ಬ್ರೇಕಿಂಗ್ ನ್ಯೂಸ್
19-08-22 08:38 pm HK News Desk ಕ್ರೈಂ
ಮುಂಬೈ, ಆಗಸ್ಟ್ 19: 21 ವರ್ಷದ ಯುವತಿಯೊಬ್ಬಳು 11 ವರ್ಷದ ಬಾಲಕಿಯನ್ನು ತನ್ನ ಮೂವರು ಸ್ನೇಹಿತರಿಗೆ ಒಪ್ಪಿಸಿ, ಅತ್ಯಾಚಾರ ಘಟನೆಗೆ ಸಾಕ್ಷಿಯಾದ ಪ್ರಸಂಗ ಮುಂಬೈನಲ್ಲಿ ನಡೆದಿದ್ದು, ಪೊಲೀಸರು ಕೇಸು ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ.
ಪಶ್ಚಿಮ ಮುಂಬೈ ನಗರದ ವಿರಾರ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 17ರಂದು ಘಟನೆ ನಡೆದಿದೆ. ಬಾಲಕಿ ಸಂಜೆ ಹೊತ್ತಿಗೆ ಮೊಬೈಲ್ ಅಂಗಡಿಯೊಂದಕ್ಕೆ ರಿಪೇರಿಗೆಂದು ತೆರಳಿದ್ದು ಈ ವೇಳೆ 21 ವರ್ಷದ ಪರಿಚಯದ ಯುವತಿ ಎದುರಾಗಿದ್ದಳು. ಆಕೆ ಬಾಲಕಿಯನ್ನು ಜೊತೆಗೆ ನಿಗೂಢ ಜಾಗವೊಂದಕ್ಕೆ ಕರೆದೊಯ್ದಿದ್ದು, ಅಲ್ಲಿಗೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಿದ್ದಾಳೆ.
ಆನಂತರ, ಹುಡುಗರು ಮತ್ತು ಯುವತಿ ಮಧ್ಯರಾತ್ರಿ ವೇಳೆಗೆ ಬಾಲಕಿಯನ್ನು ಗಣೇಶೋತ್ಸವಕ್ಕೆಂದು ಹಾಕಿರುವ ಪೆಂಡಾಲ್ ಬದಿಗೆ ಕೊಂಡೊಯ್ದು ಅಲ್ಲಿ ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಯುವಕರು ಸೇರಿ ಅತ್ಯಾಚಾರ ನಡೆಸಿದ್ದು, ಯುವತಿ ಬಾಲಕಿಯನ್ನು ಸೆಕ್ಸ್ ನಡೆಸಲು ಒಪ್ಪಿಸುವಂತೆ ಬಲವಂತ ಪಡಿಸಿದ್ದಾಳೆ. ಇನ್ನೊಬ್ಬ ಯುವಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ರಾತ್ರಿಯಿಡೀ ಕಿರುಕುಳ ನೀಡಿದ ಬಳಿಕ ಮರುದಿನ ಬೆಳಗ್ಗೆ ಬಾಲಕಿಯನ್ನು ಹೊರಗೆ ಬಿಟ್ಟಿದ್ದು, ಆಕೆ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ.
ಮನೆಮಂದಿ ವಿರಾರ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಯುವತಿ ಸೇರಿದಂತೆ ಮೂವರನ್ನು ದೂರು ದಾಖಲಾದ ಮೂರೇ ಗಂಟೆಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಯುವಕ ಕಾಲೇಜು ವಿದ್ಯಾರ್ಥಿ, ಇನ್ನೊಬ್ಬ ತರಕಾರಿ ವ್ಯಾಪಾರಿಯಾಗಿದ್ದ. ಇನ್ನೊಬ್ಬ ಆರೋಪಿ ಡ್ರಗ್ಸ್ ಡೀಲರ್ ಆಗಿದ್ದು, ಮೂವರೂ ಯುವತಿಯ ಸ್ನೇಹಿತರಾಗಿದ್ದರು. ಸ್ನೇಹಿತರ ಬಯಕೆಯಂತೆ ಯುವತಿಯೇ ಬಾಲಕಿಯನ್ನು ಸೆಕ್ಸ್ ನಡೆಸಲು ಕರೆತಂದಿದ್ದಳು.
An 11-year-old girl was gang-raped by three men, at the behest of her 21-year-old female friend in Mumbai’s Virar (West) area in the wee hours of Wednesday, August 17. Three of the accused, including the female friend, were arrested within six hours, police said.The incident took place when the victim had gone to a shop near her house to get her cell phone repaired at around 7 pm on Tuesday, August 16. There, she met her 21-year-old female friend, who took her for a stroll.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm