ಬ್ರೇಕಿಂಗ್ ನ್ಯೂಸ್
22-08-22 11:30 am HK News Desk ಕ್ರೈಂ
ಮಂಡ್ಯ, ಆಗಸ್ಟ್ 22 : ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಮಂಗಳೂರು ಮೂಲದ ಬಿಜೆಪಿ ಮುಖಂಡರೊಬ್ಬರು 50 ಲಕ್ಷ ಕಳಕೊಂಡಿದ್ದಲ್ಲದೆ, ಮತ್ತಷ್ಟು ಹಣಕ್ಕಾಗಿ ಪೀಡನೆಗೊಳಗಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಸಮಾಜಸೇವೆಯ ಸೋಗು ಹಾಕಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಸೆರೆಯಾಗಿದ್ದಾರೆ.
ಮಂಡ್ಯದಲ್ಲಿ ಶ್ರೀನಿಧಿ ಗೋಲ್ಡ್ ಜುವೆಲ್ಲರಿ ಹೊಂದಿರುವ ಮತ್ತು ಬಿಜೆಪಿಯಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಜಿಲ್ಲಾ ಸಂಚಾಲಕನಾಗಿರುವ ಜಗನ್ನಾಥ ಎಸ್. ಶೆಟ್ಟಿ ಹನಿಟ್ರ್ಯಾಪ್ಗೆ ಒಳಗಾದ ವ್ಯಕ್ತಿ. ಮಂಡ್ಯದ ಸುಭಾಷ್ ನಗರದ 8ನೇ ಕ್ರಾಸ್ ನಿವಾಸಿ ಸಲ್ಮಾಬಾನು ಮತ್ತು ಜಯಂತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸಲ್ಮಾಬಾನು ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದ್ದು, ಇತರ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ತಿಂಗಳ ಹಿಂದೆ ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಸಿಗೆ ನಿಂತಿದ್ದಾಗ, ನಾಲ್ವರು ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ ಸರದ ವಿಚಾರದಲ್ಲಿ ಮಾತಿಗೆ ಬಂದು ಪರೀಕ್ಷೆಗೆಂದು ಹೊಟೇಲಿಗೆ ಕರೆದೊಯ್ದಿದ್ದಾರೆ. ಬಳಿಕ ಜಗನ್ನಾಥ ಶೆಟ್ಟಿ ಅವರ ಜೊತೆ ಲಾಡ್ಜ್ ರೂಮ್ ಗೆ ಹೋಗಿದ್ದು ಅಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿ ನಾಲ್ಕು ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಅಂತಿಮವಾಗಿ ಜಗನ್ನಾಥ ಶೆಟ್ಟಿ 50 ಲಕ್ಷ ರೂಪಾಯಿ ನೀಡಿ ತೆರಳಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದು ಇದರಿಂದ ರೋಸಿಹೋದ ಜಗನ್ನಾಥ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಮತ್ತು ಆಕೆಗೆ ಸಾಥ್ ನೀಡಿದ್ದ ಜಯಂತ್ ಎಂಬಾತನನ್ನು ಬಂಧಿಸಿದ್ದಾರೆ.
Mangalore BJP leader Jaganath Shetty hooked in Honeytrap in Mandya after which he loses 50 lakhs and later he was blackmailed for more money later after police complaint the two have been arrested.
12-08-26 06:06 pm
HK Staffer
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm