೈಲ್ಗಳನ್ನು ಕಾರಿನೊಳಗೆ ಇಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಘಟನೆ ನಡೆದಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (50) ನಾಪತ್ತೆಯಾದವರು. ವಯಸ್ಸಿನ ಅಂತರ ಇದ್ದರೂ, ಇವರಿಬ್ಬರ ನಡುವೆ ಅದ್ಹೇಗೋ ಪ್ರೀತಿ ಚಿಗುರಿತ್ತು. ಕದ್ದುಮುಚ್ಚಿ ಇದ್ದ ಇವರಿಬ್ಬರ ಪ್ರೀತಿ ಕುಟುಂಬಸ್ಥರಿಗೆ ತಿಳಿದುಹೋಗಿತ್ತು. ಈ ಪ್ರೀತಿಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ, ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಎನ್ನಲಾಗಿದೆ.
ಕಳೆದ 3 ದಿನಗಳ ಹಿಂದೆ ಅನನ್ಯ ಮನೆಯಿಂದ ನಾಪತ್ತೆಯಾಗಿದ್ದಳು. ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ಮಾವತ್ತೂರು ಕೆರೆ ಬಳಿ ಆಕೆಯ ಚಪ್ಪಲಿ ಪತ್ತೆಯಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೋಟ್ ಸಹಾಯದಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್, ಕೊಳಾಲ ಪಿಎಸ್ಐ ರೇಣುಕಾ ಯಾದವ್, ಯೋಗೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ ಈ ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Tumkur, a 19-year-old girl, falls in love with a 50-year-old man. The two commit suicide after jumping into the lake. The deceased have been identified as Annanya and Rangashamanna. Parents have been searching for their missing daughter for three days, and today the public found some sandals near the lake and later found the body.
11-05-26 09:36 pm
HK News Staffer
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
11-05-26 08:05 pm
HK News Staffer
ಗೋವಾ ಸಮುದ್ರದಲ್ಲಿ ಕಾರವಾರದ ಮೀನುಗಾರಿಕಾ ಬೋಟ್ ಪಲ್ಟ...
11-05-26 06:20 pm
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
12-05-26 12:05 am
Mangalore Correspondent
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm