I Gave Him The Biggest Spraying Of His Life Inside The Changing Room Csk Legend Matthew Hayden Recalls First Meeting With Parthiv.
">ಬ್ರೇಕಿಂಗ್ ನ್ಯೂಸ್
02-05-22 01:26 pm Source: Vijayakarnataka ಕ್ರೀಡೆ
ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಸ್ಮರಿಸಿಕೊಂಡ ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್, ತಾವು ವಿಕೆಟ್ ಒಪ್ಪಿಸಿದ ಬಳಿಕ ಆತ ತನ್ನನ್ನು ಸ್ಲೆಡ್ಜ್ ಮಾಡಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಸಿಎಸ್ಕೆ ಮಾಜಿ ದಿಗ್ಗಜ ಮ್ಯಾಥ್ಯೂ ಹೇಡನ್, 2004ರ ವಿಬಿ ಸರಣಿಯ ಪ್ರಮುಖ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ತಮಗೆ ಸ್ಲೆಡ್ಜ್ ಮಾಡಿದ್ದ ಪ್ರಸಂಗವನ್ನು ತಮ್ಮ ಮಾಜಿ ಸಹ ಆಟಗಾರ ಮೈಕ್ ಹಸ್ಸಿ ಬಳಿ ಹಂಚಿಕೊಂಡಿದ್ದಾರೆ.
"ನೀವು ತುಂಬಾ ಒಳ್ಳೆಯ ಹುಡುಗ ಹಸ್ಸಿ. ತಾನು ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದೆ. ವಿಕೆಟ್ ತುಂಬಾ ಪ್ಲಾಟ್ ಆಗಿತ್ತು. ಈ ವೇಳೆ ನಾನು ಸ್ವಲ್ಪ ನರ್ವಸ್ ಆಗಿದ್ದು ನಿಜ. ಆ ಪಂದ್ಯದಲ್ಲಿ ಪಾರ್ಥಿವ್ 12ನೇ ಆಟಗಾರನಾಗಿ ಆಡುತ್ತಿದ್ದ. ತಾನು ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳುತ್ತಿದ್ದ ವೇಳೆ ಪಾರ್ಥಿವ್ ಪಟೇಲ್ ನಗು ಮೊಗದಲ್ಲಿ ಓಹೋ..ಓಹೋ ಎಂದು ತಮಗೆ ಸ್ಲೆಡ್ಜ್ ಮಾಡಿದ್ದರು. ಈ ವೇಳೆ ನಾನು, ಯಾರು ಈ ಬಾಲಕ? ಇನ್ನೂ ಎಲ್ಕೆಜಿ ಹುಡುಗನ ರೀತಿ ಇದ್ದಾನೆ ಎಂದು ಮನಸಿನಲ್ಲಿಯೇ ಅಂದುಕೊಂಡಿದ್ದೆ," ಎಂಬ ಸಂಗತಿಯನ್ನು ಹೇಡನ್ ನೆನಪಿಸಿಕೊಂಡರು.
"ಪಂದ್ಯದ ಬಳಿಕ ಒಂದೇ ಡ್ರೆಸ್ಸಿಂಗ್ ಕೊಠಡಿಯಲ್ಲಿಯೇ ಅವರು(ಪಾರ್ಥಿವ್ ಪಟೇಲ್) ಕಾಣಿಸಿಕೊಂಡರು ಹಾಗೂ ಪಂದ್ಯದಲ್ಲಿ ನಡೆದಿದ್ದ ಘಟನೆಯ ಬಗ್ಗೆ ಮಾತನಾಡದೆ ಎಲ್ಲವನ್ನು ನಿಯಂತ್ರಿಸಿದ್ದೆ," ಎಂದು ಮ್ಯಾಥ್ಯೂ ಹೇಡನ್ 18 ವರ್ಷಗಳ ಹಳೆಯ ಸಂಗತಿಯನ್ನು ಸ್ಮರಿಸಿಕೊಂಡರು.
ಮ್ಯಾಥ್ಯೂ ಹೇಡನ್ ಹಾಗೂ ಮೈಕ್ ಹಸ್ಸಿ ಅವರು ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಚೆಪಾಕ್ ಮೈದಾನದಲ್ಲಿ ಮ್ಯಾಥ್ಯೂ ಹೇಡನ್ ತಮ್ಮ ಆರಂಭಿಕ ಐಪಿಎಲ್ ದಿನಗಳಲ್ಲಿ ತರಬೇತಿ ನಡೆಸಿದ್ದ ವೇಳೆ ಭಾರತೀಯ ಆಟಗಾರರು ಭಯ ಬೀತರಾಗಿದ್ದ ಘಟನೆಯನ್ನು ಮೈಕ್ ಹಸ್ಸಿ ಇದೇ ವೇಳೆ ಬಹಿರಂಗಪಡಿಸಿದರು.
"ಚೆಪಾಕ್ನಲ್ಲಿ ತಮ್ಮ ಮೊದಲ ತರಬೇತಿಯಲ್ಲಿ ನಿಮ್ಮ ಹಿಂದೆ ನಾನು ಆಡಿದ್ದೆ. ಈ ವೇಳೆ ಭಾರತೀಯ ಬೌಲರ್ಗಳು ನಿಮಗೆ ಬೌಲ್ ಮಾಡಲು ಹಿಂದೇಟು ಹಾಕುತ್ತಿದ್ದರು. ಈ ವೇಳೆ ನಾನು ಅವರ ಬಳಿಕ ತೆರಳಿ ,' ನಿಮ್ಮ ಪಾಲಿಗೆ ಒಳ್ಳೆಯ ದಿನಗಳು ಬಾಯ್ಸ್, ನಿಜವಾಗಲೂ ಅವರು(ಮ್ಯಾಥ್ಯೂ ಹೇಡನ್) ತಂಬಾ ಒಳ್ಳೆಯರು' ಎಂದು ಅವರಿಗೆ ಹೇಳಿದ್ದೆ," ಎಂಬುದನ್ನು ಹಸ್ಸಿ ಸ್ಮರಿಸಿಕೊಂಡರು.
ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಐಪಿಎಲ್ ಆರಂಭಗೊಂಡು ಇಂದಿಗೆ 15 ವರ್ಷಗಳು ಪೂರ್ಣಗೊಳ್ಳಲಿದೆ. ಸಾಕಷ್ಟು ಪ್ರತಿಭೆಗಳಿಗೆ ಐಪಿಎಲ್ ಟೂರ್ನಿಯು ವೇದಿಕೆ ಕಲ್ಪಿಸಿದೆ. ಇದರ ಜೊತೆಗೆ ಭಾರತ ಹಾಗೂ ವಿದೇಶಿಯರು ಸೇರಿದಂತೆ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಮುಂಬೈ ಇಂಡಿಯನ್ಸ್ 5 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಸ್ಥಿರ ಪ್ರದರ್ಶನ ತೋರಿರುವ ತಂಡವಾಗಿದೆ. ಆಡಿರುವ 13 ಆವೃತ್ತಿಗಳಲ್ಲಿ 11 ಟೂರ್ನಿಗಳಲ್ಲಿ ಸಿಎಸ್ಕೆ ಪ್ಲೇಆಫ್ಸ್ ತಲುಪಿತ್ತು. ಅಂದಹಾಗೆ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಮ್ಯಾಥ್ಯೂ ಹೇಡನ್ ಮತ್ತು ಮೈಕ್ ಹಸ್ಸಿ ಜೊತೆಯಾಗಿ ಆಡಿದ್ದರು. ಈ ವೇಳೆ ಹಲವು ಯುವ ಪ್ರತಿಭೆಗಳು ಈ ಇಬ್ಬರು ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿದ್ದರು.
I Gave Him The Biggest Spraying Of His Life Inside The Changing Room Csk Legend Matthew Hayden Recalls First Meeting With Parthiv.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm