ಬ್ರೇಕಿಂಗ್ ನ್ಯೂಸ್
08-04-24 10:49 pm Bangalore Correspondent ಕ್ರೈಂ
ಬೆಂಗಳೂರು, ಎ.8: ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಸಿಎಸ್ಆರ್ ಫಂಡ್ ತೆಗೆಸಿಕೊಡುತ್ತೇವೆಂದು ಹೇಳಿ ಬೆಂಗಳೂರಿನ ನಾಲ್ವರು ಸೇರಿ ಆಶ್ರಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮೋಸಗೊಳಿಸಿ ಅವರಿಂದಲೇ 15 ಲಕ್ಷ ಪೀಕಿಸಿದ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ಮುಂಬೈನಲ್ಲಿ ಬಿಎಸ್ಸಿ ಪದವಿ ಪಡೆದಿದ್ದ ಸುನೀತಾ(36), ತಮಿಳುನಾಡು ಮೂಲದ ಇಲೆಕ್ಟ್ರಿಕಲ್ ಇಂಜಿನಿಯರ್ ಜಯಕುಮಾರ್ (42), ಬನಶಂಕರಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿರುವ ಜಿತಿನ್ (20), ಬೆಂಗಳೂರಿನಲ್ಲಿ ಗುಜರಾತಿ ಢಾಬಾ ನಡೆಸುತ್ತಿರುವ ಮಂಗಳೂರು ಮೂಲದ ರಾಜೇಂದ್ರ ಹೆಗ್ಡೆ(56) ಬಂಧಿತರು.
ಜ್ಞಾನಜ್ಯೋತಿ ನಗರದಲ್ಲಿ ಶಂಕರಾನಂದ ಆಶ್ರಮ ನಡೆಸುತ್ತಿರುವ ಶಂಕರಾನಂದ ಮೂರ್ತಿ (67) ಮೋಸ ಹೋದವರು. ಇವರು ಮಾರ್ಚ್ 14ರಂದು ವಕೀಲರ ಕಚೇರಿಯೊಂದಕ್ಕೆ ತೆರಳಿದ್ದ ವೇಳೆ ಸುನೀತಾ ಮತ್ತು ಇತರರು ಭೇಟಿಯಾಗಿದ್ದರು. ಆರೋಪಿಗಳು ತಮ್ಮನ್ನು ಎಕ್ಸ್ ಪೆಡಿಟರ್ಸ್ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿದ್ದು ನಮ್ಮ ಕಂಪನಿಯಿಂದ ಕೋಟಿಗಟ್ಟಲೆ ಹಣವನ್ನು ಸಿಎಸ್ಆರ್ ಫಂಡ್ ಮೂಲಕ ಟ್ರಸ್ಟ್ ಗಳಿಗೆ ಕೊಡುತ್ತಾರೆ, ನಿಮ್ಮ ಟ್ರಸ್ಟ್ ವ್ಯಾಲಿಡ್ ಆಗಿದ್ದರೆ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದರು. ಇದಕ್ಕಾಗಿ ದಾಖಲೆ ಪತ್ರಗಳು, ಪ್ರಕ್ರಿಯೆಗಳಿಗಾಗಿ ಚಾರ್ಜ್ ಆಗುತ್ತದೆ, 15 ಲಕ್ಷ ರೂ. ಚಾರ್ಜ್ ಕಟ್ಟಿದರೆ ಕೋಟಿಗೂ ಹೆಚ್ಚಿನ ಸಿಎಸ್ಆರ್ ಫಂಡ್ ತೆಗೆಸಿಕೊಡುತ್ತೇವೆ ಎಂದಿದ್ದಾರೆ.
ಇದರಂತೆ, ಮೂರ್ತಿಯವರು ಅರ್ಜಿ ಇನ್ನಿತರ ಶುಲ್ಕವೆಂದು ಸುನೀತಾ ಹೇಳಿದ್ದ ಧನಲಕ್ಷ್ಮಿ ಟ್ರೇಡರ್ಸ್ ಹೆಸರಿಗೆ 15 ಲಕ್ಷ ರೂ.ವನ್ನು ಆರ್ ಟಿಜಿಎಸ್ ಮೂಲಕ ಪಾವತಿ ಮಾಡಿದ್ದರು. ಆರೋಪಿಗಳು ಮತ್ತೆ 15 ಲಕ್ಷ ರೂ.ವನ್ನು ಡಿಡಿ ಮಾಡಿದಲ್ಲಿ ಮತ್ತಷ್ಟು ಹಣ ಸಿಗುತ್ತದೆ ಎಂದು ಹೇಳಿದ್ದು ಶಂಕರಾನಂದ ಮೂರ್ತಿ ಅದನ್ನೂ ರೆಡಿ ಮಾಡಿಸಿದ್ದರು. ಡೀಡಿಯನ್ನು ಮಾತ್ರ ಕೊಟ್ಟಿರಲಿಲ್ಲ. ಮಾರ್ಚ್ 22ರಂದು ಕ್ರೆಗ್ ಪಾರ್ಕ್ ರಸ್ತೆಯ ಹೊಟೇಲ್ ಒಂದರಲ್ಲಿ ಇವರು ಮೀಟ್ ಆಗಿದ್ದರು. ಆರೋಪಿಗಳು ಅಲ್ಲಿದ್ದುಕೊಂಡು ಒಳಗಡೆ ನಮ್ಮ ಬಾಸ್ ಇದ್ದಾರೆ, ಈಗಷ್ಟೇ 15 ಲಕ್ಷ ಡಿಡಿ ಪಡೆದು ಮತ್ತೊಬ್ಬರಿಗೆ ಕೋಟಿಗೂ ಹೆಚ್ಚಿನ ಸಿಎಸ್ಆರ್ ಫಂಡ್ ನೀಡಿದ್ದಾರೆ ಎಂದು ನಂಬಿಸಿದ್ದಾರೆ. ನಿಮ್ಮ ಫಂಡ್ ಪೆಂಡಿಂಗ್ ಇದೆ ಎಂದಿದ್ದಾರೆ. ಇಷ್ಟಾಗುತ್ತಲೇ ಶಂಕರಾನಂದ ಮೂರ್ತಿ ತನ್ನ ಪರಿಚಯದ ವಕೀಲರನ್ನು ಸಂಪರ್ಕಿಸಿ, ವಿಷಯ ಹೇಳಿದ್ದಾರೆ. ವಕೀಲರು ಆರೋಪಿಗಳನ್ನು ಸಂಪರ್ಕಿಸಿದಾಗ, ಅವರನ್ನು ಬೆದರಿಸುವ ಯತ್ನ ಮಾಡಿದ್ದಾರೆ. ಅಲ್ಲದೆ, ಶಂಕರಾನಂದ ಅವರನ್ನೂ ಬೆದರಿಸಿದ್ದಾರೆ.
ಆರೋಪಿಗಳು ತಮ್ಮ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್, ಪ್ರತಿಷ್ಠಿತ ಕಂಪನಿಗಳ ದಾಖಲೆ ಪತ್ರಗಳನ್ನು ಮಾಡಿಕೊಂಡಿದ್ದು ತಾವು ಒರಿಜಿನಲ್ ಎಂದು ಹೇಳಿ ನಂಬಿಸಿದ್ದರು. ಅಲ್ಲದೆ, ಮೂರ್ತಿ ಅವರಲ್ಲಿ ಸಿಎಸ್ಆರ್ ಫಂಡ್ ಕೊಡಿಸುವುದಕ್ಕಾಗಿ ನಿಮ್ಮ ಟ್ರಸ್ಟ್ ಹೆಸರಲ್ಲಿರುವ 80 ಜಿ ತೆರಿಗೆ ವಿನಾಯ್ತಿ ಒದಗಿಸುವ ದಾಖಲೆ ಪತ್ರವನ್ನೂ ನೀಡುವಂತೆ ಕೇಳಿದ್ದರು. ಅಷ್ಟರಲ್ಲಿ ವಕೀಲರ ಸೂಚನೆಯಂತೆ ಮೂರ್ತಿ ಪೊಲೀಸರಿಗೆ ದೂರು ನೀಡಿದ್ದು, ನಾಲ್ವರು ಖದೀಮರು ಅರೆಸ್ಟ್ ಆಗಿದ್ದಾರೆ.
CSR funds, cheat charitable trust in Bangalore of 15 lakhs, four arrested by CCB police including person from Mangalore. Four people have been arrested by Halasur police station here on the charge of cheating under the pretext of donating crores of rupees to charitable trusts. Sunitha, Jayakumar, resident of Kancheepuram Palli Karne, Tamil Nadu, Jatin Aggarwal of Uttarahalli and Rajendra Hegde of Gujarat have been identified as the arrested accused.
03-02-26 05:34 pm
Bangalore Correspondent
Kamalakar Bhat Guruj Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
03-02-26 04:38 pm
Mangalore Correspondent
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm