ಬ್ರೇಕಿಂಗ್ ನ್ಯೂಸ್
27-12-22 12:01 pm Mangalore Correspondent ಕ್ರೈಂ
ಮಂಗಳೂರು, ಡಿ.27: ಶನಿವಾರ ರಾತ್ರಿ ಕಾಟಿಪಳ್ಳದಲ್ಲಿ ಫ್ಯಾನ್ಸಿ ಅಂಗಡಿಗೆ ನುಗ್ಗಿ ಹತ್ಯೆ ನಡೆಸಿದ್ದು ಮತ್ತೊಂದು ಕೋಮು ದ್ವೇಷದ ಹತ್ಯೆಯಾ ಅನ್ನುವ ಶಂಕೆ ಮೂಡಿತ್ತು. ಆದರೆ, ಎರಡೇ ದಿನದಲ್ಲಿ ಸುರತ್ಕಲ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು ಕೊಲೆಯ ಹಿಂದಿನ ರಹಸ್ಯವನ್ನೂ ಭೇದಿಸಿದ್ದಾರೆ. ಕೊಲೆಗೆ ಆ ಮಹಿಳೆಯ ಜೊತೆಗಿನ ಅಕ್ರಮ ಸಂಬಂಧವೇ ಕಾರಣ ಎನ್ನುವುದನ್ನು ಪತ್ತೆ ಮಾಡಿದ್ದಾರೆ.
ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಿವಾಸಿಯಾಗಿದ್ದ ಜಲೀಲ್, ಕೃಷ್ಣಾಪುರದಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ. ಫ್ಯಾನ್ಸಿ ಅಂಗಡಿ ಲತೀಫ್ ಎಂಬವರಿಗೆ ಸೇರಿದ್ದಾಗಿದ್ದು ಅದನ್ನು ಜಲೀಲ್ ಐದಾರು ವರ್ಷಗಳಿಂದ ನಡೆಸಿಕೊಂಡು ಹೋಗುತ್ತಿದ್ದ. ಸ್ಥಳೀಯ ಜಯಕಲಾ (ಹೆಸರು ಬದಲಿಸಿದೆ) ಎನ್ನುವ ಮಹಿಳೆಯ ಜೊತೆಗೆ ಅಂಗಡಿಯಲ್ಲಿ ಚಕ್ಕಂದ ಆಡುತ್ತಿದ್ದಾಗಲೇ ಯುವಕರ ಕೈಗೆ ಸಿಕ್ಕಿಬಿದ್ದಿದ್ದರು. ಆ ಸಂದರ್ಭದಲ್ಲಿ ಜಲೀಲ್ ಗೆ ಚೆನ್ನಾಗಿ ತದುಕಿ ಬಿಟ್ಟು ಕಳಿಸಿದ್ದರು.
ಇತ್ತ ಜಯಕಲಾಗೂ ಎಚ್ಚರಿಕೆ ನೀಡಿದ್ದರು. ಆದರೆ, ಆರು ವರ್ಷಗಳ ಹಿಂದೆಯೇ ಗಂಡನ ಜೊತೆಗೆ ಸಂಬಂಧ ಕಡಿದುಕೊಂಡಿದ್ದ ಆ ಮಹಿಳೆ ಸ್ವಲ್ಪ ಫಾರ್ವರ್ಡ್ ಆಗಿತ್ತು. ಸ್ಥಳೀಯ ಮಹಿಳೆಯೊಬ್ಬರ ಬಳಿ ಟೈಲರಿಂಗ್ ತರಬೇತಿಗೆಂದು ಸೇರಿ, ಅದರ ನಡುವೆ ಆಕೆಯದ್ದೇ ಜುವೆಲ್ಲರಿ ಪಡೆದು ಒಂದೂವರೆ ಲಕ್ಷ ರೂಪಾಯಿ ಹಿಡಿಸಿದ್ದೂ ಆಗಿತ್ತು. ಗಂಡನ ಬಿಟ್ಟ ನಂತರ ಜಲೀಲ್ ಜೊತೆಗೆ ಸಲುಗೆ ಹೊಂದಿದ್ದ ಜಯಕಲಾನತ್ತ ಹಲವರು ಕಣ್ಣು ಹಾಕಿದ್ದರು. ಈ ನಡುವೆ, ಜಲೀಲ್ ಅಂಗಡಿಯಲ್ಲಿ ಸಿಕ್ಕಿಬಿದ್ದ ಬಳಿಕ ಹಿಂದು ಸಂಘಟನೆ ಯುವಕರ ಕಣ್ಣು ಜಲೀಲ್ ಮೇಲೆ ಬಿದ್ದಿತ್ತು. ಇತ್ತೀಚೆಗೆ ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಶೈಲೇಶ್ ಪೂಜಾರಿ ಮತ್ತು ಲಕ್ಷ್ಮೀಶ ಅನ್ನೋರು ಸೇರಿ ಜಲೀಲ್ ಕೊಲೆಗೆ ಸಂಚು ರೂಪಿಸಿದ್ದರು.
ಮೊನ್ನೆ ಶನಿವಾರ ರಾತ್ರಿ ಮೂವರು ಒಂದು ಬೈಕಿನಲ್ಲಿ ಬಂದಿದ್ದು, ಇಬ್ಬರು ಫ್ಯಾನ್ಸಿ ಅಂಗಡಿಗೆ ಎಲ್ಲರೂ ನೋಡ ನೋಡುತ್ತಲೇ ಜಲೀಲ್ ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಶೈಲೇಶ್ ಮತ್ತಿತರರು ಸ್ಥಳೀಯರಿಗೆ ಮುಖ ಪರಿಚಯ ಇದ್ದುದರಿಂದ ಇಂಥದ್ದೇ ವ್ಯಕ್ತಿ ಕೃತ್ಯ ಎಸಗಿದ್ದಾನೆ ಅನ್ನೋದು ಸ್ಥಳೀಯರಿಗೂ ಗೊತ್ತಾಗಿತ್ತು. ಆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಹಿಂದೆ ಬಿದ್ದಿದ್ದರು. ಇಬ್ಬರು ಕೃತ್ಯ ಎಸಗಿದ್ದರೆ, ಅವರನ್ನು ಬೈಕಿನಲ್ಲಿ ಪಾರು ಮಾಡಿಸಲು ಸಹಕರಿಸಿದ್ದು ಪವನ್ ಅಲಿಯಾಸ್ ಪಚ್ಚು ಅನ್ನೋ ಯುವಕ. ಇದೀಗ ಪೊಲೀಸರು ಕೃತ್ಯ ಎಸಗಿರುವ ಶೈಲೇಶ್ ಪೂಜಾರಿ, ಸವಿನ್ ಕಾಂಚನ್ ಮತ್ತು ಪವನ್ ಎಂಬವರನ್ನು ಕಾಪು ಬಳಿಯಿಂದ ಬಂಧಿಸಿದ್ದಾರೆ. ಮುಂಬೈಗೆ ಪರಾರಿಯಾಗಲು ಸ್ಕೆಚ್ ಹಾಕಿದ್ದಾಗಲೇ ಅರೆಸ್ಟ್ ಆಗಿದ್ದಾರೆ. ಇದೇ ವೇಳೆ, ಇನ್ನೊಬ್ಬ ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಅಕ್ರಮ ಸಂಬಂಧವೇ ಕೊಲೆಗೆ ಕಾರಣ !
ಈ ಹಿಂದೆ ರೌಡಿ ಪಿಂಕಿ ನವಾಜ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಶೈಲೇಶ್ ಪೂಜಾರಿಯೂ ಒಬ್ಬ ಆರೋಪಿಯಾಗಿದ್ದ. ಆ ಪ್ರಕರಣದಲ್ಲಿ ಒಬ್ಬಾತನ ಪತ್ನಿಯ ಜೊತೆಗೆ ನವಾಜ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಆರೋಪದಲ್ಲಿ ಕೊಲೆಗೆ ಸಂಚು ಹೆಣೆಯಲಾಗಿತ್ತು. ಜಲೀಲ್ ಪ್ರಕರಣದಲ್ಲಿಯೂ ಹಿಂದು ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇರಿಸಿದ ಕಾರಣಕ್ಕೆ ನಾಲ್ವರು ಸೇರಿ ಆತನ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದರೆ ಇದಕ್ಕೆ ಬೇರಾವುದೇ ಶಕ್ತಿಗಳ ಕೈವಾಡ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಜಲೀಲ್ ಹತ್ಯೆಗೆ ಬಜಾರಿ ಮಹಿಳೆಯ ನೌಟಂಕಿ ಆಟವೇ ಕಾರಣ ಎನ್ನುವ ಅಂಶ ತನಿಖೆಯಲ್ಲಿ ಬಯಲಾಗಿದೆ. ಸದ್ಯಕ್ಕೆ ಆ ಮಹಿಳೆ ಸೇರಿ ಹಲವರನ್ನು ಪೊಲೀಸರು ವಶದಲ್ಲಿ ಇರಿಸಿಕೊಂಡಿದ್ದಾರೆ. ಈ ಮಹಿಳೆಗೂ ಕೊಲೆ ನಡೆಸಿದವರಿಗೂ ಕನೆಕ್ಷನ್ ಇತ್ತಾ ಎನ್ನುವ ಬಗ್ಗೆಯೂ ಶಂಕೆಯಿದ್ದು ಇನ್ನೊಬ್ಬ ಪ್ರಮುಖ ಆರೋಪಿ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳಲಿದೆ.
Surathkal Jaleel Murder case, illicit affair with Hindu Woman reason for Murder, Jaleel was caught red handed having affair a few month ago. He was beaten by the Hindu activist and the hindu woman was warned too. But as their affair continued it is said the gang plot the murder plan and attacked Jaleel at his fancy store and stabbed him to death. Jaleel was stabbed by two persons near his fancy store. Two assailants and one accused who helped them to escape after the stabbing have been arrested. The two assailants are habitual offenders who are rowdy sheeters in Surathkal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm