ಬ್ರೇಕಿಂಗ್ ನ್ಯೂಸ್
08-05-24 11:33 am Mangalore Correspondent ಕ್ರೈಂ
ಮಂಗಳೂರು, ಮೇ 8: ನಗರದ ಬಾವುಟಗುಡ್ಡೆಯ ಕೆಎಂಸಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗಕ್ಕೆ ಬಂದಿದ್ದ 17 ವರ್ಷದ ಹುಡುಗನೊಬ್ಬ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಮಂಗಳವಾರ ಬೆಳಗ್ಗೆ ಹಲ್ಲಿನ ಚಿಕಿತ್ಸೆಗೆಂದು ಹುಡುಗ ಬಂದಿದ್ದ. ಈ ಹಿಂದೆಯೂ ತಾಯಿ ಜೊತೆಗೆ ಚಿಕಿತ್ಸೆಗಾಗಿ ಬರುತ್ತಿದ್ದ. ನಿನ್ನೆ ಒಬ್ಬನೇ ಬಂದಿದ್ದು, ತಾಯಿಯ ಮೊಬೈಲನ್ನು ತೆಗೆದುಕೊಂಡು ಬಂದಿದ್ದ. ಟ್ರೀಟ್ಮೆಂಟ್ ಹೋಗುವುದಕ್ಕೂ ಮುನ್ನ ಮೊಬೈಲನ್ನು ಲೇಡಿಸ್ ಟಾಯ್ಲೆಟಲ್ಲಿ ಮೇಲೆ ಇಟ್ಟು ಹೋಗಿದ್ದಾನೆ. ಆದರೆ, ಸೈಲಂಟ್ ಮೋಡಲ್ಲಿ ಇಡುವುದಕ್ಕೆ ಮರೆತಿದ್ದ. ಕೆಲ ಹೊತ್ತಿನಲ್ಲೇ ಮೊಬೈಲ್ ರಿಂಗಣಿಸಿತ್ತು. ಪದೇ ಪದೇ ಮೊಬೈಲ್ ಟಾಯ್ಲೆಟ್ ಒಳಗಿನಿಂದ ರಿಂಗ್ ಆಗುತ್ತಿದ್ದುದನ್ನು ಸೆಕ್ಯುರಿಟಿ ಸಿಬಂದಿ ಗಮನಿಸಿದ್ದು, ಒಳಗೆ ಹೋಗಿ ನೋಡಿದಾಗ ಮೇಲೆ ಇಟ್ಟಿದ್ದ ಮೊಬೈಲ್ ಕಾಣ ಸಿಕ್ಕಿದೆ.
ಬಳಿಕ ಸಿಸಿಟಿವಿ ಗಮನಿಸಿದಾಗ, ಹುಡುಗನ ಚಹರೆ ಸಿಕ್ಕಿದ್ದು ಬಂದರು ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಮುಸ್ಲಿಂ ಹುಡುಗನಾಗಿದ್ದು, ಸುರತ್ಕಲ್ ನಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ತಾಯಿ ಜೊತೆಗೆ ಹಲ್ಲಿನ ಚಿಕಿತ್ಸೆಗೆ ಬರುತ್ತಿದ್ದ ಹುಡುಗ ನಿನ್ನೆ ಒಬ್ಬಂಟಿಯಾಗಿ ಬಂದು ಕತರ್ನಾಕ್ ಕೆಲಸ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಮೊಬೈಲನ್ನು ಚೆಕ್ ಮಾಡಿದಾಗ ಯಾವುದೇ ವಿಡಿಯೋ, ಫೋಟೋ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಜುವೆನಿಲ್ ಕೋರ್ಟಿಗೆ ಹಾಜರುಪಡಿಸಿದ್ದಾರೆ.
ವರ್ಷದ ಹಿಂದೆ ಉಡುಪಿಯಲ್ಲೂ ನಡೆದಿತ್ತು
2023ರ ಜುಲೈ ತಿಂಗಳಲ್ಲಿ ಉಡುಪಿ ನಗರದ ಕಣ್ಣಿನ ಚಿಕಿತ್ಸೆಯ ಕಾಲೇಜಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಮೂವರು ವಿದ್ಯಾರ್ಥಿನಿಯರು ತಮಾಷೆಗಾಗಿ ಮೊಬೈಲನ್ನು ಟಾಯ್ಲೆಟಲ್ಲಿಟ್ಟು ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಗದ್ದಲ, ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಆ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿತ್ತು. ವಿಪಕ್ಷಗಳ ಆರೋಪ ಜೋರಾದ ಕಾರಣ ಪ್ರಕರಣದ ತನಿಖೆಯನ್ನು ಸಿಓಡಿಗೆ ಒಪ್ಪಿಸಲಾಗಿತ್ತು.
An unsettling incident unfolded on Tuesday, May 7, at a private medical college located in the city, as a mobile phone was discovered in the women's restroom. The startling discovery came to light when the college's security guard, while conducting routine checks, noticed the mobile phone ringing persistently from within the deserted restroom. The guard confiscated the device and informed the authorities.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm