ಬ್ರೇಕಿಂಗ್ ನ್ಯೂಸ್
09-06-24 04:34 pm HK News Desk ಕ್ರೈಂ
ಮೈಸೂರು, ಜೂ 09: ವಿಚ್ಛೇದಿತ ಮಹಿಳೆ ಜತೆ ಲವ್ವಿ ಡವ್ವಿ ನಡೆಸಿ, ಆಕೆಯನ್ನು ಗರ್ಭಿಣಿ ಮಾಡಿ ಯುವಕನೊಬ್ಬ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕವಾಗಿ ಯುವಕ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ನಗರದ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯ 34 ವರ್ಷದ ಮಹಿಳೆ ಮೋಸ ಹೋದವರು. ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ನೊಂದ ಮಹಿಳೆ, ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ (25) ಎಂಬಾತನ ವಿರುದ್ಧ ದೂರು ನೀಡಿದ್ದಾರೆ.
2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಬದುಕುತ್ತಿರುವ ಮಹಿಳೆ ಬಾಳಲ್ಲಿ ಮತ್ತೊಬ್ಬ ಯುವಕ ಎಂಟ್ರಿಯಾಗಿದ್ದಾನೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಗರ್ಭಿಣಿ ಮಾಡಿ ಯುವಕ ಪರಾರಿಯಾಗಿದ್ದಾನೆ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದು, ಇಬ್ಬರೂ ಹವ್ಯಾಸಿ ಹಾಡುಗಾರರು. ಸಿಂಗಿಂಗ್ ಇವೆಂಟ್ಸ್ಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಪರಸ್ಪರ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದ. ಕೊನೆಗೆ ಯುವಕನ ಒತ್ತಡಕ್ಕೆ ಮಣಿದ ಟೀಚರ್, ಆತನ ಪ್ರೀತಿಯನ್ನು ಒಪ್ಪಿದ್ದರಿಂದ ಮನೆಗೆ ಯುವಕ ಆಗಾಗ್ಗೆ ಬಂದು ಹೋಗುತ್ತಿದ್ದ.
ಮದುವೆಯಾದರೆ ಕೇಸ್ ವಾಪಸ್ ಪಡೆಯುತ್ತೇನೆ ಎಂದ ಮಹಿಳೆ ;
ಮದ್ಯ ಕುಡಿಸಿ ನನ್ನ ಬಲವಂತವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಂತರ ಆರೋಪಿ ಹರೀಶನ ಮನೆಯವರಿಂದ ಮದುವೆಗೆ ನಿರಾಕರಣೆ ಮಾಡಲಾಗಿದೆ. ನನ್ನ ಮೇಲೆ ಅತ್ಯಾಚಾರ ಮಾಡಿ ಈಗ ಎರಡು ತಿಂಗಳಿಂದ ಕಾಣೆಯಾಗಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ನಾನು ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ. ಪೊಲೀಸರಿಂದ ನನಗೆ ನ್ಯಾಯಸಿಗುವ ಭರವಸೆ ಇದೆ. ಆತ ನನ್ನನ್ನು ಮದುವೆಯಾದರೆ ಕೇಸ್ ವಾಪಸ್ ಪಡೆಯುತ್ತೇನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ನೊಂದ ಮಹಿಳೆ ಅಂಗಲಾಚಿದ್ದಾರೆ.
ಘಟನೆ ಸಂಬಂಧ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mysuru 23 year old cheats women of marrige and makes her pregnant case filed. Women has stated that if he marries her will take the case back.
25-03-26 03:25 pm
HK News Staffer
ಹಿಂದು, ಸಿಖ್, ಬೌದ್ಧರಲ್ಲಿ ಮಾತ್ರ ಪರಿಶಿಷ್ಟ ಮೀಸಲು,...
24-03-26 02:55 pm
ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜ...
23-03-26 12:48 pm
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
25-03-26 06:15 pm
HK News Staffer
ಟ್ರಂಪ್ ಯುದ್ಧ ವಿರಾಮ ನಡುವೆಯೂ ಇಸ್ರೇಲ್ ದಾಳಿ ಮುಂದು...
24-03-26 04:43 pm
ಅಮೆರಿಕಾ ಜೊತೆ ಯಾವುದೇ ಮಾತುಕತೆ ನಡೆದಿಲ್ಲ , ನಮ್ಮ ವ...
24-03-26 12:10 pm
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
25-03-26 05:23 pm
HK News Staffer
ಟೋಲ್ ಪ್ಲಾಜಾಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ...
25-03-26 03:49 pm
ಗುಡ್ಡದಲ್ಲಿ ಹೊಳೆ ಬರುತ್ತಾ? ನಿವೇಶನ ರಹಿತರ ಜಮೀನು ಹ...
25-03-26 12:15 pm
ಹಣಕಾಸು ಮಸೂದೆ ಮೇಲಿನ ಚರ್ಚೆ ; ರಾಷ್ಟ್ರೀಯ ಭದ್ರತೆ,...
24-03-26 09:29 pm
ಟ್ಯಾಕ್ಸಿ ಕಾರುಗಳಿಗೆ ಪ್ಯಾನಿಕ್ ಬಟನ್ ಹಣ ಮಾಡುವ ದಂಧ...
24-03-26 08:29 pm
24-03-26 02:04 pm
HK News Staffer
ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಪ್ರಚೋದಿಸುವ ವಿಡಿ...
23-03-26 09:44 pm
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm