ಬ್ರೇಕಿಂಗ್ ನ್ಯೂಸ್
24-12-22 04:49 pm HK News Desk ಕ್ರೈಂ
ನವದೆಹಲಿ, ಡಿ 24: ಐಸಿಐಸಿಐ ಬ್ಯಾಂಕ್ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಶುಕ್ರವಾರ ಸಿಬಿಐ ಬಂಧಿಸಿದೆ. ವಿಡಿಯೋಕಾನ್ ಗ್ರೂಪ್ಗೆ 3,000 ಕೋಟಿಗೂ ಹೆಚ್ಚು ರೂಪಾಯಿ ಸಾಲ ಮಂಜೂರಾತಿ ಮಾಡುವಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚರ್ ಅವರನ್ನು ಸಿಬಿಐ ಬಂಧಿಸಿದೆ.
ಗ್ರಾಹಕರ ಮೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳು, ತೈಲ, ಅನಿಲ ಪರಿಶೋಧನಾ ಕಂಪನಿಯಾದ ವೀಡಿಯೋಕಾನ್ ಗ್ರೂಪ್ಗೆ ಚಂದಾ ಕೊಚ್ಚರ್ ಫೇವರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ 59 ವರ್ಷದ ಚಂದಾ ಕೊಚ್ಚರ್ ಅವರು 2018ರ ಅಕ್ಟೋಬರ್ನಲ್ಲಿ ಐಸಿಐಸಿಐ ಬ್ಯಾಂಕ್ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನವನ್ನು ತ್ಯಜಿಸಿದ್ದರು.
ಚಂದಾ ಕೊಚ್ಚರ್ರಿಂದ ಅಧಿಕಾರ ದುರ್ಬಳಕೆ ಆರೋಪ:
ಬ್ಯಾಂಕಿನ ನೀತಿ ಸಂಹಿತೆ ಮತ್ತು ಆಂತರಿಕ ನೀತಿಗಳನ್ನು ಚಂದಾ ಕೊಚ್ಚರ್ ಉಲ್ಲಂಘಿಸಿದ್ದು, ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಐಸಿಐಸಿಐ ಬ್ಯಾಂಕ್ ಕೆಲಸ ಮಾಡುತ್ತಿದ್ದ ಚಂದಾ ಕೊಚ್ಚರ್ ಅವರು, ಒಂದು ವರ್ಷದಲ್ಲೆ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
2012 ರಲ್ಲಿ ಐಸಿಐಸಿಐ ಬ್ಯಾಂಕ್ಗೆ ಅನುತ್ಪಾದಕ ಆಸ್ತಿಯಾಗಿರುವ ವಿಡಿಯೋಕಾನ್ ಗ್ರೂಪ್ಗೆ ₹ 3,250 ಕೋಟಿ ರೂ. ಸಾಲ ನೀಡಲಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಇದೀಗ ಸಿಬಿಐನಿಂದ ಕ್ರಿಮಿನಲ್ ಪಿತೂರಿ ಮತ್ತು ವಂಚಬೆ ಆರೋಪವನ್ನು ಚಂದಾ ಕೊಚ್ಚರ್ ಎದುರಿಸುತ್ತಿದ್ದಾರೆ.
ಪ್ರಕರಣದಲ್ಲಿ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಭಾಗಿ :
ಈ ಪ್ರಕರಣದಲ್ಲಿ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಮತ್ತು ಇತರ ಕುಟುಂಬಸ್ಥರು ಭಾಗಿಯಾಗಿದ್ದು, ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಐಸಿಐಸಿಐ ಬ್ಯಾಂಕ್ನಿಂದ ಸಾಲ ಪಡೆದ ನಂತರ ವೇಣುಗೋಪಾಲ್ ಧೂತ್ ನುಪವರ್ ರಿನ್ಯೂವಬಲ್ಸ್ನಲ್ಲಿ ಕೋಟಿಗಟ್ಟಲೆ ಹೂಡಿಕೆ ಮಾಡಿದ್ದಾರೆ. ಆದರೆ ಈ ವಿಚಾರ ಒಂದು ತಿಂಗಳ ನಂತರ ಬೆಳಕಿಗೆ ಬಂದಿತು.
ವಿಡಿಯೋಕಾನ್ಗೆ ₹ 300 ಕೋಟಿ ಮಂಜೂರು ಮಾಡಿದ್ದ ಚಂದಾ ಕೊಚ್ಚರ್ :
ಚಂದಾ ಕೊಚ್ಚರ್ ಸದಸ್ಯರಾಗಿದ್ದ ಸಮಿತಿಯು ಸಾಲವನ್ನು ತೆರವುಗೊಳಿಸಿದೆ ಎಂದು ಸಿಬಿಐ ಆರೋಪಿಸಿದೆ. ಮತ್ತೊಂದೆಡೆ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ವಿಡಿಯೋಕಾನ್ಗೆ ₹ 300 ಕೋಟಿ ಮಂಜೂರು ಮಾಡಿದ್ದಾರೆ. ಅಲ್ಲದೇ ವೇಣುಗೋಪಾಲ್ ಧೂತ್ ನುಪವರ್ನಿಂದ ಚಂದಾ ಕೊಚ್ಚರ್ನಿಂದ ಚಂದಾ ಕೊಚ್ಚರ್ ತಮ್ಮ ಪತಿ ಮೂಲಕ ಅಕ್ರಮ ವ್ಯವಹಾರ ನಡೆಸಿ ಲಾಭ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 20 ಬ್ಯಾಂಕ್ಗಳ ಒಕ್ಕೂಟದಿಂದ ಇಲ್ಲಿಯವರೆಗೂ ವಿಡಿಯೋಕಾನ್ ₹ 40,000 ಕೋಟಿ ರೂ. ಸಾಲ ಪಡೆದಿತ್ತು.
ಪ್ರಕರಣ ಸಂಬಂಧ 2019ರಲ್ಲಿ ಸಿಬಿಐನಿಂದ ಎಫ್ಐಆರ್ :
ಈ ಪ್ರಕರಣ ಕುರಿತು 2019ರಲ್ಲಿ ಸಿಬಿಐ ಎಫ್ಐಆರ್ ದಾಖಲು ಮಾಡಿತ್ತು. ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕ್ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿಗಳಿಗೆ ಸಾಲ ಮಂಜೂರಾತಿ ಮಾಡಿದ್ದಾರೆ ಎನ್ನಲಾಗಿತ್ತು.
ಐಸಿಐಸಿಐ ಬ್ಯಾಂಕ್ನಿಂದ ಸಾಲ ಪಡೆದ ಬಳಿಕ ವೇಣುಗೋಪಾಲ್ ಸುಪ್ರೀಂ ಎನರ್ಜಿ ಎಂಬ ಕಂಪನಿಗೆ ಹಣ ವರ್ಗಾಯಿಸಿದ್ದರು. ಅದರಲ್ಲಿ ಅವರು ಶೇ 90ರಷ್ಟು ಷೇರು ಹೊಂದಿದ್ದರು. ನಂತರ ಆ ಕಂಪನಿಯನ್ನು ದೀಪಕ್ ಕೊಚ್ಚಾರ್ ಅವರಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ. ವಿಡಿಯೊಕಾನ್ಗೆ ಐಸಿಐಸಿಐ ಬ್ಯಾಂಕ್ 3000 ಕೋಟಿ ರೂ.ಗೂ ಅಧಿಕ ಸಾಲ ನೀಡಿತ್ತು. ಆದರೆ ಸಾಲದ ಶೇ 80ರಷ್ಟು ಮೊತ್ತವೂ ಮರುವಾಪತಿಯಾಗಿಲ್ಲ. 2017ರಲ್ಲಿ ಈ ಸಾಲ ಸುಸ್ತಿಸಾಲ ಎಂದು ಘೋಷಿಸಲಾಗಿತ್ತು.
A Special Court of the Central Bureau of Investigation (CBI) on Saturday remanded former ICICI Bank CEO-MD Chanda Kochhar, husband Deepak Kochhar in CBI custody till December 26, Monday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm