ಬ್ರೇಕಿಂಗ್ ನ್ಯೂಸ್
25-06-23 11:11 am HK News Desk ಕ್ರೈಂ
ಚಿಕ್ಕಬಳ್ಳಾಪುರ, ಜೂನ್ 25: ಸಾಫ್ಟ್ ವೇರ್ ಇಂಜಿನಿಯರ್ನನ್ನು ಕಿಡ್ನಾಪ್ ಮಾಡಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಟೆಕ್ಕಿಯನ್ನು ಕಿಡ್ನಾಪ್ ಮಾಡಿದ ಬಳಿಕ ಮೂರು ದಿನಗಳ ರೆಸಾರ್ಟ್ವೊಂದರಲ್ಲಿ ಕೂಡಿ ಹಾಕಿದ್ದ ದುಷ್ಕರ್ಮಿಗಳು, ಆತನ ಮೇಲೆ ಹಲ್ಲೆ ಮಾಡಿದ ಎರಡು ಲ್ಯಾಪ್ ಟಾಪ್, ಮೂರು ಮೊಬೈಲ್, 12 ಗ್ರಾಂ ಬಂಗಾರದ ಚೈನ್ ಸೇರಿದಂತೆ 21 ಲಕ್ಷ ರೂಪಾಯಿ ಹಣ ವರ್ಗಾಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಖಾಸಗಿ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ವಿಜಯಸಿಂಗ್ ಎಂಬಾತನನ್ನು ಆತನ ಪ್ರಿಯತಮೆಯ ನೆರವಿನೊಂದಿಗೆ ದೇವನಹಳ್ಳಿಗೆ ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳು ಆತನನ್ನು ಅಲ್ಲಿಂದ ಕಿಡ್ನಾಪ್ ಮಾಡಿದ್ದರು. ಆ ಬಳಿಕ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಬಳಿ ಇರುವ ಕ್ಯೂ.ವಿ.ಸಿ ವಿಲ್ಲಾ ರೆಸಾರ್ಟ್ಗೆ ಕರೆತಂದಿದ್ದ ಆರೋಪಿಗಳು ಆತನನ್ನು ವಿಲ್ಲಾದ ರೂಮ್ ನಂಬರ್ 36ರಲ್ಲಿ ಕೂಡಿ ಹಾಕಿ ಮೂರು ದಿನಗಳ ಕಾಲ ಹಲ್ಲೆ ಮಾಡಿದ್ದಾರೆ.
ಮೂಲತಃ ಆಂಧ್ರ ಪ್ರದೇಶದ ಅನಂತಪುರ ನಿವಾಸಿಯಾಗಿರುವ ವಿಜಯಸಿಂಗ್ಗೆ ಜೂನ್ 16ರಿಂದ 18ರ ವರೆಗೂ ಮೂರು ದಿನಗಳ ಕಾಲ ಚಿತ್ರ ಹಿಂಸೆ ನೀಡಿದ್ದ ಆರೋಪಿಗಳು, ಆತನ ಬಳಿ ಬೆಲೆಬಾಳುವ ವಸ್ತುಗಳು ಸೇರಿದಂತೆ 21 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಟೆಕ್ಕಿ ವಿಜಯಸಿಂಗ್, ಪ್ರಿಯತಮೆ ಭಾವನಾ ರೆಡ್ಡಿ ಸೇರಿದಂತೆ ಪುಲ್ಲಾರೆಡ್ಡಿ, ಸುಬ್ರಮಣಿ, ನಾಗೇಶ ರೆಡ್ಡಿ, ಸಿದ್ದೇಶ , ಸುದೀರ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣದ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 506, 341, 504, 143, 149, 384, 323, 324 ಅಡಿ ಆರು ಮಂದಿಯ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತ ತೀವ್ರವಾಗಿ ಹಲ್ಲೆಗೊಳಗಾಗಿದ್ದ ವಿಜಯಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
An incident where a software engineer was kidnapped and robbed in a cinematic manner took place in Chikkaballapura. It has come to light that after the techie was kidnapped, the miscreants who had gathered in a resort for three days, attacked him and transferred 21 lakh rupees including two laptops, three mobile phones and a 12 gram gold chain.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm