ಬ್ರೇಕಿಂಗ್ ನ್ಯೂಸ್
11-01-23 02:08 pm Mangalore Correspondent ಕ್ರೈಂ
ಮಂಗಳೂರು, ಜ.11 : ಮಂಗಳೂರಿನಲ್ಲಿ ಭಾರೀ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಹತ್ವದ ಕಾರ್ಯಾಚರಣೆಯಲ್ಲಿ ಇಬ್ಬರು ವೈದ್ಯರು, ಎಂಬಿಬಿಎಸ್, ಬಿಡಿಎಸ್ ಮಾಡುತ್ತಿದ್ದ ಎಂಟು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೂಲತಃ ಇಂಗ್ಲೆಂಡ್ ಪ್ರಜೆಯಾಗಿದ್ದು ಎನ್ಆರ್ ಐ ಕೋಟಾದಲ್ಲಿ ಮಂಗಳೂರಿನಲ್ಲಿದ್ದುಕೊಂಡು ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಓದುತ್ತಿರುವ ನೀಲ್ ಕಿಶೋರಿಲಾಲ್ ರಾಮ್ ಜಿ ಈ ಜಾಲದ ಕಿಂಗ್ ಪಿನ್. ಈತನನ್ನು ನಾಲ್ಕು ದಿನಗಳ ಹಿಂದೆ ಬಂಟ್ಸ್ ಹಾಸ್ಟೆಲ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಬಂಧಿಸಲಾಗಿತ್ತಿ. ಈತನ ಮಾಹಿತಿ ಆಧರಿಸಿ ಮಂಗಳವಾರ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಎರಡು ಪ್ರತಿಷ್ಠಿತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಡಾ.ಸಮೀರ್(32), ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿರುವ ಡಾ.ನದಿಯಾ ಸಿರಾಜ್(24), ಆಂಧ್ರಪ್ರದೇಶ ಮೂಲದ ವರ್ಷಿನಿ ಪ್ರತಿ (27), ಸೈಕಿಯಾಟ್ರಿ ಎಂಡಿ ಮಾಡುತ್ತಿರುವ ಪಂಜಾಬ್ ಮೂಲದ ಡಾ.ಭಾನು ಧಹಿಯಾ (27), ಬಿಡಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿನಿ ಚಂಡೀಗಢದ ರಿಯಾ ಚಡ್ಡಾ(27), ಎಂಎಸ್ ಆರ್ಥೋ ಓದುತ್ತಿರುವ ದೆಹಲಿ ಮೂಲದ ಡಾ.ಕ್ಷಿತಿಜ್ ಗುಪ್ತ (25), ನಾಲ್ಕನೇ ವರ್ಷದ ಎಂಬಿಬಿಎಸ್ ಕಲಿಯುತ್ತಿರುವ ಪುಣೆ ಮೂಲದ ಡಾ.ಈರಾ ಬಾಸಿನ್ (23), ಬಿಸಿ ರೋಡ್ ಮಾರಿಪಳ್ಳ ನಿವಾಸಿ ಮಹಮ್ಮದ್ ರೌಫ್ ಗೌಸ್ (34) ಬಂಧಿತರು.
ಕಿಶೋರಿಲಾಲ್ 15 ವರ್ಷದಿಂದ ಎನ್ಆರ್ ಐ ಕೋಟಾದಲ್ಲಿದ್ದುಕೊಂಡು ಡೆಂಟಲ್ ಕಲಿಯುತ್ತಿದ್ದ. ಪ್ರತಿ ಬಾರಿ ಫೈಲ್ ಆಗಿ ಸದ್ಯಕ್ಕೆ ನಾಲ್ಕನೇ ವರ್ಷದಲ್ಲಿದ್ದಾನೆ. ಬಿಡಿಎಸ್ ಕೋರ್ಸ್ ಕಂಪ್ಲೀಟ್ ಮಾಡದೆ ಮಂಗಳೂರಿನಲ್ಲಿ ಅಪಾರ್ಟ್ಮೆಂಟಲ್ಲಿದ್ದು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಗಾಂಜಾ ಇನ್ನಿತರ ಡ್ರಗ್ಸ್ ಪೂರೈಸುತ್ತಿದ್ದ. ಬಂಧಿತರಲ್ಲಿ ನಾಲ್ವರು ಯುವತಿಯರಾಗಿದ್ದು ಆರು ಮಂದಿ ಯುವಕರು.
ಬಂಧಿತರು ಡ್ರಗ್ಸ್ ಪೆಡ್ಲಿಂಗ್ ಮತ್ತು ಸೇವನೆ ಮಾಡುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಎರಡು ದಿನಕ್ಕೆ ಕಸ್ಟಡಿ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಬಂಧಿತ ಯುವಕ- ಯುವತಿಯರು ಹಾಸ್ಟೆಲ್ ಬದಲು ತಮ್ಮದೇ ರೂಮ್ ಮಾಡಿಕೊಂಡು ವಾಸ ಇದ್ದರು. ಇವರು ಜೊತೆ ಸೇರಿಕೊಂಡು ಪಾರ್ಟಿಯನ್ನು ನಡೆಸುತ್ತಿದ್ದರು. ತಾವು ಸೇವನೆ ಮಾಡುತ್ತಿದ್ದುದಲ್ಲದೆ, ಕಾಲೇಜಿನ ಇತರ ವಿದ್ಯಾರ್ಥಿಗಳಿಗೂ ಪೂರೈಸುತ್ತಿದ್ದರು. ಇವರಿಗೆ ಮುಂಬೈ, ಆಂಧ್ರಪ್ರದೇಶದಿಂದ ಗಾಂಜಾ, ಎಂಡಿಎಂಎ ಡ್ರಗ್ಸ್ ಪೂರೈಕೆ ಆಗ್ತಾ ಇತ್ತು. ಕಳೆದ ಎರಡು ವರ್ಷದಲ್ಲಿ 400ಕ್ಕೂ ಹೆಚ್ಚು ಡ್ರಗ್ಸ್, ಗಾಂಜಾ ಕೇಸ್ ಪತ್ತೆಯಾಗಿದೆ. ಆ ಪೈಕಿ 360 ಸೇವನೆ ಮತ್ತು 60 ಕೇಸು ಪೆಡ್ಲಿಂಗ್ ಇದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
Mangalore Medical college drugs supply, 10 medical students including two doctors arrested by CCB police. Arrested are MBBS medical students and BDS dental students from prestigious colleges in the city. The arrested were drug peddlers and consumers. Two arrested have been taken to two days custody after producing them to the court.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm