ಬ್ರೇಕಿಂಗ್ ನ್ಯೂಸ್
01-04-22 01:45 pm Source: Vijayakarnataka ಕ್ರೀಡೆ
ಮುಂಬೈ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2022ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಆರನೇ ಪಂದ್ಯದಲ್ಲಿ ರೂಪಿಸಿದ್ದ ಫೀಲ್ಡಿಂಗ್ ರಣತಂತ್ರವನ್ನು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ಡೈರೆಕ್ಟರ್ ಮೈಕ್ ಹೇಸನ್ ಬಹಿರಂಗಪಡಿಸಿದ್ದಾರೆ.
ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ತಂಡ 205 ರನ್ ಗಳಿಸಿದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಬುಧವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ಶಕ್ತಿಯುತವಾಗಿ ಕಮ್ಬ್ಯಾಕ್ ಮಾಡಿದ್ದರು.
ವಾನಿಂದು ಹಸರಂಗ, ಮೊಹಮ್ಮದ್ ಸಿರಾಜ್ ಸೇರಿದಂತೆ ಆರ್ಸಿಬಿ ಬೌಲರ್ಗಳ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ಕೇವಲ 128 ರನ್ಗಳಿಗೆ ಆಲ್ಔಟ್ ಆಗಿತ್ತು. ಬಳಿಕ ಸುಲಭ ಗುರಿ ಹಿಂಬಾಲಿಸಿದ್ದ ಆರ್ಸಿಬಿ ಕಠಿಣ ಹೋರಾಟ ನಡೆಸಿ ಮೂರು ವಿಕೆಟ್ ಗೆಲುವು ಸಾಧಿಸಿತ್ತು.
ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದಲ್ಲಿ ಆರ್ಸಿಬಿ ತಂಡಕ್ಕೆ ಫೀಲ್ಡಿಂಗ್ಗೆ ಸಂಬಂಧಿಸಿದಂತೆ ಅದ್ಭುತ ರಣತಂತ್ರವನ್ನು ಬೌಲರ್ಗಳಿಗೆ ಹೇಳಿಕೊಡಲಾಗಿತ್ತು. ಅದರಂತೆ ಆರ್ಸಿಬಿ ತಂಡ ಕೋಲ್ಕತಾ ವಿರುದ್ಧ ಯಶಸ್ವಿಯಾಗಿತ್ತು. ಈ ಬಗ್ಗೆ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಮೈಕ್ ಹೇಸನ್ ಫೀಲ್ಡಿಂಗ್ ಪ್ಲಾನ್ ಬಗ್ಗೆ ಸರಾಗವಾಗಿ ವಿವರಿಸಿದ್ದಾರೆ.
"ಪಂದ್ಯದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಗಲಿ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ. ಕೆಕೆಆರ್ ವಿರುದ್ಧ ಸಕ್ಸಸ್ ಆಗಿರುವುದರ ಹಿಂದೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ನಾಯಕ, ಬೌಲರ್ಗಳು ಒಂದು ಕಡೆ ಫೀಲ್ಡ್ ಸೆಟ್ ಹೇಗೆ ಮಾಡಬೇಕೆಂಬ ರಣತಂತ್ರವನ್ನು ನಾವು ರೂಪಿಸಿದ್ದೆವು. ಯಾವ ಫೀಲ್ಡ್ ನಿಮಗೆ ಬೇಕು ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ನಿಮ್ಮ ಎಸೆತಕ್ಕೆ ಮೂರು ಬಗೆಯ ಫೀಲ್ಡ್ ಸೆಟ್ ಅನ್ನು ಇಲ್ಲಿ ನೀಡಲಾಗುತ್ತದೆ," ಎಂದು ಹೇಸನ್ ವಿವರಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್ಗಳಿಂದ ಗೆಲುವು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 5 ರಂದು ಟೇಬಲ್ ಟಾಪರ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯಕ್ಕೆ ಇನ್ನೂ ನಾಲ್ಕು ದಿನಗಳ ಸಮಯಾವಕಾಶವಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಇನ್ನಷ್ಟು ತಯಾರಿ ನಡೆಸಲಿದೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ ತಂಡದ ಗೆಲುವಿನಲ್ಲಿ ಯುವ ವೇಗಿ ಆಕಾಶ್ ದೀಪ್ ಕೂಡ ಮಹತ್ತರ ಪಾತ್ರವಹಿಸಿದ್ದಾರೆ. 25ರ ಪ್ರಾಯದ ವೇಗಿ ಸ್ವಲ್ಪ ದುಬಾರಿಯಾದರೂ ಮೂರು ನಿರ್ಣಾಯಕ ವಿಕೆಟ್ಗಳನ್ನು ಕಬಳಿಸಿದ್ದರು. ಆರಂಭಿಕ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ವಿಕೆಟ್ ಪಡೆಯುವ ಮೂಲಕ ಕೆಕೆಆರ್ಗೆ ಆರಂಭಿಕ ಆಘಾತ ನೀಡಿದ್ದರು.
"ಮೊದಲನೇ ಸಂಗತಿ ಏನೆಂದರೆ ನಾವು ಓಪನ್ ನೆಟ್ಸ್ನಲ್ಲಿ ಬೌಲ್ ಮಾಡಿದ್ದೇವೆ. ಇದು ಮೋಜಿನಿಂದ ಕೂಡಿತ್ತು ಹಾಗೂ ನಮಗೆ ಕೊಟ್ಟಿದ್ದ ಯೋಜನೆಯನ್ನು ನಾವು ಹಿಂಬಾಲಿಸಿದ್ದೆವು. ರನ್ ಕೊಟ್ಟರೂ ಕೂಡ ಪ್ಲಾನ್ಗೆ ಅಂಟಿಕೊಂಡು ಬೌಲ್ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಇದರಲ್ಲಿ ಕೆಲ ಎಸೆತಗಳು ಸರಿಯಾದ ಜಾಗದಲ್ಲಿ ಪಿಚ್ ಆಗಿದ್ದವು, ಇನ್ನು ಕೆಲವು ಎಸೆತಗಳಲ್ಲಿ ರನ್ ಬಿಟ್ಟುಕೊಟ್ಟಿದ್ದೆ. ಆದರೆ, ಯೋಜನೆಯಂತೆ ಬೌಲ್ ಮಾಡಿದ್ದಕ್ಕೆ ನನಗೆ ವಿಶ್ವಾಸ ಹೆಚ್ಚಾಗಿದೆ," ಎಂದು ಆಕಾಶ್ ದೀಪ್ ತಿಳಿಸಿದ್ದಾರೆ.
Ipl 2022 You Got Have At Least Three Options In Terms Of Deliveries You Can Bowl Mike Hesson Explains Rcbs Bowling Drill Before Kkr Game.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm