ಬ್ರೇಕಿಂಗ್ ನ್ಯೂಸ್
06-02-22 01:19 pm Source: Vijayakarnataka ಕ್ರೀಡೆ
ಬೆಂಗಳೂರು : ಬರೋಬ್ಬರಿ 2 ವರ್ಷಗಳ ಬಳಿಕ ಟೀಮ್ ಇಮಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಸೆಣಸಲು ಸಜ್ಜಾಗಿವೆ. ಈ ಬಾರಿ ಟೀಮ್ ಇಂಡಿಯಾ ಪ್ರವಾಸಿ ವಿಂಡೀಸ್ ವಿರುದ್ಧ ಬರೋಬ್ಬರಿ 6 ಸೀಮಿತ ಓವರ್ಗಳ ಪಂದ್ಯಗಳನ್ನು ಆಡಲಿದೆ.
ಮೊದಲಿಗೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ಕೊರೊನಾ ವೈರಸ್ ಸೋಂಕಿನ 3ನೇ ಅಲೆ ಹಿನ್ನೆಲೆಯಲ್ಲಿ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್ ಸರಣಿಯ ಪಂದ್ಯಗಳು ಆಯೋಜನೆ ಆಗಲಿದ್ದು, ಮೊದಲ ಒಡಿಐ ಫೆ.6ರಂದು ಜರುಗಲಿದೆ. ನಂತರ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಆಯೋಜನೆ ಆಗಲಿದೆ.
ಅಂದಹಾಗೆ ಒಡಿಐ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಎರಡು ವಿಶ್ವಕಪ್ ಗೆದ್ದು ವಿಶ್ವದ ಅತ್ಯಂತ ಬಲಿಷ್ಠ ತಂಡವಾಗಿದ್ದ ವೆಸ್ಟ್ ಇಂಡೀಸ್ ಈಗ ಅದೇ ಖದರ್ ಉಳಿಸಿಕೊಂಡಿಲ್ಲ. 2011ರ ಬಳಿಕ ಟೀಮ್ ಇಂಡಿಯಾ ಮಾಜಿ ವಿಶ್ವ ಚಾಂಪಿಯನ್ಸ್ ವಿಂಡೀಸ್ ಎದುರು ಪೂರ್ಣ ಪ್ರಾಬಲ್ಯ ಮೆರೆಯುತ್ತಾ ಬಂದಿರುವುದು ಇದಕ್ಕೆ ಹಿಡಿದ ಕೈಗನ್ನಡಿ.
ರೋಹಿತ್-ದ್ರಾವಿಡ್ಗೆ ಎದುರಾಗಿರುವ ಕಠಿಣ ಸವಾಲು ಬಹಿರಂಗಪಡಿಸಿದ ಕರೀಮ್!
ಅಂದಹಾಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಕದನಗಳಲ್ಲಿ ಭಾರತೀಯ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಬೌಲರ್ಗಳ ಟಾಪ್ 5 ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಹರ್ಭಜನ್ ಸಿಂಗ್ (ಆಫ್ ಸ್ಪಿನ್ನರ್)
ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ ಟರ್ಬನೇಟರ್ ಖ್ಯಾತಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವಿಂಡೀಸ್ ಬ್ಯಾಟ್ಸ್ಮನ್ಗಳ ನಿದ್ರೆ ಕೆಡಿಸಿದ ಭಾರತೀಯ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ. ಹರ್ಭಜನ್ ಸಿಂಗ್, ವಿಂಡೀಸ್ ವಿರುದ್ಧ ಆಡಿದ 31 ಪಂದ್ಯಗಳಲ್ಲಿ ಬರೋಬ್ಬರಿ 33 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಸಲುವಾಗಿ ಬರೋಬ್ಬರಿ 265.1 ಓವರ್ಗಳನ್ನು ಎಸೆದಿದ್ದಾರೆ. ಭಜ್ಜಿ ಭಾರತ ತಂಡದ ಪರ 236 ಒಡಿಐ ಪಂದ್ಯಗಳನ್ನಾಡಿ 269 ವಿಕೆಟ್ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 31ಕ್ಕೆ 5 ವಿಕೆಟ್ಗಳನ್ನು ಪಡೆದಿರುವುದು ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
ಮೊಹಮ್ಮದ್ ಶಮಿ (ಬಲಗೈ ವೇಗಿ)
ಸದ್ಯ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೂಡ ವಿಂಡೀಸ್ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ವೆಸ್ಟ್ ಇಂಡೀಸ್ ಎದುರು ಅತಿ ಹೆಚ್ಚು ಒಡಿಐ ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮೊಹಮ್ಮದ್ ಶಮಿ ಕೇವಲ 18 ಪಂದ್ಯಗಳಲ್ಲಿ ಎಸೆದ 149.3 ಓವರ್ಗಳಲ್ಲಿ 22.54ರ ಸರಾಸರಿಯಲ್ಲಿ 37 ವಿಕೆಟ್ಗಳನ್ನು ಪಡೆದಿದ್ದಾರೆ. ನಾಲ್ಕು ಬಾರಿ ಇನಿಂಗ್ಸ್ ಒಂದರಲ್ಲಿ 4 ವಿಕೆಟ್ಗಳನ್ನು ಕಿತ್ತ ಸಾಧನೆ ಮಾಡಿರುವುದು ವಿಶೇಷ. ಆದರೆ, ಮುಂಬರುವ ಸರಣಿಯಿಂದ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರೂ ವಿಶ್ರಾಂತಿ ಪಡೆದಿದ್ದಾರೆ.
ರವೀಂದ್ರ ಜಡೇಜಾ (ಆಲ್ರೌಂಡರ್)
ಮೂರನೇ ಸ್ಥಾನದಲ್ಲಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ 41 ವಿಕೆಟ್ಗಳನ್ನು ಉರುಳಿಸಿದ್ದಾರೆ. ಭಾರತ ತಂಡ ಕಂಡ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, ವೆಸ್ಟ್ ಇಂಡೀಸ್ ಎದುರು ಆಡಿದ 29 ಪಂದ್ಯಗಳಲ್ಲಿ 41 ವಿಕೆಟ್ಗಳನ್ನು ಉರುಳಿಸಿ ಕುಂಬ್ಳೆ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ. ದುರದೃಷ್ಟವಶಾತ್ ಗಾಯದ ಸಮಸ್ಯೆ ಕಾರಣ ಮುಂಬರುವ ಸರಣಿಯಿಂದ ಜಡೇಜಾ ಹೊರಗುಳಿದಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಜಡೇಜಾ ಗಾಯಗೊಂಡಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಪಟ್ಟಿದ್ದಾರೆ.
ಅನಿಲ್ ಕುಂಬ್ಳೆ (ಲೆಗ್ ಸ್ಪಿನ್ನರ್)
ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಒಡಿಐ ಕ್ರಿಕೆಟ್ನಲ್ಲಿ ವಿಂಡೀಸ್ ಎದುರು ಭರ್ಜರಿ ಪ್ರದರ್ಶನ ನಿಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಮುನ್ನ ಜಂಬೊ ಖ್ಯಾತಿಯ ಮಾಜಿ ಲೆಗ್ ಸ್ಪಿನ್ನರ್ ವಿಂಡೀಸ್ ಎದುರು 41 ವಿಕೆಟ್ಗಳನ್ನು ಸಂಪಾದಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ಮತ್ತು ಒಡಿಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಕುಂಬ್ಳೆ, ವೆಸ್ಟ್ ಇಂಡೀಸ್ ಎದುರು ಒಡಿಐನಲ್ಲಿ ಒಟ್ಟು 223 ಓವರ್ಗಳನ್ನು ಎಸೆದು 23.74ರ ಸಾರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ. ಇನಿಂಗ್ಸ್ ಒಂದರಲ್ಲಿ ಒಮ್ಮೆ 5 ವಿಕೆಟ್ ಸಾಧನೆ ಮೆರದಿರುವುದು ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನ. 1993ರ ಹೀರೊ ಕಪ್ ಫೈನಲ್ನಲ್ಲಿ 12ಕ್ಕೆ 6 ವಿಕೆಟ್ ಕಿತ್ತು ಮಿಂಚಿದ್ದರು.
ಕಪಿಲ್ ದೇವ್ (ಆಲ್ ರೌಂಡರ್)
1983ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಚಾಂಪಿಯನ್ಸ್ ಪಟ್ಟ ಗೆದ್ದುಕೊಟ್ಟ ನಾಯಕ ಹಾಗೂ ಅಪ್ರತಿಮ ಆಲ್ರೌಂಡರ್ ಕಪಿಲ್ ದೇವ್, ದೈತ್ಯ ವೆಸ್ಟ್ ಇಂಡೀಸ್ ತಂಡ ತನ್ನ ಕೀರ್ತಿಯ ಉತ್ತುಂಗದಲ್ಲಿ ಇದ್ದ ಸಂದರ್ಭದಲ್ಲಿ ನಡುಕ ಹುಟ್ಟಿಸಿದ್ದ ವೇಗಿಯಾಗಿದ್ದಾರೆ. ಹರಿಯಾಣ ಹರಿಕೇನ್ ಖ್ಯಾತಿಯ ಮಾಜಿ ಆಲ್ರೌಂಡರ್ ವೆಸ್ಟ್ ಇಂಡೀಸ್ ಎದುರು 42 ಪಂದ್ಯಗಳನ್ನಾಡಿ ಬರೋಬ್ಬರಿ 43 ಒಡಿಐ ವಿಕೆಟ್ಗಳನ್ನು ಪಡೆದಿದ್ದಾರೆ. ವಿಂಡೀಸ್ ಎದುರು ಇನಿಂಗ್ಸ್ ಒಂದರಲ್ಲಿ ನಾಲ್ಕು ವಿಕೆಟ್ಗಳಮನ್ನು ಪಡೆದಿರುವುದು ಕಪಿಲ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.
Ind Vs Wi, From Kapil Dev To Anil Kumble, Team India Bowlers With Most Odi Wickets Against West Indies.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm