ಬ್ರೇಕಿಂಗ್ ನ್ಯೂಸ್
27-04-24 01:37 pm Bangalore Correspondent ಕ್ರೈಂ
ಬೆಂಗಳೂರು, ಏ 27: ಡೈವೋರ್ಸ್ ಕೊಡು ಇಲ್ಲದಿದ್ರೆ ನಮ್ಮ ಖಾಸಗಿ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಪತ್ನಿಗೆ ಬೆದರಿಸಿದ್ದ ಪತಿಯ ವಿರುದ್ಧ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ
ಹೆಣ್ಣೂರಿನ ನಿವಾಸಿ 43 ವರ್ಷದ ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ರಘುಪತಿ (49) ಹಾಗೂ ಆತನ ಲವರ್ ವಿರುದ್ಧ ಕೇಸ್ ದಾಖಲಾಗಿದೆ.
ಸಂತ್ರಸ್ತೆ ಹಾಗೂ ಆಕೆಯ ಪತಿ ರಘುಪತಿ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ. 2007ರಲ್ಲಿ ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಮದುವೆಯಾಗಿ ಹೆಣ್ಣೂರಿನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿವಾಹವಾದ ಆರಂಭದಲ್ಲಿ ದಂಪತಿ ಚೆನ್ನಾಗಿದ್ದರು. ನಂತರ ಪತಿ ಡ್ರಿಂಕ್ಸ್ ಮಾಡಿ ಪತ್ನಿಗೆ ಬೆದರಿಸಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ನಡುವೆ 2011ರಲ್ಲಿ ಸಂತ್ರಸ್ತೆ ಕೆಲಸದ ನಿಮಿತ್ತ ಲಂಡನ್ಗೆ ತೆರಳಿದಾಗ ದುಡ್ಡಿಗೆ ಬೇಡಿಕೆಯಿಟ್ಟಿದ್ದ. ದುಡ್ಡು ಕೊಡದಿದ್ದರೆ ತಮ್ಮಿಬ್ಬರ ಖಾಸಗಿ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದ. 2021ರಿಂದ ಮಹಿಳೆಯೊಬ್ಬರ ಜೊತೆಗೆ ರಘುಪತಿ ಅನೈತಿಕ ಸಂಬಂಧ ಹೊಂದಿದ್ದ.
ಇತ್ತೀಚೆಗೆ ಈ ವಿಚಾರ ಸಂತ್ರಸ್ತೆಯ ಗಮನಕ್ಕೆ ಬಂದು ಪತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಳು. “ನೀನು ದಪ್ಪವಾಗಿದ್ದಿಯಾ, ಹೀಗಾಗಿ ನನಗೆ ಅವಳೇ ಬೇಕು ಎಂದು ಪಟ್ಟು ಹಿಡಿದಿದ್ದ . ಡೈವೋರ್ಸ್ ನೀಡದಿದ್ದರೆ ತಮ್ಮ ನಡುವಿನ ಖಾಸಗಿ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ’ ಪತಿ ಮತ್ತೆ ಬೆದರಿಸುತ್ತಿದ್ದಾನೆ. ಕೆಲ ದಿನಗಳ ಹಿಂದೆ ನಾನು ಕೆಲಸಕ್ಕೆ ಹೊಗುತ್ತಿದ್ದಾಗ ಅಡ್ಡಗಟ್ಟಿ ವಿಚ್ಛೇದನ ಡೈವೋರ್ಸ್ ಪೀಡಿಸಿದ್ದ. ಇಲ್ಲದಿದ್ದರೆ ನಿನ್ನ ತಲೆಯನ್ನು ಕಡೆದು
ಕುಕ್ಕರ್ನಲ್ಲಿ ಬೇಯಿಸ್ತೀನಿ ಎಂದು ಧಮ್ಕಿ ಹಾಕಿದ್ದಾನೆ . ಮನೆಯ ಗ್ಯಾಸ್ ಸಿಲಿಂಡರ್ ಅನ್ನು ಬ್ಲಾಸ್ಟ್ ಮಾಡಿ ಸಾಯಿಸುವುದಾಗಿ ರಘುಪತಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ಹೆಂಡತಿ ಉಲ್ಲೇಖೀಸಿದ್ದಾಳೆ.
Bangalore Woman files complaint against husband for threating her to give divorce or killing her by chopping her head and making it fry in the cooker or sharing the intimate videos or pictures on social media.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm