ಬ್ರೇಕಿಂಗ್ ನ್ಯೂಸ್
15-05-24 11:34 pm Mangalore Correspondent ಕ್ರೈಂ
ಮಂಗಳೂರು, ಮೇ.16: ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದವನನ್ನು ಪತ್ತೆಹಚ್ಚಿ 270 ಗ್ರಾಂ ಡ್ರಗ್ಸ್ ವಶಪಡಿಸಿ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಅನ್ನು ಕಾರಿನಲ್ಲಿ ತರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದೇರಳಕಟ್ಟೆ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ. ಬಿಜೈ ನ್ಯೂರೋಡ್ ನಿವಾಸಿ ಮೊಹಮ್ಮದ್ ಅಮೀನ್ ರಾಫಿ(23), ಅಡ್ಡೂರು ನಿವಾಸಿ ಮೊಹಮ್ಮದ್ ಸಿನಾನ್ ಅಬ್ದುಲ್ಲಾ(23), ಬಂದರು ನಿವಾಸಿ ಮೊಹಮ್ಮದ್ ನೌಮಾನ್(22), ಬೋಳಿಯಾರ್ ನಿವಾಸಿ ಮೊಹಮ್ಮದ್ ಸಫೀಲ್(23) ಬಂಧಿತರು.
)
ಆರೋಪಿಗಳಿಂದ 6,50,000 ರೂ. ಮೌಲ್ಯದ 270 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 4 ಮೊಬೈಲ್ ಫೋನ್ ಗಳು, ಟೊಯೊಟಾ ಕೊರೊಲ್ಲಾ ಕಾರು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಲಾಗಿದೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ.14,85,500 ಆಗಬಹುದು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಕರ್ನಾಟಕ, ಕೇರಳ ರಾಜ್ಯದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿರುವುದಾಗಿದೆ. ಆರೋಪಿಗಳ ಪೈಕಿ ಮೊಹಮ್ಮದ್ ಅಮೀನ್ ರಾಫಿ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು 2021ನೇ ಇಸವಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.
The Central Crime Branch (CCB) sleuths in Mangaluru has arrested four people and seized 270 gram MDMA worth Rs 6.50 lakh at Deralakatte.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm