ಬ್ರೇಕಿಂಗ್ ನ್ಯೂಸ್
03-05-24 03:21 pm Bangalore Correspondent ಕ್ರೈಂ
ಬೆಂಗಳೂರು, ಮೇ.03: ವಿವಾಹಿತ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸಿದಲ್ಲದೆ, ಅದನ್ನು ನಿರಾಕರಿಸಿದಕ್ಕೆ ಆಕೆಯ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಅಬಾರ್ಜ್ (24) ಬಂಧಿತ ಆರೋಪಿ. ಕೆ.ಜಿ.ಹಳ್ಳಿಯಲ್ಲಿ ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿ ಹಾಗೂ ದೂರುದಾರ ವಿವಾಹಿತ ಮಹಿಳೆ ದೂರದ ಸಂಬಂಧಿಗಳಾಗಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಟೈಲರಿಂಗ್ ಕೆಲಸ ಮಾಡುತ್ತಿರುವ ಪತಿ ಹಾಗೂ ಮೂವರು ಮಕ್ಕಳ ಜತೆ ಸಾರಾಯಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಈ ಮಧ್ಯೆ ಆರೋಪಿ, ಕೆಲ ತಿಂಗಳಿಂದ ದೂರುದಾರ ಮಹಿಳೆಗೆ ಪತಿಯಿಂದ ವಿಚ್ಛೇದನ ಪಡೆದುಕೊಂಡು ತನ್ನೊಂದಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ವಿಚಾರವನ್ನು ತನ್ನ ಗಂಡನಿಗೂ ತಿಳಿಸಿದ್ದರು. ಹೀಗಾಗಿ ಹಿರಿಯರ ಸಮ್ಮುಖದಲ್ಲಿ ಮಹಿಳೆಗೆ ಮತ್ತೂಮ್ಮೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿ ಸಂಧಾನ ಮಾಡಲಾಗಿತ್ತು. ಹಳೇ ಚಾಳಿ ಮುಂದುವರಿಸಿದ್ದ ಆರೋಪಿ, ಮಹಿಳೆಯನ್ನು ಹಿಂಬಾಲಿಸಲಾರಂಭಿಸಿದ್ದ. ಮದುವೆಯಾಗುವಂತೆ ಪುನಃ ಪೀಡಿಸಲಾರಂಭಿಸಿದ್ದ. ದೂರುದಾರ ಮಹಿಳೆ ಹಾಗೂ ಕುಟುಂಬದವರು, ಏಪ್ರಿಲ್ 10ರಂದು ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಏಪ್ರಿಲ್ 11ರಂದು ನಸುಕಿನಲ್ಲಿ ಮನೆಗೆ ಬಂದಿದ್ದ ಆರೋಪಿ, ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿ ನೋಡಿದ್ದ ಅಕ್ಕ–ಪಕ್ಕದ ಮನೆಯವರು ದೂರುದಾರ ಮಹಿಳೆಗೆ ವಿಷಯ ತಿಳಿಸಿದ್ದರು. ಅವರು ಮನೆಗೆ ಬರುವಷ್ಟರಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟುಹೋಗಿದ್ದವು.
The Sampigehalli police have arrested a 25-year-old man for allegedly burning down a woman’s house after she spurned his wedding proposal.The fire, which occurred on April 11 when no one was at home near Saraipalya in northeast Bengaluru, was initially suspected to have been caused by a short circuit. Later, a fire report was filed at the Sampigehalli police station.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm