ಬ್ರೇಕಿಂಗ್ ನ್ಯೂಸ್
17-02-23 10:42 pm HK News Desk ಕ್ರೈಂ
ನವದೆಹಲಿ, ಫೆ.17 : ಹರ್ಯಾಣದ ಭಿವಾನಿ ಎಂಬಲ್ಲಿ ಸುಟ್ಟು ಕರಕಲಾದ ಕಾರಿನ ಒಳಗೆ ಇಬ್ಬರ ಅಸ್ಥಿಪಂಜರ ಪತ್ತೆಯಾಗಿದ್ದು, ಪ್ರಕರಣ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದೆ.
ಸುಟ್ಟು ಹೋಗಿದ್ದ ಬೊಲೆರೋ ವಾಹನದಲ್ಲಿ ಪತ್ತೆಯಾಗಿರುವ ಯುವಕರನ್ನು ನಾಸಿರ್ (25) ಮತ್ತು ಜುನೈದ್ ಜುನಾ (35) ಎಂಬ ರಾಜಸ್ಥಾನದ ಭರತ್ಪುರ ಜಿಲ್ಲೆಯ ಘಟ್ಮೀಕಾ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಬಜರಂಗದಳದ ಜತೆ ನಂಟು ಹೊಂದಿರುವ ಗೋರಕ್ಷಕರು ಅವರಿಬ್ಬರನ್ನು ಅಪಹರಣ ಮಾಡಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿಗಳು ಗೋವುಗಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದೇ ವಿಚಾರಕ್ಕೆ ಕೊಲೆಯಾಗಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪ ನಿರಾಕರಿಸಿದ ಬಜರಂಗದಳ
ರಾಜಸ್ಥಾನದಿಂದ ಬುಧವಾರ ನಾಪತ್ತೆಯಾಗಿದ್ದ ಇಬ್ಬರನ್ನು ಕೊಂದು ಸುಟ್ಟು ಹಾಕಲಾಗಿದೆ ಎಂಬ ಆರೋಪದ ಬಗ್ಗೆ ಬಜರಂಗದಳ ಆಘಾತ ವ್ಯಕ್ತಪಡಿಸಿದೆ. ಈ ಘಟನೆಗೂ ತಮಗೂ ಯಾವ ಸಂಬಂಧವೂ ಇಲ್ಲ. ಯಾವುದೇ ಪುರಾವೆ ಇಲ್ಲದೆ ತನ್ನ ಸಂಘಟನೆ ಸದಸ್ಯರ ಬಗ್ಗೆ ಆರೋಪಿಸುವುದು ಸರಿಯಲ್ಲ ಎಂದು ಹೇಳಿದೆ.
ಘಟನೆ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಸಂತ್ರಸ್ತರ ಕುಟುಂಬದ ಸದಸ್ಯರು ನೀಡಿದ ದೂರಿನ ಅನ್ವಯ ರಾಜಸ್ಥಾನದ ಗೋಪಾಲಗಢ ಪೊಲೀಸ್ ಠಾಣೆಯಲ್ಲಿ ಅನಿಲ್, ಶ್ರೀಕಾಂತ್, ರಿಂಕು ಸೈನಿ, ಲೋಕೇಶ್ ಸಿಂಗ್ಲಾ ಮತ್ತು ಮೋಹಿತ್ ಅಲಿಯಾಸ್ ಮೋಣು ಮಣೇಸರ್ ಎಂಬ ಐದು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೃತ ಜುನೈದ್ ಗೋ ಕಳ್ಳಸಾಗಣೆಯ ಅಪರಾಧ ಹಿನ್ನೆಲೆ ಹೊಂದಿದ್ದ. ಆತನ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಮರಣೋತ್ತರ ಪರೀಕ್ಷೆ ಬಳಿಕ ಎರಡು ಶವಗಳನ್ನು ಘಟ್ಮೀಕಾ ಗ್ರಾಮದಲ್ಲಿನ ಅವರ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಅವರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಆದರೆ ಮೃತದೇಹಗಳ ಗುರುತು ಖಚಿತಡಿಸಿಕೊಳ್ಳಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ.
ಬರ್ಬರ ಹತ್ಯೆ ಪ್ರಕರಣವನ್ನು ಖಂಡಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
In a shocking incident, two skeletons were found in a charred bolero in Haryana this morning, it is expected either both died because the car caught fire or they were burnt alive, the police said. A missing complaint of both was filed in Bharatpur, Rajasthan and it was told to the police they were in a Bolero car and were kidnapped. The same Bolero car was found gutted in a fire in Haryana’s Bhiwani and two bodies were also found in the car.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm