ವಿರಾಟ್‌ ಕೊಹ್ಲಿ ದಾಖಲೆ ಪುಡಿ-ಪುಡಿ ಮಾಡಿದ ಕನ್ನಡಿಗ ಕೆ.ಎಲ್‌ ರಾಹುಲ್‌!

20-04-22 02:33 pm       Source: Vijayakarnataka   ಕ್ರೀಡೆ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ನಡುವಣ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ನೂತನ ಮೈಲುಗಲ್ಲು...

ಲಖನೌ ಸೂಪರ್‌ ಜಯಂಟ್ಸ್ ನಾಯಕ ಕೆ.ಎಲ್‌ ರಾಹುಲ್‌ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 6000 ರನ್‌ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆಯುವ ಮೂಲಕ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಇಲ್ಲಿನ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ದದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ ಈ ಸಾಧನೆ ಮಾಡಿದರು. 182 ರನ್‌ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್ ಪರ ಇನಿಂಗ್ಸ್ ಆರಂಭಿಸಿದ ರಾಹುಲ್‌ 30 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

LSG captain K L Rahul fined for breach of IPL code of conduct | Deccan  Herald

ಟಿ20 ಕ್ರಿಕೆಟ್‌ನಲ್ಲಿ 6000 ರನ್‌ ಮೈಲುಗಲ್ಲು ಸ್ಥಾಪಿಸಲು ಕೆ.ಎಲ್ ರಾಹುಲ್‌ ಒಟ್ಟು 179 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇದರೊಂದಿಗೆ 184 ಇನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿರುವ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಲಖನೌ ಸೂಪರ್‌ ಜಯಂಟ್ಸ್‌ ನಾಯಕ ಹಿಂದಿಕ್ಕಿದ್ದಾರೆ.

ಒಟ್ಟಾರೆ ಈ ಸಾಧನೆ ಮಾಡಿರುವವರ ಪಟ್ಟಿಯಲ್ಲಿ ಕೆ.ಎಲ್‌ ರಾಹುಲ್‌ ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ ಸ್ಥಾನದಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್‌(162 ಇನಿಂಗ್ಸ್‌) ಇದ್ದರೆ, ಎರಡನೇ ಸ್ಥಾನದಲ್ಲಿ ಪಾಕಿಸ್ತಾನ ನಾಯಕ ಬಾಬರ್‌ ಆಝಮ್‌(165 ಇನಿಂಗ್ಸ್‌) ಇದ್ದಾರೆ.

Virat Kohli needs a break, cannot lose his services with a fried brain:  Ravi Shastri - Sports News

ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಕೆ.ಎಲ್‌ ರಾಹುಲ್‌ 2022ರ ಐಪಿಎಲ್‌ ಟೂರ್ನಿಯಲ್ಲಿ ಶತಕ ಸಿಡಿಸಿದ್ದರು. ಆ ಮೂಲಕ ಪ್ರಸಕ್ತ ಅವೃತ್ತಿಯಲ್ಲಿ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ರಾಜಸ್ಥಾನ್‌ ರಾಯಲ್ಸ್ ತಂಡದ ಜೋಸ್‌ ಬಟ್ಲರ್‌ ಈ ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ್ದಾರೆ.

ಇನ್ನು ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ ತಂಡ, ಆರಂಭಿಕ ಆಘಾತ ಅನುಭವಿಸಿದ ಹೊರತಾಗಿಯೂ ನಾಯಕ ಫಾಫ್‌ ಡು ಪ್ಲೆಸಿಸ್‌(96) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.

ಬಳಿಕ ಗುರಿ ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಜಾಶ್‌ ಹೇಝಲ್‌ವುಡ್‌ ಆರಂಭಿಕ ಆಘಾತ ನೀಡಿದ್ದರು. ಕ್ವಿಂಟನ್ ಡಿ ಕಾಕ್‌ ವಿಕೆಟ್‌ ಬಹುಬೇಗ ಉರುಳಿತು. ನಂತರ ಕೆ.ಎಲ್‌ ರಾಹುಲ್‌ 30 ರನ್ ಸಿಡಿಸಿ ವಿಕೆಟ್‌ ಒಪ್ಪಿಸಿದರೆ, ಕೃಣಾಲ್ ಪಾಂಡ್ಯ ಮಿಂಚಿ ಮರೆಯಾದರು. ಅಂತಿಮವಾಗಿ ಹೇಝಲ್‌ವುಡ್‌ (25ಕ್ಕೆ 4) ಅವರ ಮಾರಕ ದಾಳಿಗೆ ಲಖನೌ ಸೂಪರ್‌ ಜಯಂಟ್ಸ್ ತಂಡ 163 ರನ್‌ಗಳಿಗೆ ಸೀಮಿತವಾಯಿತು.

LSG vs RCB: Josh Hazlewood admits being lucky as umpire didn't signal his  wide delivery

ಇಲ್ಲಿಯವರೆಗೂ ಆಡಿರುವ 7 ಪಂದ್ಯಗಳಲ್ಲಿ ಆರ್‌ಸಿಬಿ ತಂಡ 5ರಲ್ಲಿ ಗೆಲುವು ಪಡೆದಿದ್ದು, 10 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಮತ್ತೊಂದೆಡೆ ಲಖನೌ ಸೂಪರ್‌ ಜಯಂಟ್ಸ್‌ ತಂಡ ಇಷ್ಟೇ ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರರಲ್ಲಿ ಸೋಲು ಅನುಭವಿಸಿದೆ.

Rcb Vs Lsg, Lsg Skipper Kl Rahul Surpasses Virat Kohli To Become Fastest Indian To Score 6000 T20 Runs.