ಬ್ರೇಕಿಂಗ್ ನ್ಯೂಸ್
25-11-22 12:02 pm Bangalore Correspondent ಕ್ರೈಂ
ಬೆಂಗಳೂರು, ನ.25: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಜೋಡಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಮತ್ತು ಆತನ ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಎಂದು ಗುರುತಿಸಲಾಗಿದೆ.
ಇಂದಿರಾನಗರದಲ್ಲಿ ನೈಲ್ ಬಾಕ್ಸ್ ಅಕಾಡೆಮಿ ನಡೆಸುತ್ತಿರುವ ಸ್ನೇಹಾ ಕೆ. ಭಾಗವತ್ ಎಂಬವರನ್ನು ಈ ಜೋಡಿ ಕಸ್ಟಮ್ಸ್ ಅಧಿಕಾರಿ ಹೆಸರಿನಲ್ಲಿ ವಂಚಿಸಿತ್ತು. ಸ್ನೇಹಾ ಕೆ. ಭಾಗವತ್ ನಡೆಸುತ್ತಿದ್ದ ಅಕಾಡೆಮಿಗೆ ಧನುಷ್ಯ ಟ್ರೇನಿಂಗ್ ಪಡೆಯಲು ಸೇರ್ಪಡೆಯಾಗಿದ್ದಳು. ಆಕೆ ತನ್ನ ಪರಿಚಯ ಮಾಡುತ್ತ, ತನ್ನ ಪತಿ ದರ್ಬಿನ್ ದಾಸ್ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೀಜ್ ಆಗಿರುವ ಚಿನ್ನದ ಒಡವೆಗಳು ಕಸ್ಟಮ್ಸ್ನಿಂದ ಕಡಿಮೆ ಬೆಲೆಗೆ ಅವರಿಗೆ ಲಭ್ಯವಿದೆ. ಅವುಗಳನ್ನು ನಿಮಗೂ ಕೊಡಿಸಬಹುದು ಎಂದು ನಂಬಿಸಿದ್ದಳು.
![]()
ಈ ನಂಬಿಕೆಯ ಮೇರೆಗೆ ಬೇರೆ ಬೇರೆ ದಿನಾಂಕಗಳಲ್ಲಿ ಸ್ನೇಹಾ ಕೆ. ಭಾಗವತ್ ಅವರಿಂದ ಒಟ್ಟು 68,00,000 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಧನುಷ್ಯ ಪಡೆದುಕೊಂಡಿದ್ದಳು. ಆದರೆ, ಚಿನ್ನದ ಒಡವೆಗಳನ್ನು ಮಾತ್ರ ಕೊಡಿಸಿರಲಿಲ್ಲ. ಅಷ್ಟೇ ಅಲ್ಲ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದಳು. ಇಷ್ಟರಲ್ಲಿ ಸ್ನೇಹಾಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ, ದೇವನಹಳ್ಳಿಯ ಯೂರೋ ಕಿಡ್ಸ್ ಶಾಲೆಯ ಶಿಕ್ಷಕಿ ಶ್ವೇತಾ ಎಂಬವರನ್ನು ಸಂಪರ್ಕಿಸಿದ ದರ್ಬಿನ್ ದಾಸ್, ತಾನು ಏರ್ಪೋರ್ಟ್ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಅಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಶ್ವೇತಾ ಅವರಿಂದ 96,750 ರೂಪಾಯಿ ಪಡೆದುಕೊಂಡಿದ್ದ. ಆದರೆ ಕೆಲಸ ಕೊಡಿಸಿರಲಿಲ್ಲ. ಹಣ ಪಡೆದುಕೊಂಡ ಬಳಿಕ ತಲೆಮರೆಸಿಕೊಂಡಿದ್ದ. ವಂಚನೆಗೆ ಒಳಗಾದ ಶ್ವೇತಾ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಕಡಿಮೆ ಬೆಲೆಗೆ ಚಿನ್ನಾಭರಣ, ಐಫೋನ್, ಲ್ಯಾಪ್ಟಾಪ್, ಗ್ಯಾಜೆಟ್ಸ್ ಕೊಡಿಸುತ್ತೇನೆ ಎಂದು ಹಲವರ ಬಳಿ ಬೇರೆ ಬೇರೆ ದಿನಾಂಕಗಳಲ್ಲಿ ನಗದು ಮತ್ತು ಆನ್ಲೈನ್ ಮೂಲಕ ಹಣ ಪಡೆದುಕೊಂಡಿರುವ ಆರೋಪ ಈ ಜೋಡಿಯ ಮೇಲಿದೆ.

ಉಡುಪಿಯಲ್ಲಿ ಬಂಧನ
ವಿವಿಧ ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರು ದರ್ಬಿನ್ ದಾಸ್ ಮತ್ತು ರಾಚೆಲ್ ಜೋಡಿಯನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ. ಈ ಜೋಡಿ ಇತ್ತೀಚೆಗೆ ಮಂಗಳೂರಿನ ಮೇರಿಹಿಲ್ಸ್ ನಲ್ಲಿ ಬಾಡಿಗೆ ಮನೆ ಪಡೆದಿತ್ತು. ಅಲ್ಲಿ 34.5 ಲಕ್ಷ ರೂಪಾಯಿ ನಗದು, 106.965 ಗ್ರಾಂ ತೂಕದ ಚಿನ್ನಾಭರಣ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
Kodigehalli police arrested a couple for allegedly cheating several persons in the city on the pretext of supplying them gold and gadgets seized by customs officials at Kempegowda International Airport. The accused are Dharbin Das alias Mohan Das alias Mohan Thas, 35, and his wife Rachel alias Dhanushya, 32, both from Tamil Nadu.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 11:33 am
HK News Staffer
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
22-03-26 07:30 pm
HK News Staffer
Russian oil Tanker, Mangalore: ರಷ್ಯಾದಿಂದ ಮಂಗಳ...
22-03-26 05:07 pm
ರಣಮಳೆಗೆ ಮನೆಯನ್ನ ಕಳಕೊಂಡಿದ್ದ ಕೊಲ್ಯದ ಬಡ ಕುಟುಂಬಕ್...
22-03-26 02:42 pm
Rape, Sandesh PG Inspector: ಇನ್ಸ್ ಪೆಕ್ಟರ್ ಸಂ...
22-03-26 12:10 pm
ಕಲ್ಲಡ್ಕದ ಫ್ಯಾಬ್ರಿಕೇಶನ್ ಉದ್ಯಮಿ ಸುಳ್ಯದ ಲಾಡ್ಜ್ ನ...
21-03-26 08:23 pm
23-03-26 11:17 am
HK News Staffer
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm